Home » Bigg Boss: ಇಬ್ಬರು ಸ್ಪರ್ಧಿಗಳಿಗೆ ರೆಡ್ ಕಾರ್ಡ್ ಕೊಟ್ಟು ಮನೆಗೆ ಕಳಿಸಿದ ಬಿಗ್ ಬಾಸ್ – ಚಪ್ಪಾಳೆ ಹೊಡೆದು ಕೇಕೆ ಹಾಕಿದ ಜನ

Bigg Boss: ಇಬ್ಬರು ಸ್ಪರ್ಧಿಗಳಿಗೆ ರೆಡ್ ಕಾರ್ಡ್ ಕೊಟ್ಟು ಮನೆಗೆ ಕಳಿಸಿದ ಬಿಗ್ ಬಾಸ್ – ಚಪ್ಪಾಳೆ ಹೊಡೆದು ಕೇಕೆ ಹಾಕಿದ ಜನ

0 comments

Bigg Boss: ಬಿಗ್ ಬಾಸ್ ಇತಿಹಾಸದಲ್ಲೇ ನಡೆಯಬಾರದೆಂದು ನಡೆದು ಹೋಗಿದೆ.  ತನ್ನ ಇಬ್ಬರು ಸ್ಪರ್ಧಿಗಳಿಗೆ ಬಿಗ್ ಬಾಸ್ ರೆಡ್ ಕಾರ್ಡ್ ಕೊಟ್ಟು ಮನೆಗೆ ಕಳುಹಿಸಿದೆ. ಈ ಒಂದು ಘಟನೆಯನ್ನು ಕಂಡು ಸಹ ಸ್ಪರ್ಧಿಗಳು ಹಾಗೂ ಸಾರ್ವಜನಿಕರು ಚಪ್ಪಾಳೆ ಹೊಡೆದು, ಕೇಕೆ ಹಾಕಿ ನಲಿದಿದ್ದಾರೆ.

ಹೌದು, ಬಿಗ್‌ ಬಾಸ್‌ ತಮಿಳು ಸೀಸನ್‌ -9 (Bigg Boss Tamil 9) ನಡೆಯುತ್ತಿದೆ. ಅಂತಿಮ ಕೆಲವೇ ಕೆಲ ದಿನಗಳಷ್ಟೇ ಬಿಗ್‌ ಬಾಸ್‌ ಇರಲಿದೆ. ಫಿನಾಲೆ ಹೊಸ್ತಿಲಿನಲ್ಲಿರುವಾಗಲೇ ʼಬಿಗ್‌ ಬಾಸ್‌ʼ ಮನೆಯಲ್ಲಿ ನಡೆದ ಒಂದು ಘಟನೆ ಇಡೀ ವೀಕ್ಷಕರ ವಲಯದಲ್ಲಿ ದೊಡ್ಡದಾಗಿ ಸುದ್ದಿಯಾಗಿದೆ. ಜನಪ್ರಿಯ ನಟ ವಿಜಯ್ ಸೇತುಪತಿ (Vijay Sethupathi) ಬಿಗ್‌ ಬಾಸ್‌ ತಮಿಳು -9ʼನಲ್ಲಿ ಇಬ್ಬರು ಸ್ಪರ್ಧಿಗಳಿಗೆ ರೆಡ್‌ ಕಾರ್ಡ್‌ ಕೊಟ್ಟು ಶೋನಿಂದ ಆಚೆ ಕಳುಹಿಸಿದ್ದಾರೆ. ಆಯೋಜಕರ ಈ ನಿರ್ಧಾರಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಆಗಿದ್ದೇನು?

