Home » Bigg Boss Kannada-11: ‘ಪ್ಲೀಸ್ ನನ್ನ ಅಂಡರ್ವೇರ್ ಮುಟ್ಟಬೇಡಿ’ – ಕ್ಯಾಪ್ಟನ್ ಹಂಸಗೆ ಲಾಯರ್ ಜಗದೀಶ್ ಮನವಿ ; ಹಾಗಿದ್ರೆ ಹಂಸ ಮಾಡಿದ್ದೇನು?

Bigg Boss Kannada-11: ‘ಪ್ಲೀಸ್ ನನ್ನ ಅಂಡರ್ವೇರ್ ಮುಟ್ಟಬೇಡಿ’ – ಕ್ಯಾಪ್ಟನ್ ಹಂಸಗೆ ಲಾಯರ್ ಜಗದೀಶ್ ಮನವಿ ; ಹಾಗಿದ್ರೆ ಹಂಸ ಮಾಡಿದ್ದೇನು?

373 comments

Bigg Boss Kannada- 11: ಬಿಗ್‌ಬಾಸ್‌ ಕನ್ನಡ – 11 2ನೇ ವಾರಕ್ಕೆ ಕಾಲಿಟ್ಟಿದೆ. ಮೊದಲವಾರದಲ್ಲಿ ನಡೆದ ಗಲಾಟೆ-ಗದ್ದಲಗಳನ್ನ ಬಗೆಹರಿಸಿದ ಕಿಚ್ಚ ಸುದೀಪ್‌, ಸ್ಪರ್ಧಿಗಳ ಜೊತೆ ಸಖತ್‌ ಎಂಜಾಯ್‌ ಕೂಡ ಮಾಡಿದರು. ಮನೆಯ ಸಿಬ್ಬಂದಿಗೆ ನೈಸ್ ಆಗಿ ಕಿವಿ ಹಿಂಡುವ ಜೊತೆಗೆ ಅಬ್ಬರಿಸಿ ಬೊಬ್ಬಿರಿದಿದ್ದ ಲಾಯರ್ ಜಗದೀಶ್ ಗೆ ಸಖತ್ ಕೌಂಟ್ರು ಕೊಟ್ಟಿದ್ದರು. ಹೀಗಾಗಿ ಜಗದೀಶ್ ಬಾಲ ಕೊಂಚ ತುಂಡಾದಂತೆ ಕಾಣುತ್ತಿದೆ. ಆದರೆ ಈ ಬೆನ್ನಲ್ಲೇ ಜಗದೀಶ್ ಮನೆಯ ಕ್ಯಾಪ್ಟನ್ ಹಂಸಗೆ ತನ್ನ ಅಂಡರ್ವೇರ್ ಮುಟ್ಟದಂತೆ ಮನವಿ ಮಾಡಿದ್ದಾರೆ. ಹಾಗಿದ್ರೆ ಹಂಸ(Hamsa) ಏನು ಮಾಡಿದ್ರು? ಜಗದೀಶ್ ಹೀಗ್ಯಾಕಂದ್ರು?

ಮೊದಲ ವಾರದಲ್ಲಿ ಲಾಯರ್ ಜಗದೀಶ್(Lawyer Jagadish) ಮಹಿಳೆಯರ ಒಳ ಉಡುಪು ಬಗ್ಗೆ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರು ತಮ್ಮ ಒಳ ಉಡುಪಿನ ಬಗ್ಗೆಯೇ ಮಾತನಾಡಿದ್ದಾರೆ. ಅದೂ ಕೂಡ ಕ್ಯಾಪ್ಟನ್ ಹಂಸ ಬಳಿ !! ಹೌದು, ಬಿಗ್‌ಬಾಸ್‌ಮನೆಯ ಕ್ಯಾಪ್ಟನ್‌ ಆಗಿ ನೇಮಕಗೊಂಡರುವ ಹಂಸ ನರಕಕ್ಕೆ ಹೋಗಿರುವ ಜಗದೀಶ್‌ ಅವರ ವಸ್ತುಗಳನ್ನೆಲ್ಲ ಕಳಿಸಿಕೊಡುವ ಹೊಣೆ ಹೊತ್ತಿದ್ದಾರೆ. ಈ ಸಂದರ್ಭದಲ್ಲಿ ಅಂಡರ್ವೇರ್ ವಿಚಾರ ಬಂದಿದೆ.

ʼಕ್ಯಾಪ್ಟನ್‌ ಹಂಸಾ ಅವರಿಗೆ ಧಿಕ್ಕಾರ..ಧಿಕ್ಕಾರʼ ಎನ್ನುತ್ತ ಜಗದೀಶ್‌ ಹೋಗುತ್ತಿರುತ್ತಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಹಂಸ ʼಸರ್‌ ಯಾವುದು ನಿಮ್ಮ ಶಾಂಪೂʼ ಎಂದು ಕೇಳುತ್ತಾರೆ. ಆಗ ಜಗದೀಶ್‌ ʼಮೇಡಂ, ಮೂರು ಇದೆ, ಅದರಲ್ಲಿ ಗ್ರೀನ್‌ ಕಲರ್‌ʼ ಎನ್ನುತ್ತಾರೆ. ಆಗ ಹಂಸ ಅವರು ʼಇಲ್ಲಿ (ಸ್ವರ್ಗ) ಇನ್ನೇನೆಲ್ಲ ಬಿಟ್ಟಿದ್ದೀರಿ ಹೇಳಿ, ಇನ್ನೇನು ಬೇಕು ನಿಮಗೆʼ ಕೇಳುತ್ತಾರೆ. ಆಗ ಜಗದೀಶ್‌ ಪ್ರತಿಯಾಗಿ ʼಅಷ್ಟೇ ಬಿಡಿ, ನನ್ನ ಅಂಡರ್‌ವೇರ್‌ ಅಲ್ಲಿದೆ..ಆದರೆ ನಾನೇ ಬರ್ತೇನೆ ತೆಗೆದುಕೊಂಡು ಹೋಗೋಕೆ, ನನ್ನ ಅಂಡರ್‌ವೇರ್‌ ನೀವು ಮುಟ್ಟೋದು ಬೇಡ, ನಾನು ಅಷ್ಟೆಲ್ಲ ಸೇವೆ ಮಾಡಿಸಿಕೊಳ್ಳುವುದಿಲ್ಲ. ದಯವಿಟ್ಟು ನನ್ನ ಅಂಡರ್‌ವೇರ್‌ ತರಬೇಡಿ, ಅದು ನನ್ನ ಪ್ರೈವಸಿʼ ಎಂದು ಹೇಳುತ್ತಾರೆ. ಹಾಗೆ ಹೇಳಿದಾಗ ಹಂಸ ಅವರು ಜಗದೀಶ್‌ರತ್ತ ಒಂದು ನೋಟ ಬೀರಿ ಅಲ್ಲಿಂದ ಹೋಗುತ್ತಾರೆ. ಅತ್ತ..ಜಗದೀಶ್‌ ಅವರು ʼನಾನೆಷ್ಟು ಹಿಂಸೆ ಕೊಡ್ತೇನೆ ಅಲ್ವಾʼ ಎನ್ನುತ್ತ ಹೋಗಿದ್ದಾರೆ. ಲಾಯರ್‌ ಜಗದೀಶ್‌ ಬೇಕಂತ್ಲೇ ಹೀಗೆಲ್ಲ ಮಾಡ್ತಿದ್ದಾರೆನೋ ಅನ್ನಿಸುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

You may also like

Leave a Comment