Home » BBK Season 10: ಬಿಗ್‌ಬಾಸ್‌ ಮನೆಯಲ್ಲಿ ಮತ್ತೊಂದು ದುರಂತ; ಡ್ರೋನ್‌ ಪ್ರತಾಪ್‌ ಆಸ್ಪತ್ರೆಗೆ ದಾಖಲು!!!

BBK Season 10: ಬಿಗ್‌ಬಾಸ್‌ ಮನೆಯಲ್ಲಿ ಮತ್ತೊಂದು ದುರಂತ; ಡ್ರೋನ್‌ ಪ್ರತಾಪ್‌ ಆಸ್ಪತ್ರೆಗೆ ದಾಖಲು!!!

by Mallika
0 comments

Bigg Boss Kannada Season 10: ಬಿಗ್‌ಬಾಸ್‌ ಕನ್ನಡ ಪ್ರೋಗ್ರಾಂ ಶುರುವಾದಾಗಿನಿಂದ ಒಂದಲ್ಲ ಒಂದು ದುರಂತ ಸಂಭವಿಸುತ್ತಲೇ ಇದೆ. ಡ್ರೋನ್‌ ಪ್ರತಾಪ್‌ ಇದೀಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ಮೂಲಗಳು ಹೇಳಿರುವ ಪ್ರಕಾರ ಡ್ರೋನ್‌ ಪ್ರತಾಪ್‌ ಗೆ ಫುಡ್‌ ಫಾಯಿಸನ್‌ ಆಗಿದೆ ಎನ್ನಲಾಗಿದೆ. ರಾಜರಾಜೇಶ್ವರಿ ನಗರದ ಎಸ್‌ ಎಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ.

ಬಿಗ್‌ಬಾಸ್‌ ಮನೆಯಲ್ಲಿ ಅನಾರೋಗ್ಯಕ್ಕೀಡಾಗಿದ್ದ ಪ್ರತಾಪ್‌ ಗೆ ಕೂಡಲೇ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲವು ಮಂದಿ ಪ್ರತಾಪ್‌ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ವರದಿಯಾಗಿದೆ. ಕೆಲವು ಮಂದಿ ಪ್ರತಾಪ್‌ ಅವರು ವಿಟಮಿನ್‌ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೂಡಾ ಹೇಳುತ್ತಿದ್ದಾರೆ. ಬಿಗ್‌ಬಾಸ್‌ ಮನೆಯಲ್ಲಿ ನಮ್ಮ ಮಗನಿಗೆ ಫುಡ್‌ ಪಾಯ್ಸಿನ್‌ ಆಗಿದೆ ಎಂದು ಡ್ರೋನ್‌ ಪ್ರತಾಪ್‌ ತಂದೆ ಅವರು ಸ್ಪಷ್ಟನೆ ನೀಡಿದ್ದಾರೆ.

You may also like

Leave a Comment