ಕಳೆದ ವಾರ ತಮಿಳು ಬಿಗ್ ಬಾಸ್ ನಲ್ಲಿಟಿಕೆಟ್ ಟು ಫಿನಾಲೆ ಟಾಸ್ಕ್ ನಡೆಯಿತು. ಈ ಟಾಸ್ಕ್‌ನಲ್ಲಿ ಗೆದ್ದವರಿಗೆ ನೇರವಾಗಿ ಫೈನಲ್‌ಗೆ ಪ್ರವೇಶಿಸುವ ಅವಕಾಶ ನೀಡಲಾಗಿತ್ತು. ಈ ಟಿಕೆಟ್ ಟು ಫಿನಾಲೆಯ ಕೊನೆಯ ಟಾಸ್ಕ್ ಆಗಿ ಕಾರ್ ಟಾಸ್ಕ್ ಅನ್ನು ಇರಿಸಲಾಗಿತ್ತು. ಎಲ್ಲಾ 9 ಜನರು ಒಂದೇ ಕಾರಿನಲ್ಲಿ ಹತ್ತಬೇಕು. ಕೊನೆಯವರೆಗೂ ಅದರಲ್ಲಿಯೇ ಉಳಿಯುವವರನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಟಾಸ್ಕ್ ಆರಂಭವಾದ ಸ್ವಲ್ಪ ಸಮಯದ ನಂತರ, ಪಾರ್ವತಿ ಮತ್ತು ಕಮ್ರುದ್ದೀನ್ ಒಬ್ಬೊಬ್ಬರಾಗಿ ಸ್ಪರ್ಧಿಗಳನ್ನು ಕೀಟಲೆ ಮಾಡಲು ಪ್ರಾರಂಭಿಸಿದರು. ಇತರರು ಸುಮ್ಮನಿದ್ದಾಗ, ಸಾಂಡ್ರಾ ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ಆಗ ಸಾಂಡ್ರಾ “ನೀವಿಬ್ಬರೂ ಬಾತ್ರೂಮ್ ನಲ್ಲಿ ಏನು ಮಾಡಿದ್ದೀರಿ ಎಂದು ನನಗೆ ತಿಳಿದಿದೆ” ಎಂದು ಹೇಳಿದರು. ಕಮ್ರುದ್ದೀನ್ ಮತ್ತು ಪಾರ್ವತಿ ಒಟ್ಟಾಗಿ ಸೇರಿ ಸಾಂಡ್ರಾ ಅವರನ್ನು ತುಂಬಾ ಅಸಭ್ಯವಾಗಿ ಟೀಕಿಸಲು ಪ್ರಾರಂಭಿಸಿದರು.

ಒಂದು ಹಂತದಲ್ಲಿ, ಸಾಂಡ್ರಾ ಶಾಂತವಾದರೂ, ಪಾರ್ವತಿ ಅವರನ್ನು ಹೇಗಾದರೂ ಮಾಡಿ ಕಾರಿನಿಂದ ಹೊರಗೆ ತಳ್ಳಲು ನಿರ್ಧರಿಸಿದರು. ಕಮ್ರುದ್ದೀನ್ ಸಹಾಯದಿಂದ ಕಾರಿನ ಬಾಗಿಲು ತೆರೆದು, ಕಾಲಿನಿಂದ ಸಾಂಡ್ರಾ ಒತ್ತಿ ಹೊರಗೆ ತಳ್ಳಿದರು. ಸಾಂಡ್ರಾ ತಲೆಕೆಳಗಾಗಿ ಬಿದ್ದಳು, ಇದರಿಂದಾಗಿ ಅವಳಿಗೆ ನೋವಾಯಿತು. ಇದರ ನಂತರ, ವಿನೋದ್, ಶಬರಿ ಮತ್ತು ವಿಕ್ರಮ್ ಕೆಳಗೆ ಬಂದು ಸಾಂಡ್ರಾಳನ್ನು ವೈದ್ಯರ ಬಳಿಗೆ ಕರೆದೊಯ್ದರು, ಟಾಸ್ಕ್ ಮುಗಿದರೂ ಪರವಾಗಿಲ್ಲ ಎಂದು ಹೇಳಿದರು. ಇದು ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

ಏನಿದು ರೆಡ್‌ ಕಾರ್ಡ್?:‌

ಬಿಗ್‌ ಬಾಸ್‌ ಶೋನಲ್ಲಿ ರೆಡ್‌ ಕಾರ್ಡ್‌ ಬಳಕೆ ಆಗಿರುವುದು ಕಡಿಮೆ. ಶೋ ನಿಯಮಗಳನ್ನು ಉಲ್ಲಂಘಿಸಿದವರಿಗೆ, ಸಹ ಸ್ಪರ್ಧಿಗಳ ಮೇಲೆ ಹಲ್ಲೆ ಮಾಡಿದ್ದಕ್ಕೆ ಹಾಗೂ ನಿಂದನೀಯ ಮಾತುಗಳನ್ನು ಆಡಿದ ಸ್ಪರ್ಧಿಗಳ ವಿರುದ್ಧ ನಿರೂಪಕರು ರೆಡ್‌ ಕಾರ್ಡ್‌ ಬಳಸಬಹುದಾಗಿದೆ.

ರೆಡ್‌ ಕಾರ್ಡ್‌ ಪಡೆದ ಸ್ಪರ್ಧಿಗಳಿಗೆ ಯಾವುದೇ ರೀತಿಯಲ್ಲಿ ವೇದಿಕೆಗೆ ಬರುವ ಅವಕಾಶ ಇರುವುದಿಲ್ಲ. ಅವರು ಸೀದಾ ಮನೆಗೆ ಹೋಗುತ್ತಾರೆ. ಇನ್ನೊಂದು ಮಾಹಿತಿಯ ಪ್ರಕಾರ ಈ ಸ್ಪರ್ಧಿಗಳಿಗೆ ಸಂಭಾವನೆಯನ್ನೂ ನೀಡುವುದಿಲ್ಲವೆನ್ನಲಾಗಿದೆ. ಆದರೆ ಇದು ಅಧಿಕೃತವಾಗಿ ತಿಳಿದು ಬಂದಿಲ್ಲ.

You may also like