Home » Bigg Boss: ಬಿಗ್ ಬಾಸ್ ಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ !! ಇವರೇ ನೋಡಿ ಆ ಖ್ಯಾತ ಸೆಲೆಬ್ರಿಟಿ !!

Bigg Boss: ಬಿಗ್ ಬಾಸ್ ಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ !! ಇವರೇ ನೋಡಿ ಆ ಖ್ಯಾತ ಸೆಲೆಬ್ರಿಟಿ !!

1 comment
Bigg Boss

Bigg Boss: ‘ಬಿಗ್ ಬಾಸ್’ ರಿಯಾಲಿಟಿ ಶೋ ಕನ್ನಡ, ಹಿಂದಿ ಸೇರಿದಂತೆ ಇನ್ನಿತರ ಭಾಷೆಗಳಲ್ಲಿ ಪ್ರಸಾರ ಕಾಣುತ್ತಿದೆ. ಬಿಗ್ ಬಾಸ್ನಲ್ಲಿ ಪ್ರತಿ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಯಾರು ಪಡೆದುಕೊಳ್ಳುತ್ತಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೆ ಕನ್ನಡ ಬಿಗ್ ಬಾಸ್ನಲ್ಲಿ (Bigg Boss) ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದಾರೆ. ಇದೀಗ, ಹಿಂದಿ ಬಿಗ್ ಬಾಸ್ ಮನೆಗೆ ಒಬ್ಬರು ವೈಲ್ಡ್ ಕಾರ್ಡ್ ಎಂಟ್ರಿ(Wild Card Entry)ನೀಡಲಿದ್ದಾರೆ.

ಕಲರ್ಸ್ ಹಾಗೂ ಜಿಯೋ ಸಿನಿಮಾದಲ್ಲಿ ಹಿಂದಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಈ ನಡುವೆ, ಆಯೆಷಾ ಖಾನ್ (Ayesha Khan)ಅವರು ಬಿಗ್ ಬಾಸ್ ಮನೆಗೆ ಎಂಟ್ರಿ (Ayesha Khan Entry)ಕೊಡಲಿದ್ದಾರೆ ಎನ್ನಲಾಗಿದೆ. ‘ಮುನಾವರ್ ಫಾರೂಕಿ ನನ್ನನ್ನು ಮದುವೆ ಆಗುವ ಭರವಸೆ ನೀಡಿದ್ದಾರೆ’ ಎಂದು ಆಯೆಷಾ ಖಾನ್ ಹೇಳಿದ್ದಾರೆ ಎನ್ನಲಾಗಿದೆ.

Bigg Boss

Image source: Pinkvilla.com

ಇದನ್ನು ಓದಿ: D K Shivkumar: ಈ ದಿನದಿಂದ ‘ಗ್ಯಾರಂಟಿ’ ಯೋಜನೆಗಳು ರದ್ದು – ಡಿ ಕೆ ಶಿವಕುಮಾರ್ ಕೊಟ್ರು ಶಾಕಿಂಗ್ ಸ್ಟೇಟ್ಮೆಂಟ್ !!

‘ನಾನು ಆಯೆಷಾ ಖಾನ್ ಎಂಬ ವಿಚಾರ ನಿಮಗೆಲ್ಲ ತಿಳಿದಿರಬಹುದು. ಶೋನಲ್ಲಿ ಮುನಾವರ್ ಹೆಸರಿನ ಸ್ಪರ್ಧಿಯಿದ್ದು, ನನಗೆ ಅವರ ಜೊತೆ ಲಿಂಕ್ ಇದೆ. ಅವರು ಹೇಗೆ ತೋರಿಸಿಕೊಳ್ಳುತ್ತಿದ್ದಾರೋ ಹಾಗಿಲ್ಲ. ಶೋಗೆ ಹೋಗುವ ಮೊದಲು ಅವರು ನನಗೆ ಐ ಲವ್ ಯೂ, ನಾನು ನಿನ್ನ ಮದುವೆ ಆಗುತ್ತೇನೆ ಎನ್ನುತ್ತಿದ್ದರು. ಅವರು ಹುಡುಗಿಯರನ್ನು ಅಪ್ರೋಚ್ ಮಾಡುವ ರೀತಿಯೇ ಹೀಗೆ!!. ನನಗೆ ಅವರಿಂದ ಕ್ಷಮೆ ಬೇಕು. ನಾನು ಈ ಶೋಗೆ ಹೋಗೋಕೆ ಅದುವೇ ಮುಖ್ಯ ಕಾರಣ’ ಎಂದು ಆಯೆಷಾ ಹೇಳಿಕೊಂಡಿರುವ ವೀಡಿಯೋದ ಪ್ರೋಮೋ ಸದ್ಯ ವೈರಲ್ ಆಗಿದ್ದು, ಮುನಾವರ್ ಅವರ ಅಭಿಮಾನಿಗಳು ಇದರಿಂದ ಶಾಕ್ ಆಗಿದ್ದಾರೆ. ಮುನಾವರ್ ಅವರು ಬಿಗ್ ಬಾಸ್ಗೆ ಹೋಗಿ ಹೆಚ್ಚು ಫೇಮಸ್ ಆಗಿದ್ದು ಮಾತ್ರವಲ್ಲದೇ ಹೈಪ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಮುನಾವರ್ ಅವರು ಬಿಗ್ ಬಾಸ್ ಗೆಲ್ಲಬೇಕು ಎಂದು ಅಭಿಮಾನಿಗಳ ಅಭಿಲಾಷೆಯಗಿದೆ.

https://x.com/whobrity/status/1735720550889296044?s=20

You may also like

Leave a Comment