Home » Chaitra Kundapura: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ವಿಚಿತ್ರ ವರ್ತನೆ – ಮನೆ ಮಂದಿ, ವೀಕ್ಷಕರು ಶಾಕ್!!

Chaitra Kundapura: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ವಿಚಿತ್ರ ವರ್ತನೆ – ಮನೆ ಮಂದಿ, ವೀಕ್ಷಕರು ಶಾಕ್!!

0 comments

Chaitra Kundapura: ಸೀಸನ್ 11 ರಲ್ಲಿ (Bigg Boss Kannada 11) ಚೈತ್ರಾ ಕುಂದಾಪುರ(Chaitra Kundapura) ದಿನ ಕಳೆದಂತೆ ಸಖತ್ ಹೈಲೈಟ್ ಆಗುತ್ತಿದ್ದಾರೆ. ಪ್ರತಿ ದಿನ ಒಂದಲ್ಲ ಒಂದು ವಿಚಾರಕ್ಕೆ ಇವರು ಸುದ್ದಿಯಲ್ಲಿ ಇರುತ್ತಾರೆ. ಹೊರಗೆ ಅವರ ಬಗ್ಗೆ ಇದ್ದ ನೆಗೆಟಿವ್ ಟಾಕ್​ ಸ್ವಲ್ಪ ಕಡಿಮೆ ಆಗಿದೆ. ಅವರ ಆಟ ಕೆಲವರಿಗೆ ಇಷ್ಟ ಆಗುತ್ತಿದೆ. ಈ ಮಧ್ಯೆ ಅವರು ಕೆಲವು ವಿಚಿತ್ರ ವರ್ತನೆಗಳಿಂದ ಗಮನ ಸೆಳೆಯುತ್ತಾ ಇದ್ದಾರೆ. ಅಂತದ್ದೇ ವಿಚಿತ್ರ ವರ್ತನೆಯನ್ನು ಮತ್ತೆ ಚೈತ್ರ ತೋರಿದ್ದಾರೆ.

ಹೌದು, ಸಾಮಾನ್ಯವಾಗಿ ಊದಿನ ಕಡ್ಡಿ ಹಚ್ಚಿ ಗಂಟೆ ತೂಗುತ್ತಾ ದೇವರಿಗೆ ಪೂಜೆ ಮಾಡೋದು ಸಾಮಾನ್ಯ. ಆದರೆ, ಚೈತ್ರಾ ಹಾಗಲ್ಲ. ಊದಿನಕಡ್ಡಿ ಹಚ್ಚಿದ ಅವರು ಗಂಟೆ ತೂಗುತ್ತಾ ತಮಗೆ ತಾವೇ ಪೂಜೆ ಮಾಡಿಕೊಂಡರು. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಇದನ್ನು ನೋಡಿ ಮನೆ ಮಂದಿ ಶಾಕ್​ಗೆ ಒಳಗಾಗಿದ್ದಾರೆ. ಶಿಶಿರ್​ ಅಂತೂ ಚೈತ್ರಾಗೆ ಏನೋ ಆಯಿತು ಎಂಬ ರೀತಿಯಲ್ಲಿ ನೋಡುತ್ತಿದ್ದರು. ಅವರು ದೃಷ್ಟಿ ತೆಗೆದುಕೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಚೈತ್ರಾ ಕುಂದಾಪುರ ಮಾಡಿದ ಈ ವಿಚಿತ್ರ ಪೂಜೆ ಬಿಗ್‌ ಬಾಸ್ ಅಭಿಮಾನಿಗಳನ್ನು ಅಚ್ಚರಿ ಮೂಡಿಸಿದೆ. ಜನರು ಈ ಬಗ್ಗೆ ನಾನಾ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಚೈತ್ರಾ ದೈವ ಭಕ್ತೆ. ಅದರಲ್ಲೂ ದೇವಿ ಮೇಲೆ ಇವರಿಗೆ ಅತೀವ ನಂಬಿಕೆ ಇದೆ. ಇದನ್ನು ಅನೇಕ ಬಾರಿ ಮನೆಯೊಳಗೆ ಅವರೇ ಹೇಳಿಕೊಂಡಿದ್ದರು. ಆದರೆ, ಇದೀಗ ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

You may also like

Leave a Comment