Home » BIGG BOSS Kannada OTT : ಮಧ್ಯರಾತ್ರಿ 2.15ಕ್ಕೆ ಸೋನುಗೌಡ ಇರುವಲ್ಲಿಗೆ ಬಂದ ರಾಕೇಶ್ ಅಡಿಗ!!! ಯಾಕಾಗಿ?

BIGG BOSS Kannada OTT : ಮಧ್ಯರಾತ್ರಿ 2.15ಕ್ಕೆ ಸೋನುಗೌಡ ಇರುವಲ್ಲಿಗೆ ಬಂದ ರಾಕೇಶ್ ಅಡಿಗ!!! ಯಾಕಾಗಿ?

by Mallika
0 comments

ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಬಂದು ಈಗಾಗಲೇ ಒಂದು ವಾರ ಆಗಿದೆ. ಈ ಶೋ ನಡೆಯುವುದು ಕೇವಲ ಆರು ವಾರಗಳು ಮಾತ್ರ. ಇದು ಈಗ ಎಲ್ಲಾ ಬಿಗ್ ಬಾಸ್ ಅಭಿಮಾನಿಗಳಿಗೆ ತಿಳಿದಿದೆ. ಕಾಲಾವಕಾಶ ಕಡಿಮೆ ಇರುವುದರಿಂದ ಇರುವ ಅಲ್ಪ ಸಮಯದಲ್ಲೇ ಜನರ ಗಮನ ಸೆಳೆಯಲು ಒಂದಷ್ಟು ತಂತ್ರಗಳನ್ನು ಮಾಡಲಾಗುತ್ತದೆ ಎಂದೇ ಹೇಳಬಹುದು. ತನ್ನ ರೀಲ್ಸ್ ಹಾಗೂ ವೈರಲ್ ವಿಡಿಯೋ ಹಾಗೂ ಟ್ರೋಲರ್ಸ್ ಗಳಿಂದಲೇ ಫೇಮಸ್ ಆದ ಸೋನು ಶ್ರೀನಿವಾಸ್
ಗೌಡ ಅವರು ಬಿಗ್ ಬಾಸ್ ಮನೆಯೊಳಗೆ ತಮ್ಮದೇ ರೀತಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ನೇರ ನುಡಿಗೆ ಖ್ಯಾತಿಯಾಗಿದ್ದಾರೆ ಸೋನು ಗೌಡ. ಇದೇ ವಿಚಾರವಾಗಿ ರಾಕೇಶ್ ಅಡಿಗ ಅವರು ಸೋನು ಗೌಡಗೆ ಬುದ್ಧಿಮಾತು ಹೇಳಲು ಪ್ರಯತ್ನಿಸಿದ್ದಾರೆ. ಅದು ಕೂಡ ತಡರಾತ್ರಿ 2.15ಕ್ಕೆ ಎಂಬುದು ವಿಶೇಷ.

ಬಿಗ್ ಬಾಸ್ ಮನೆಯಲ್ಲಿ ಯಾರೂ ಕೂಡ ಹಗಲು ಹೊತ್ತು ನಿದ್ರೆ ಮಾಡುವಂತಿಲ್ಲ. ಇದು ಬಿಗ್ ಬಾಸ್ ಮನೆಯಲ್ಲಿ ತಲತಲಾಂತರದಿಂದ ಬಂದ ಪದ್ಧತಿ. ಹಾಗೆನೇ ರಾತ್ರಿ ಲೈಟ್ ಆಫ್ ಆದ ಬಳಿಕವೇ ನಿದ್ರೆಗೆ ಅವಕಾಶ. ಈ ರೂಲ್ಸ್ ಬ್ರೇಕ್ ಮಾಡಿದರೆ ಕಠಿಣ ಶಿಕ್ಷೆಗೆ ಸ್ಪರ್ಧಿಗಳು ಗುರಿಯಾಗುತ್ತಾರೆ. ಹಾಗಾಗಿ ಲೈಟ್ ಆಫ್ ಆಗಲಿ ಎಂದು ಸ್ಪರ್ಧಿಗಳು ಕಾಯುತ್ತಿರುತ್ತಾರೆ. ಆದರೆ ಕೆಲವರಿಗೆ ನಿದ್ರೆ ಮಾಡುವ ಅವಸರ ಇರುವುದಿಲ್ಲ. ಮಾತನಾಡುವ ಭರದಲ್ಲಿ ನಿದ್ರೆ ಬಗ್ಗೆ ಗಮನ ನೀಡುವುದಿಲ್ಲ. ರಾಕೇಶ್ ಅಡಿಗ ಮತ್ತು ಸೋನು ಗೌಡ ನಡುವೆ ಹಾಗೆಯೇ ಆಗಿದೆ.

ಹಾಗೇನೆ ನಿನ್ನೆ ರಾತ್ರಿ ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಜೊತೆ ಸೋನು ಗೌಡ ಮಾತನಾಡುತ್ತಿದ್ದರು. ಸಮಯ ಮಧ್ಯರಾತ್ರಿ 2.15 ಆಗಿತ್ತು. ಆಗ ಸೋನು ಗೌಡ ಅವರನ್ನು ಮಾತನಾಡಿಸಲು ರಾಕೇಶ್ ಅಡಿಗ ಬಂದಿದ್ದಾರೆ ‘ನೀನು ದಯವಿಟ್ಟು ಹೋಗಬೇಕು ಅಂತ ವಿನಂತಿ. ನನ್ನ ಮತ್ತು ನಿನ್ನ ವಿಷಯವನ್ನು ಬೇರೆಯವರ ಮುಂದೆ ಜಡ್ಜ್ ಮಾಡಬೇಡ. ನನಗೆ ಇಷ್ಟ ಆಗಲ್ಲ ಹೋಗು’ ಎಂದು ಸೋನು ಗೌಡ ಬೈಯ್ದಿದ್ದಾರೆ.

ಸೋನು ಗೌಡ ಸಿಟ್ಟಾಗಿದ್ದು ಕಂಡು ರಾಕೇಶ್ ಅಡಿಗ ಕೂಲ್ ಆಗಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ವಿಷಯ ಬಿಡು. ಇನ್ಮೇಲೆ ಇವರಿಗೆ (ಚೈತ್ರಾ) ಹೋಗೆ ಬಾರೆ ಅಂತ ಕರೆಯಬೇಡ’ ಎಂದು ಬುದ್ಧಿಮಾತು ಹೇಳಿ ರಾಕೇಶ್ ಜಾಗ ಖಾಲಿ ಮಾಡಿದರು. ಯಾರು ಎಷ್ಟೇ ಬುದ್ಧಿ ಹೇಳಿದರೂ ಅದನ್ನು ಸೋನು ಶ್ರೀನಿವಾಸ್ ಗೌಡ ಕೇಳುತ್ತಿಲ್ಲ. ‘ಪದೇ ಪದೇ ಹೇಳಬೇಡಿ. ನನಗೆ ಮರೆತು ಹೋಗುತ್ತದೆ’ ಎಂಬ ಮಾತು ಹೇಳಿ ಜಾರಿಕೊಂಡಿದ್ದಾರೆ.

You may also like

Leave a Comment