3

Bigg boss: ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss) ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಇದೇ ಹೊತ್ತಿನಲ್ಲಿ ಬಿಗ್ ಬಾಸ್ ಫಿನಾಲೆ ಕುರಿತು ಕಿಚ್ಚ ಸುದೀಪ್ (Kiccha Sudeep) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ವಿಗೊಳಿಸಿದ ಎಲ್ಲರಿಗೂ ಎಕ್ಸ್ ಖಾತೆಯಲ್ಲಿ ಕಿಚ್ಚ ಧನ್ಯವಾದ ತಿಳಿಸಿದ್ದಾರೆ.

ಬಿಗ್ ಬಾಸ್ ವಿನ್ನರ್ ಯಾರು ಅನ್ನೋದು ಇಂದು ಸೂರ್ಯಾಸ್ತದ ಬಳಿಕ ತಿಳಿಯಲಿದೆ. ಈ ಸೀಸನ್‌ಗೆ ಇಂದಿಗೆ ತೆರೆ ಎಳೆಯಲಾಗುತ್ತಿದೆ. ಈ ಸೀಸನ್‌ನ ಅದ್ಭುತವಾಗಿ, ಯಶಸ್ವಿಯಾಗಿಸಿದ ಎಲ್ಲರಿಗೂ ಧನ್ಯವಾದಗಳು.
ಈ ಅದ್ಭುತ ಪ್ರಯಾಣದ ಯಶಸ್ಸಿಗೆ ಕಾರಣರಾದ ತಾಂತ್ರಿಕ ತಂಡದವರಿಗೆ ಧನ್ಯವಾದ. ಇಂದು ಸೂರ್ಯಾಸ್ತದ ಬಳಿಕ ಬಿಗ್ ಬಾಸ್ ಸೀಸನ್ 12 ಅಂತ್ಯವಾಗಲಿದ್ದು, 13ನೇ ಸೀಸನ್ ಆರಂಭದವರೆಗೂ ಮನೆ ಬಾಗಿಲುಗಳು ಮುಚ್ಚಲಾಗುತ್ತದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಹಾಗೂ ಈ ಸೀಸನ್‌ನ ವಿನ್ನರ್‌ಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಸುದೀಪ್ ಪೋಸ್ಟ್ ಮಾಡಿದ್ದಾರೆ.
