Home » Sanvi Sudeep : ಸಾನ್ವಿ ಸುದೀಪ್ ಗೆ ಬಾಡಿ ಶೇಮಿಂಗ್ – ಕಿಚ್ಚನ ಮಗಳು ಕೊಟ್ಟ ಉತ್ತರವೇನು?

Sanvi Sudeep : ಸಾನ್ವಿ ಸುದೀಪ್ ಗೆ ಬಾಡಿ ಶೇಮಿಂಗ್ – ಕಿಚ್ಚನ ಮಗಳು ಕೊಟ್ಟ ಉತ್ತರವೇನು?

0 comments

Sanvi Sudeep : ಇತ್ತೀಚಿನ ದಿನಗಳಲ್ಲಿ ಕೆಲವು ಸೆಲೆಬ್ರಿಟಿಗಳಿಗೆ ಬಾಡಿ ಶೇಮಿಂಗ್ ಅನ್ನು ಎಥೇಚ್ಛವಾಗಿ ಮಾಡಲಾಗುತ್ತಿದೆ. ಕೆಲವರು ಇದಕ್ಕೆ ಪ್ರತಿಕ್ರಿಯೆ ಕೊಟ್ಟರೆ ಕೆಲವರು ಕೇಳಿಸಿದರೂ ಕೇಳಿಸಿದ ಹಾಗೆ ಸುಮ್ಮನೆ ಇರುತ್ತಾರೆ. ಇದೀಗ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿಗೂ ಕೂಡ ಬಾಡಿ ಶೇಮಿಂಗ್ ಮಾಡಲಾಗಿದೆ. ಇದಕ್ಕೆ ಕಿಚ್ಚನ ಮಗಳು ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ.

ಇತ್ತೀಚಿಗೆ ಮಾರ್ಕ್ ಸಿನಿಮಾ (Mark Movie) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅವರ ಪ್ರೀತಿಯ ಮಗಳು ಸಾನ್ವಿ ಸುದೀಪ್ (Sanvi Sudeep) ಅವರು ಹಾಡಿದ್ದಾರೆ. ಮಸ್ತ್ ಮಲೈಕಾ (Masth Malaika) ಅಂತ ಸಾನ್ವಿ ಸುದೀಪ್ ಹಾಡಿದ್ದು ಇದು ಸಿಕ್ಕಾಪಟ್ಟೆ ವೈರಲ್ (Viral) ಆಗಿದೆ. ಈ ಬಳಿಕ ಸಾನ್ವಿ ಅವರಿಗೆ ಬಾಡಿ ಶೇಮಿಂಗ್ ಕೇಳಿ ಬಂದಿದೆ. ತಮ್ಮನ್ನ ಬಾಡಿ ಶೇಮಿಂಗ್ ಮಾಡೋರಿಗೆ ತಮ್ಮದೇ ಸ್ಟೈಲ್​ನಲ್ಲಿ ಕಿಚ್ಚನ ಮಗಳು ಉತ್ತರ ಕೊಟ್ಟಿದ್ದಾರೆ.

ನಂಗೆ ಬೇಕಾದ್ರೆ ಅಭಿಪ್ರಾಯ ಕೇಳ್ತೀನಿ

ನನ್ನ ದೇಹ ಬಾಡಿ ಚರ್ಚೆಯ ವಿಷಯವಲ್ಲ. ನನಗೆ ಬೇಕು ಅನಿಸಿದರೆ ನಿಮ್ಮ ಅಭಿಪ್ರಾಯ ಕೇಳುತ್ತೇನೆ ಎಂದು ಸಾನ್ವಿ ಸುದೀಪ್ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಹಾಕಿದ್ದಾರೆ. ಈ ಒಂದು ಸಾಲಿನ ಮುಂದೆ ನಗುವ ಎಮೋಜಿಯನ್ನು ಅವರು ಹಾಕಿದ್ದಾರೆ.

ಮಗಳನ್ನು ಟ್ರೋಲ್ ಮಾಡೋ ಬಗ್ಗೆ ಕಿಚ್ಚ ಏನಂದ್ರು?

ಪತ್ರಕರ್ತರ ಪ್ರಶ್ನೆಗೆ ಕಿಚ್ಚ ಉತ್ತರ ಕೊಟ್ಟಿದ್ದಾರೆ. ಅಷ್ಟೆ ವಿಶ್ವಾಸದಲ್ಲಿಯೇ ಮಗಳ ಬಗ್ಗೆ ಮಾತನಾಡಿದ್ದಾರೆ. ಮಗಳು ಎಲ್ಲವನ್ನೂ ಹ್ಯಾಂಡಲ್‌ ಮಾಡ್ತಾರೆ. ನನಗಿಂತಲೂ 10 ರಷ್ಟು ಬೆಳೀತಾಳೆ ಅಂತಲೂ ಸುದೀಪ್ ಹೇಳಿದ್ದಾರೆ. ಅಲ್ಲದೆ ನನ್ನ ಮಗಳು ಜಾಣೆ ಇದ್ದಾಳೆ. ನನಗಿಂತಲೂ 10 ರಷ್ಟು ಬೆಳೆಯುತ್ತಾಳೆ. ಕಾಮೆಂಟ್‌ಗಳು ಬಂದ್ರೆ ಅಷ್ಟೇನೆ, ಏನೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅದನ್ನ ಹ್ಯಾಂಡಲ್‌ ಮಾಡೋದು ಗೊತ್ತಿದೆ ಅನ್ನೋ ಅರ್ಥದಲ್ಲಿಯೆ ಸುದೀಪ್ ಹೇಳಿಕೊಂಡಿದ್ದಾರೆ.

You may also like