2
BBK-12: ಬಿಗ್ ಬಾಸ್ ಸ್ಪರ್ಧಿ ಆಗಿರುವ ಗಿಲ್ಲಿ ನಟ ಹೊರಗಡೆ ತನ್ನದೇ ಆದ ಹೊಸ ಕ್ರೇಜ್ ಸೃಷ್ಟಿಸುತ್ತಿದ್ದಾರೆ. ಅವರಿಗೆ ಗೊತ್ತಿಲ್ಲದಂತೆ ಹೊರ ಪ್ರಪಂಚದಲ್ಲಿ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಬಿಗ್ ಬಾಸ್ ವಿನ್ನರ್ ಅವರೇ ಆಗಬೇಕೆಂದು ಅನೇಕರು ಆಸೆಪಟ್ಟು ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಷನ್ ಕೂಡ ಮಾಡುತ್ತಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕೂಡ ಗಿಲ್ಲಿ ಪರ ವೋಟ್ ಕೇಳುತ್ತಿದ್ದಾರೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಹನುಮಂತು ಕೂಡ ಗಿಲ್ಲಿ ಪರ ವೋಟ್ ಕೇಳಿದ್ದಾರೆ.
ಅದೊಂದು ಸ್ಟೇಜ್ ಈವೆಂಟ್. ಆ ಕಾರ್ಯಕ್ರಮಕ್ಕೆ ಬಂದಿದ್ದ ಹನುಮಂತ ಲಮಾಣಿ ”ಎಲ್ಲರೂ ಬಿಗ್ ಬಾಸ್ ನೋಡ್ತಿದ್ದೀರೋ, ಇಲ್ವೋ? ನಿಮ್ಮ ವೋಟು ಯಾರಿಗೆ?” ಎಂದು ವೇದಿಕೆ ಮೇಲೆಯೇ ಕೇಳಿದ್ದಾರೆ. ಆಗ ಆಡಿಯೆನ್ಸ್ ಕಡೆಯಿಂದ ”ಗಿಲ್ಲಿ… ಗಿಲ್ಲಿ..” ಎಂದು ಜೋರಾಗಿ ಕೇಳಿಸಿದ್ಮೇಲೆ ಹನುಮಂತ ಲಮಾಣಿ ಥಂಬ್ಸ್ ಅಪ್ ಮಾಡಿದ್ದಾರೆ.
