Home » Kicchana Chappale: ಯಾರೂ ಊಹಿಸದಂತ, ಬಿಗ್ ಬಾಸ್ ಮನೆಯೊಳಗೇ ಇರದ ವ್ಯಕ್ತಿಗೆ ಸಿಕ್ಕಿತು ಈ ಸಲದ ‘ಕಿಚ್ಚನ ಚಪ್ಪಾಳೆ’

Kicchana Chappale: ಯಾರೂ ಊಹಿಸದಂತ, ಬಿಗ್ ಬಾಸ್ ಮನೆಯೊಳಗೇ ಇರದ ವ್ಯಕ್ತಿಗೆ ಸಿಕ್ಕಿತು ಈ ಸಲದ ‘ಕಿಚ್ಚನ ಚಪ್ಪಾಳೆ’

0 comments

Kicchana Chappale: ಕನ್ನಡ ಬಿಗ್ ಬಾಸ್-11(Bigg Boss-11) ಭರ್ಜರಿ TRP ಪಡೆದು ಮುನ್ನುಗ್ಗುತ್ತಿದೆ. ಈಗಾಗಲೇ ಎರಡು ವಾರ ಪೂರೈಸಿರುವ ದೊಡ್ಮನೆಯಲ್ಲಿ ಎರಡೆರಡು ಬಾರಿ ಕಿಚ್ಚನ ಪಂಚಾಯ್ತಿ ಕೂಡ ಆಗಿದೆ. ಕಿಚ್ಚನ ಜೊತೆಗಿನ ಪಂಚಾಯ್ತಿಯಲ್ಲಿ ಯಾರಾದರು ಒಬ್ಬ ವ್ಯಕ್ತಿಗೆ ‘ಕಿಚ್ಚನ ಚಪ್ಪಾಳೆ'(Kucchana Chappale) ಸಿಗುವುದು ವಾಡಿಕೆ. ಆದರೆ ಮೊದಲ ಪಂಚಾಯ್ತಿಯಲ್ಲಿ ಯಾರಿಗೂ ಈ ಚಪ್ಪಾಳೆ ಸಿಕ್ಕಿರಲಿಲ್ಲ. ಆದರೆ ಎರಡನೇ ಪಂಚಾಯ್ತಿಯಲ್ಲಿ ಅಚ್ಚರಿ ಎಂಬಂತೆ ಊಹಿಸದ ಒಬ್ಬರು ವ್ಯಕ್ತಿಗೆ ಕಿಚ್ಚನ ಚಪ್ಪಾಳೆ ದಕ್ಕಿದೆ.

ಹೌದು, ಮೊದಲ ವಾರ ಮನೆಯಲ್ಲಿ ಸಾಕಷ್ಟು ಜಗಳ, ತರ್ಲೆ ತಾಪತ್ರಯಗಳು ನಡೆದಿದ್ದವು. ಲಾಯರ್ ಜಗದೀಶ್ ಅಂತೂ ಬಿಗ್​ಬಾಸ್​ ಮನೆಯಲ್ಲಿದ್ದುಕೊಂಡೆ ಬಿಗ್​ಬಾಸ್​ಗೆ ಧಮ್ಕಿ ಹಾಕಿದ್ದರು. ಹಲವರು ನಿಯಮ ಮೀರಿದ್ದರು. ಮನೆಯಲ್ಲಿ ಮೊದಲ ದಿನದಿಂದಲೂ ಬರೀ ಜಗಳಗಳೇ ನಡೆದಿದ್ದವು. ಸುದೀಪ್ ಮೊದಲ ವಾರದ ಪಂಚಾಯ್ತಿಯ ಎರಡೂ ದಿನದಲ್ಲಿ ಸುದೀಪ್​ ಮನೆಯವರಿಗೆ ವ್ಯಕ್ತಿತ್ವದ ಪಾಠ ಮಾಡಿ ಸುಸ್ತಾದರು. ಮೊದಲ ವಾರದ ಗಲಾಟೆಯ ನಡುವೆ ಆ ವಾರ ಚೆನ್ನಾಗಿ ಆಡಿದ್ದ ಸ್ಪರ್ಧಿಗೆ ಚಪ್ಪಾಳೆ ಕೊಡುವುದನ್ನೇ ಸುದೀಪ್ ಮರೆತಿದ್ದರು. ಹೀಗಾಗಿ ಕಳೆದ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಯಾರಿಗೂ ಚಪ್ಪಾಳೆ ನೀಡಿರಲಿಲ್ಲ.

ಆದರೆ ಎರಡನೇ ವಾರದಲ್ಲಿ ಕೆಚ್ಚ ತಮಗೆ ತಾವೇ ಚಪ್ಪಾಳೆ ತಟ್ಟಿಕೊಂಡಿದ್ದಾರೆ ಸುದೀಪ್. ನಿಮ್ಮೆಲ್ಲರಿಗೂ ಅರ್ಥ ಮಾಡಿಸುವುದು, ನಿಮ್ಮ ತಪ್ಪು ತಿದ್ದುವುದು, ಮಾರ್ಗದರ್ಶನ ಮಾಡುವುದು ನನಗೆ ಅದು ಸುಲಭದ ಕೆಲಸ ಆಗಿರಲಿಲ್ಲ. ಹಾಗಾಗಿ ಆ ಚಪ್ಪಾಳೆಗೆ ನಾನೇ ಅರ್ಹ ಎನಿಸಿತು ಎಂದು ನನಗೆ ನಾನೇ ಚಪ್ಪಾಳೆ ತಟ್ಟಿಕೊಂಡಿದ್ದೇನೆ ಎಂದರು.

ಅಲ್ಲದೆ ನಿಮ್ಮ ಮೊದಲ ವಾರದ ಎಪಿಸೋಡ್ ಎಲ್ಲ ನೋಡಿ, ನಿಮ್ಮ ಬಳಿ ಮಾತನಾಡಿ, ನಿಮಗೆ ಅರ್ಥ ಮಾಡಿಸುವುದು, ತಪ್ಪು ತಿದ್ದುವುದು, ಮಾರ್ಗದರ್ಶನ ಮಾಡುವುದು ಸುಲಭದ ಕೆಲಸ ಆಗಿರಲಿಲ್ಲ. ಹಾಗಾಗಿ ಆ ಚಪ್ಪಾಳೆಗೆ ನಾನೇ ಅರ್ಹ ಎನಿಸಿತು, ಅದಕ್ಕೆ ಇದೇ ಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಯನ್ನು ನನಗೆ ನಾನೇ ಕೊಟ್ಟುಕೊಳ್ಳುತ್ತಿದ್ದೇನೆ ಎಂದರು. ಆ ಕಾರ್ಟೂನ್ ಚಿತ್ರವನ್ನು ಮನೆಯಲ್ಲಿ ನೇತು ಹಾಕಿಸಿದರು.

You may also like

Leave a Comment