Home » Bigg Boss Season 11: ಚೈತ್ರಾ ಕುಂದಾಪುರ ಮದುವೆಯಾಗೋ ಹುಡುಗನ ಫೋಟೋ ರಿವೀಲ್‌!

Bigg Boss Season 11: ಚೈತ್ರಾ ಕುಂದಾಪುರ ಮದುವೆಯಾಗೋ ಹುಡುಗನ ಫೋಟೋ ರಿವೀಲ್‌!

0 comments
Chaitra Kundapur

Bigg Boss Season 11: ಚೈತ್ರಾ ಕುಂದಾಪುರ ಬಿಗ್‌ಬಾಸ್‌ ಮನೆಯಲ್ಲಿ 105 ದಿನಗಳ ತಮ್ಮ ಪ್ರಯಾಣವನ್ನು ಮುಗಿಸಿ ಮನೆಯಿಂದ ಹೊರ ಬಂದಿದ್ದು, ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ. ನಿರಿಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಭಾವೀ ಗಂಡ ಹೇಗಿರಬೇಕು? ಎನ್ನುವುದನ್ನು ಹೇಳಿದ್ದಾರೆ.

ತಲೆ ಕೂದಲಿನಿಂದ ಮೊದಲು ಮಾಡಿ, ಮುಖ ಚಹರೆಯ ಕುರಿತು ಬಣ್ಣಿಸಿದ್ದಾರೆ. ಸಿಲ್ಕಿ ಹೇರ್‌, ಉದ್ದ ಕೂದಲು, ಶಿಖೆ ಕಟ್ಟುವಷ್ಟು ಉದ್ದ ಇರಬೇಕು, ಕೂದಲು ಸ್ಟ್ರೇಟ್‌ ಇರಬೇಕು. ಹಣೆ ಅಗಲ ಇರಬೇಕು. ಹಣೆಯಲ್ಲಿ ವಿಭೂತಿ, ಕುಂಕುಮ ಇಡಬೇಕು, ಗೋಧಿ ಬಣ್ಣ, ಸಾಧಾರಣ ಮೈ ಕಟ್ಟು ಇರಬೇಕು ಎಂದು ಚೈತ್ರಾ ಹೇಳಿದ್ದಾರೆ.

ಭಾವಿ ಪತಿಯ ಮುಖ ಗೋಲು ಆಗಿರಬೇಕು. ಚಿಕ್ಕ ಕಣ್ಣು, ಚಿಕ್ಕ ಕಿವಿ, ಹುಬ್ಬು ದಪ್ಪ ಇರಬೇಕು ಎಂದು ಹೇಳುತ್ತಾ ಇರುವಅಗಲೇ ನಿರಂಜನ್‌ ಅವರು ಎಐ ಚಿತ್ರ ರಚನೆ ನಾನು ಮಾಡುತ್ತೇನೆ ಎಂದು ಚಿತ್ರ ಬಿಡಿಸಿದ್ದಾರೆ. ಹಾಗಾದರೆ ಬನ್ನಿ ಚೈತ್ರಾ ಕುಂದಾಪುರ ಅವರ ಭಾವೀ ಪತಿಯ ಚಿತ್ರಣ ಇಲ್ಲಿದೆ.

You may also like