Home » ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ ಗೊತ್ತಾ?

ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ ಗೊತ್ತಾ?

0 comments

ಬಿಗ್ ಬಾಸ್ 9 ಆರಂಭವಾಗಿ 2 ವಾರಗಳೇ ಕಳೆದವು. ಇದರಲ್ಲಿ 9 ನವೀನರು ಮತ್ತು 9 ಪ್ರವೀಣರು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ ಅನುಪಮ ಗೌಡ ಕೂಡ ಒಬ್ಬರು. 2017 ರಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರ ಸ್ಪರ್ದಿಯಾಗಿದ್ದಾರೆ.

ನಿನ್ನ ನಡೆದ ವಾರದ ಕಥೆ ಕಿಚ್ಚನ ಜೊತೆ ಎಲ್ಲಿ ಕಿಚ್ಚನ ಚಪ್ಪಾಳೆ ಅನುಪಮ ಗೌಡರಿಗೆ ಸಿಕ್ಕಿದೆ. ಅದಾದ ಅನುಪಮಾ ಗೌಡ ತುಂಬಾ ಭಾವಕರಾದರು. ಯಾಕೆಂದರೆ ಸುದೀಪ್ ಅವರು ಕೊಟ್ಟಂತಹ ಕಾರಣಗಳು ಭಾವುಕವಾಗಿತ್ತು.

ಎರಡನೇ ವಾರ ವಜ್ರಕಾಯ ತಂಡದ ಕ್ಯಾಪ್ಟನ್ ಅಗಿ ಪ್ರತಿಯೊಬ್ಬರಿಗೂ ಸ್ಪರ್ಧಿಸಲು ಅವಕಾಶ ಕೊಟ್ಟು ಗೆಲ್ಲುವುದಕ್ಕೆ ಬಿಗ್ ಸಪೋರ್ಟ್‌ ಆಗಿದ್ದರು. ಅಲ್ಲ ತಮ್ಮ ಟೀಂನಲ್ಲಿರುವವರು ಕ್ಯಾಪ್ಟನ್ ಆಗಬೇಕು ಎಂದು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ಕೂಲ್ ಕ್ಯಾಪ್ಟನ್ ಆಗಿ ತನ್ನ ಕೆಲಸವನ್ನು ಮಾಡಿದ್ದಾರೆ ಎಂಬುದು ಸುದೀಪ್ ಅವರ ಅಭಿಪ್ರಾಯವಾಗಿತ್ತು.

ಈ ಸಂದರ್ಭದಲ್ಲಿ ಅನುಪಮ ಗೌಡ “ನಾನು ಮೊದಲಿನ ಸೀಸನ್ ಕಿಂತ ಈಗ ತುಂಬಾ ಬದಲಾಗಿದ್ದೇನೆ. ಸ್ಟ್ರಾಂಗ್ ಕೂಡ ಆಗಿದ್ದೇನೆ. ಅದನ್ನು ಜನರು ಗಮನಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸುದೀಪ್ ಸರ್ ಗಮನಿಸಿದ್ದೀರಾ. ತುಂಬಾ ಖುಷಿ ಆಗ್ತಾ ಇದೇ ಅಂತ” ಭಾವುಕರಾದರು ಅನುಪಮ ಗೌಡ.

ನೋಡಬೇಕು ಮುಂದಿನ ವಾರ ಯಾರಿಗೆ ಸಿಗಲಿದೆ ಕಿಚ್ಚನ ಚಪ್ಪಾಳೆ ಅಂತ.

You may also like

Leave a Comment