Home » BIGG BOSS KANNADA OTT : ನಾನು ಬಳಸಿ ಬಿಟ್ಟಿರುವ “ಟಿಶ್ಯೂ” ರಾಕೇಶ್ ಅಡಿಗ – ಸೋನು ಗೌಡ

BIGG BOSS KANNADA OTT : ನಾನು ಬಳಸಿ ಬಿಟ್ಟಿರುವ “ಟಿಶ್ಯೂ” ರಾಕೇಶ್ ಅಡಿಗ – ಸೋನು ಗೌಡ

by Mallika
0 comments

ಬಿಗ್ ಬಾಸ್ ಶೋ ಓಟಿಟಿ ನಲ್ಲಿ ಪ್ರಸಾರವಾಗಿ ಆಗಲೇ ವಾರ ಆಗೋಕೆ ಬಂತು. ಈ ಶೋನಲ್ಲಿ ಎಲ್ಲರೂ ತಮ್ಮ ನಿಜ ಸ್ವರೂಪ ಅಂದರೆ ಅಸಲಿ ಮುಖ ತೋರಿಸೋಕೆ ಶುರು ಮಾಡಿದ್ದಾರೆ. ಇಲ್ಲಿ ಎರಡು ದಿನದಿಂದ ಸ್ಫೂರ್ತಿ ಗೌಡ, ಸೋನು ಗೌಡ ಮಧ್ಯೆ ಜಗಳವಾಗುತ್ತಿದೆ. ಈ ಜಗಳಕ್ಕೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ರಾಕೇಶ್ ಅಡಿಗ ಅವರು ಕಾರಣ ಆಗಿರುತ್ತಾರೆ. ಏಕೆಂದರೆ ಸ್ಫೂರ್ತಿ ಗೌಡ ಅವರು ರಾಕೇಶ್ ಹಿಂದೆ ಬಿದ್ದಿರೋದು ಸೋನುಗೆ ಇಷ್ಟವಾಗುತ್ತಿಲ್ಲ. ಇದನ್ನು ತಿಳಿದ ಸ್ಫೂರ್ತಿ ಅವರು ಬೇಕುಂತಲೇ ಸೋನು ಅವರನ್ನು ಉರಿಸೋ ಶತ ಪ್ರಯತ್ನ ಮಾಡುತ್ತಿರುತ್ತಾರೆ.

ಸೋನು ಗೌಡ ಅವರ ಸ್ನೇಹಿತನಾಗಿದ್ದ ರಾಕೇಶ್ ಈಗ ಸ್ಫೂರ್ತಿ ಗೌಡ ಕಡೆಗೆ ವಾಲಿದ್ದು, ಅದ್ಯಾಕೋ ಸೋನು ಗೆ ಇಷ್ಟ ಆಗಿಲ್ಲ. ಹಾಗಾಗಿ ತಕರಾರು ಪದೇ ಪದೇ ಟಾಂಟ್ ಕೊಡೋ ಕೆಲಸ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿದೆ. ಅಷ್ಟು ಮಾತ್ರವಲ್ಲದೇ ಸ್ಫೂರ್ತಿ ಗೌಡ ಅವರು ರಾಕೇಶ್ ಅಡಿಗ ಹೆಸರು ಇಟ್ಟುಕೊಂಡು ಸೋನು ಗೌಡ ಅವರನ್ನು ಕೆಣಕೋದು ಎದ್ದು ಕಾಣುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ಏನೇ ಜಗಳ ನಡೆದರೂ ಅಲ್ಲಿ ಸೋನು ಗೌಡ ಅವರ ಹಾಜರಿ ಖಂಡಿತ ಇದ್ದೇ ಇರುತ್ತೆ. ಇದು ರಾಕೇಶ್ ಅಡಿಗ ಅವರ ವಿಚಾರದಲ್ಲಿ ತುಂಬಾನೇ ಇದೆ. ಈ ವಿಚಾರವಾಗಿಯೇ ಸ್ಫೂರ್ತಿ ಗೌಡ, ಸೋನು ಗೌಡ ಮಧ್ಯೆ ಸಣ್ಣ ಮಾತಿನ ಚಕಮಕಿ ನಡೆಯುತ್ತಿರುತ್ತದೆ.

ಈತನ್ಮಧ್ಯೆ ಸ್ಫೂರ್ತಿ ಗೌಡ ಅವರು ರಾಕೇಶ್ ನನ್ನ ಹುಡುಗ ಎಂದು ಕರೆದಿದ್ದಾರೆ. “ಟಿಶ್ಯು ಯೂಸ್ ಮಾಡಿದ ಮೇಲೆ ಏನು ಮಾಡ್ತಾರೆ ಅಂತ ಸೋನು ಕೇಳಿದಳು, ಆಗ ನಾನು ಕಸದ ಬುಟ್ಟಿಗೆ ಹಾಕ್ತಾರೆ ಅಂತ ಹೇಳಿದೆ. ಅದೇ ಟಿಶ್ಯು ನಿಂಗೆ ಕೊಟ್ಟಿರೋದು ಅಂತ ಹೇಳ್ತಾಳೆ’ ಎಂದು ರಾಕೇಶ್ ಮುಂದೆ ಸ್ಫೂರ್ತಿ ಹೇಳಿದ್ದಾರೆ. ಆಗ ಸೋನು, “ನನ್ನ ಹುಡುಗ ನನ್ನ ಹುಡುಗ ಅಂತ ಸ್ಫೂರ್ತಿ ಹೇಳಿದ್ಳು, ನಾನು ಬಳಸಿ ಬಿಟ್ಟಿರುವ ಟಿಶ್ಯು ನೀನು ಯೂಸ್ ಮಾಡ್ತಿದೀಯಾ ಅಂತ ಅಂದೆ” ಎಂದು ರಾಕೇಶ್ ಅಡಿಗ ಮುಂದೆ ಸ್ಪಷ್ಟನೆ ನೀಡಿದ್ದಾರೆ. ಈ ಸಮಯದಲ್ಲಿ ಸ್ಫೂರ್ತಿ, ಸೋನು ಮಾತು ಕೇಳಿ “ಇದ್ಯಾಕೋ ಸೀರಿಯಸ್ ಆಗಿ ಲೈನ್ ಕ್ರಾಸ್ ಆಗ್ತಿದೆ” ಅಂತ ಹೇಳಿ ರಾಕೇಶ್ ಅಲ್ಲಿಂದ ಹೊರನಡೆದಿದ್ದಾರೆ.

ಇತ್ತ ಕಡೆ ಸೋನು “ಸ್ಫೂರ್ತಿ ಗೌಡ ಅವರು ಬೇಕಂತಲೇ ಕೆಣಕಿ ಜಗಳ ತೆಗಿಯುತ್ತಾಳೆ. ಮೊದಲು ನನ್ನ ಹತ್ತಿರ ಜಗಳ ಮಾಡಿದಳು, ಈಗ ರಾಕೇಶ್‌ಗೂ ನನ್ನ ಮಧ್ಯೆ ಜಗಳ ತಂದಿಟ್ಟಿದ್ದಾಳೆ. ನನ್ನ ಹತ್ತಿರ ಜಗಳ ಮಾಡಬೇಕು ಅಂತ ಇಲ್ಲಿಗೆ ಬಂದಿದ್ದಾಳೆ” ಎಂದು ಸೋನು ಗೌಡ ಅವರು ಬಿಗ್ ಬಾಸ್ ಮುಂದೆ ಹೇಳುತ್ತಾಳೆ.

You may also like

Leave a Comment