Home » BBK Season 11: ಕೇಸ್, ಕೋರ್ಟ್ ನನ್ನನ್ನು ಕುಗ್ಗಿಸಲ್ಲ ಎನ್ನುತ್ತಾ, 14 ನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಗೆ ಎಂಟ್ರಿ

BBK Season 11: ಕೇಸ್, ಕೋರ್ಟ್ ನನ್ನನ್ನು ಕುಗ್ಗಿಸಲ್ಲ ಎನ್ನುತ್ತಾ, 14 ನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಗೆ ಎಂಟ್ರಿ

1 comment

BBK Season 11: ಹಿಂದೂ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವ ಕರಾವಳಿಯ ಚೈತ್ರಾ ಕುಂದಾಪುರ ಅವರಿಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಟಿಕೆಟ್‌ ದೊರಕಿದೆ. 14 ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದೆ.

ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬುವವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಕೊಡಿಸುವುದಾಗಿ ಹೇಳಿ ಐದು ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಇವರ ಮೇಲಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚೈತ್ರಾ ಬಂಧನ ಕೂಡಾ ಆಗಿತ್ತು. ಮೊದಲಿಗೆ ಇವರು ತಲೆ ಮರೆಸಿಕೊಂಡಿದ್ದು, ನಂತರ ಇವರನ್ನು ಪತ್ತೆಮಾಡಿ ಬಂಧನ ಮಾಡಲಾಯಿತು.

ಚೈತ್ರಾ ಬಂಧನ 2023 ರಲ್ಲಿ ಆಗಿತ್ತು. ಪೊಲೀಸರು ನ್ಯಾಯಾಲಯಕ್ಕೆ 800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು. ಚೈತ್ರಾಗೆ ಡಿಸೆಂಬರ್‌ನಲ್ಲಿ ಜಾಮೀನು ದೊರಕಿತ್ತು. ಈ ಪ್ರಕರಣ ಇನ್ನೂ ಕೋರ್ಟ್‌ನಲ್ಲಿದೆ.

ಹಿಂದೂಜಾಗರಣ ವೇದಿಕೆ ಮುಖಂಡ ಗುರು ಪ್ರಸಾದ್‌ ಪಂಜ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೂಡಾ 2018 ರಲ್ಲಿ ಚೈತ್ರ ಜೈಲುಪಾಲಾಗಿದ್ದರು. ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಸಂಪುಟ ನರಸಿಂಹ ಮಠದ ನಡುವಿನ ವಿವಾದವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದರ ಕುರಿತು ಭಾರೀ ವೈರತ್ವ ಮಾತು ಉಂಟಾಗಿತ್ತು.

You may also like

Leave a Comment