Home » Bigg Boss: ಬಿಗ್ ಬಾಸ್ ಮನೆಯ ಕಾಂಪೌಂಡ್ ಹಾರಿ ಹೊರ ನಡೆದ ವ್ಯಕ್ತಿ- ತಂತಿ, ಕರೆಂಟ್ ವೈರ್ ಲೆಕ್ಕಿಸದೆ, ಬಿಗ್ ಬಾಸ್ ಮಾತಿಗೆ ಕಿವಿಗೊಡದೆ ಎಸ್ಕೇಪ್ !!

Bigg Boss: ಬಿಗ್ ಬಾಸ್ ಮನೆಯ ಕಾಂಪೌಂಡ್ ಹಾರಿ ಹೊರ ನಡೆದ ವ್ಯಕ್ತಿ- ತಂತಿ, ಕರೆಂಟ್ ವೈರ್ ಲೆಕ್ಕಿಸದೆ, ಬಿಗ್ ಬಾಸ್ ಮಾತಿಗೆ ಕಿವಿಗೊಡದೆ ಎಸ್ಕೇಪ್ !!

0 comments

Bigg Boss: ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಶುರುವಾದ ಬಳಿಕ ಎಲಿಮಿನೇಟ್ ಆಗುವವರೆಗೂ ಅಥವಾ ಶೋ ಮುಗಿಯುವವರೆಗೂ ಯಾವುದೇ ಸ್ಪರ್ಧಿ ಮನೆಯಿಂದ ಹೊರ ನಡೆಯುವಂತಿಲ್ಲ. ಟಾಸ್ಕ್ ನಡೆಯುವಾಗ ಏನಾದರೂ ಅವಘಡ ಸಂಭವಿಸಿದಾಗ ಮಾತ್ರ ಅಂತಹ ಸಂದರ್ಭದಲ್ಲಿ ಹೊರಹೋಗುವ ಅವಕಾಶಗಳು ಇರುತ್ತವೆ. ಆದರೆ ಇದೀಗ ಕಂಟೆಸ್ಟೆಂಟ್ ಒಬ್ಬರು ಬಿಗ್ ಬಾಸ್ ಮನೆಯ ಗೋಡೆ, ಗೇಟುಗಳನ್ನು ಹಾರಿ ಎಸ್ಕೇಪ್ ಆಗಿರುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಹಾಗಂತ ಇದು ನಮ್ಮ ಕನ್ನಡದ ಬಿಗ್ ಬಾಸ್(Bigg Boss) ಮನೆಯಲ್ಲಿ ನಡೆದ ಘಟನೆಯಲ್ಲ. ಹಿಂದಿ ಬಿಗ್ ಬಾಸ್ ಶೋನಲ್ಲಿ ನಡೆದಂತಹ ವಿಚಿತ್ರ ಪ್ರಕರಣ. ಈ ಕುರಿತಾದಂತಹ ವಿಡಿಯೋ ಒಂದು ವೈರಲ್ ಆಗಿದ್ದು, ಅದರಲ್ಲಿ ಕುಶಾಲ್ ಎಂಬಂತಹ ಕಂಟೆಸ್ಟಂಟ್ ಮನೆಯಿಂದ ಹೊರ ನಡೆಯಲು ತಂತಿಯಿಂದ ಕೂಡಿರುವ ಬಿಗ್ ಬಾಸ್ನ ಬಹುದೊಡ್ಡ ಗೇಟ್ಗಳನ್ನು ಹಾರಿ ಹರಸಾಹಸ ಪಡುತ್ತಾ ಇರುವುದನ್ನು ನೋಡಬಹುದು.

ಆತ ಕೊನೆಗೆ ಸೀಟ್ ಮೇಲೆ ನಗೆಯುವಂತಹ ಪ್ರಸಂಗವನ್ನು ನೋಡಬಹುದು. ಕೆಳಗಡೆ ನಿಂತಿರುವ ಕೆಲವು ಸ್ಪರ್ಧಿಗಳು ಆಯುಷ್ ಹೋಗಬೇಡ ದಯವಿಟ್ಟು ಇಳಿ ಎಂದು ಕೂಗುತ್ತಾ ಕೂಗಿ ಕೊಳ್ಳುತ್ತಿದ್ದಾರೆ. ಇತ್ತ ಬಿಗ್ ಬಾಸ್ ಕೂಡ ಹೆಸರನ್ನು ಕೂಗಿ ಅವರು ಹೋಗುವುದನ್ನು ತಡೆಯುತ್ತಿದ್ದಾರೆ ಆದರೂ ಕೂಡ ಆ ಸ್ಪರ್ಧಿ ಹಾರಿ ತನ್ನ ಪ್ರಯತ್ನವನ್ನು ಮುಂದುವರಿಸುತ್ತಿದ್ದಾರೆ.

ಸದ್ಯ ಇದು ಯಾವ ಸೀಸನ್ ವಿಡಿಯೋ ಎಂದು ತಿಳಿದಿಲ್ಲ. ಅಲ್ಲದೆ ಮನಿಯೊಳಗೆ ಏನಾಗಿತ್ತು ಎಂದು ಕೂಡ ಸ್ಪಷ್ಟತೆ ಇಲ್ಲ. ಕೆಲವು ಟ್ರೋಲ್ ಪೇಜ್ ಗಳು ಇದನ್ನು ವೈರಲ್ ಮಾಡುತ್ತಿವೆ. ಕಂಟೆಸ್ಟೆಂಟ್ ಹೆಸರು ಕೂಡ ಸ್ಪಷ್ಟವಾಗಿ ಕೇಳದು. ಕುಶಾಲ್ ಎಂದು ಏನೋ ಗೊಂದಲಮಯವಾಗಿ ಕೇಳುತ್ತದೆ. ಆದರೆ ಅದೇ ಎಂದು ನಿಖರವಾಗಿ ಹೇಳಲಾಗದು. ಒಟ್ಟಿನಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತತಿದೆ.

You may also like

Leave a Comment