Home » BBK 9 : ಪ್ರಶಾಂತ್ ಸಂಬರ್ಗಿ ದೊಡ್ಮನೆಯ ಆಟದಿಂದ ಔಟ್!

BBK 9 : ಪ್ರಶಾಂತ್ ಸಂಬರ್ಗಿ ದೊಡ್ಮನೆಯ ಆಟದಿಂದ ಔಟ್!

by Mallika
0 comments

ಬಿಗ್ ಬಾಸ್ ಕನ್ನಡ ಸೀಸನ್ 09 ರ ಆಟದ ನಾಮಿನೇಶನ್ ಪ್ರಕ್ರಿಯೆಯಲ್ಲಿ ಈ ವಾರದ ಆಟದಲ್ಲಿ ಪ್ರಶಾಂತ್ ಸಂಬರ್ಗಿ ಮನೆಯಿಂದ ಹೊರಬಂದಿದ್ದಾರೆ. ಹಾಗಾಗಿ 12ನೇ ವಾರಕ್ಕೆ ಸಂಬರ್ಗಿ ಆಟ ಮುಗಿದಿದೆ.

ಈ ಮೊದಲು ಬಿಗ್ ಬಾಸ್ ಸೀಸನ್ 08 ರಲ್ಲಿ ಪ್ರಶಾಂತ್ ಸಂಬರ್ಗಿ ಸ್ಪರ್ಧಿಯಾಗಿ ಬಂದಿದ್ದರು. ಈ ಬಾರಿ ಪ್ರವೀಣರ ಸಾಲಿನಲ್ಲಿ ಒಬ್ಬರಾಗಿ ಬಿಗ್ ಬಾಸ್ ಸೀಸನ್ 9ಕ್ಕೆ ಸಂಬರ್ಗಿ ಬಂದಿದ್ದರು. ತನ್ನ ಆಟದ ಮೂಲಕ ಎಷ್ಟು ವಿವಾದ ಮಾಡಿ ಅಷ್ಟೇ ಹೈಲೈಟ್ ಆಗಿದ್ದರು. ಇದೀಗ ದೊಡ್ಮನೆಯಿಂದ ಸಂಬರ್ಗಿಗೆ ಗೇಟ್ ಪಾಸ್ ಸಿಕ್ಕಿದೆ.

ಬಿಗ್ ಬಾಸ್ ಮನೆಯ ಆಟ 12 ವಾರಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಈ ಸಮಯದಲ್ಲಿ 12ನೇ ವಾರಕ್ಕೆ ಪ್ರಶಾಂತ್ ಸಂಬರ್ಗಿ ಆಟಕ್ಕೆ ಬ್ರೇಕ್ ಬಿದ್ದಿದೆ. ತನಗೆ ಸಿಕ್ಕಿರುವ ಬಿಗ್ ಬಾಸ್ ಸೀಸನ್‌ 2 ಅವಕಾಶಗಳನ್ನು ಪ್ರಶಾಂತ್ ಚೆನ್ನಾಗಿ ಉಪಯೋಗಿಸಿ ಎಲ್ಲೋ ಒಂದು ಕಡೆ ಎಡವಿದ್ದಾರೆ ಎಂದು ಹೇಳಬಹುದು. ಕಾವ್ಯಶ್ರೀ ಗೌಡ ನಂತರ ಪ್ರಶಾಂತ್ ಸಂಬರ್ಗಿ ಮನೆಯಿಂದ ಹೊರನಡೆದಿದ್ದಾರೆ.

You may also like

Leave a Comment