Home » ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಜೀವಬೆದರಿಕೆ ಪತ್ರ

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಜೀವಬೆದರಿಕೆ ಪತ್ರ

by Mallika
0 comments

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ತಂದೆ, ಚಿತ್ರ ನಿರ್ಮಾಪಕ – ಚಿತ್ರಕಥೆಗಾರ ಸಲೀಂ ಖಾನ್ ಗೆ ಇಂದು ಅಂದರೆ ಜೂನ್ 6ರಂದು ಬೆದರಿಕೆ ಪತ್ರವೊಂದು ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಐಫಾ ಈವೆಂಟ್ ಸಲುವಾಗಿ ನಟ ಸಲ್ಮಾನ್ ಖಾನ್ ಅಬು ಧಾಬಿಗೆ ತೆರಳಿದ್ದರು. ಭಾನುವಾರವಷ್ಟೇ ಅಬು ಧಾಬಿಯಿಂದ ಮುಂಬೈಗೆ ಸಲ್ಮಾನ್ ಖಾನ್ ವಾಪಾಸು ಬಂದಿದ್ದರು. ಶನಿವಾರ ಐಫಾ ಪ್ರಶಸ್ತಿ ಪ್ರದಾನ ಸಮಾರಂಭ ಅಬುಧಾಬಿಯಲ್ಲಿ ನಡೆಯುತ್ತಿದ್ದು, ಅದರ ಹೋಸ್ಟ್ ನಿರ್ವಹಣೆಯನ್ನು ಸಲ್ಮಾನ್ ವಹಿಸಿದ್ದರು.

ಈಗ ಸಲ್ಮಾನ್ ಖಾನ್ ಹಾಗೂ ಸಲೀಂ ಖಾನ್ ಅವರಿಗೆ ಬಂದ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಬಾಂದ್ರಾ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬೆದರಿಕೆ ಪತ್ರದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆದರಿಕೆ ಪತ್ರ ದೊರಕಿದ್ದೆಲ್ಲಿ?

ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ವಾಯುವಿಹಾರಕ್ಕೆ ಪ್ರತಿದಿನ ಬೆಳಗ್ಗೆ ತೆರಳುವ ಸಮಯದಲ್ಲಿ ಸಾಮಾನ್ಯವಾಗಿ ಪ್ರತಿದಿನ ವಿರಾಮ ತೆಗೆದುಕೊಳ್ಳುವ ಒಂದು ಜಾಗವಿದೆ. ಅದೇ ಜಾಗದ ಬೆಂಚ್ ಮೇಲೆ ಒಂದು ಚೀಟಿ ಇಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೀಟಿಯಲ್ಲಿ ಏನಿತ್ತು?

ಸಲೀಂ ಖಾನ್ ಅವರ ಭದ್ರತಾ ಸಿಬ್ಬಂದಿಗೆ ಆ ಚೀಟಿ ಸಿಕ್ಕಿತ್ತು. ಚೀಟಿಯಲ್ಲಿ “ಮೂಸಾವಾಲಾ ರೀತಿಯಲ್ಲೇ ನಿಮಗೂ ಮಾಡುತ್ತೇವೆ’ ಎಂದು ಚೀಟಿಯಲ್ಲಿ ಬರೆಯಲಾಗಿತ್ತು ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಂದ್ದಾಗೆ, ಸಿಧು ಮೂಸಾವಾಲಾ ಅವರನ್ನು ಕಳೆದ ತಿಂಗಳು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

You may also like

Leave a Comment