Chandan Nividetha Divorce: ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದ ಚಂದನ್ ಗೌಡ ಮತ್ತು ನಿವೇದಿತಾ ಗೌಡ ಕೋರ್ಟ್‌ಗೆ ಇಂದು ಹಾಜರಾಗಿದ್ದು, ಇಬ್ಬರೂ ಕೈ ಕೈ ಹಿಡಿದುಕೊಂಡೇ ಕೋರ್ಟ್‌ಗೆ ಬಂದಿದ್ದು, ಹಾಗೆನೇ ಕೈ ಕೈ ಹಿಡಿದುಕೊಂಡೇ ಕೋರ್ಟ್‌ನಿಂದ ಹೊರಗೆ ಹೋಗಿದ್ದಾರೆ.
NEET Scam: ಸೂಕ್ತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ !
ಅಗ್ರಿಮೆಂಟ್ ಸಮೇತ ಮತ್ತೆ ಕೋರ್ಟ್ ಮುಂದೆ ಬಂದ ನಿವಿ-ಚಂದನ್ ನಿಯಮಗಳ ಪ್ರಕಾರ ವಿಚಾರಣೆಗೆ ಹಾಜರಾಗಿದ್ದು, ಇವರಿಬ್ಬರ ಡಿವೋರ್ಸ್ ಕೇಸ್ ಅಗ್ರಿಮೆಂಟ್ ಆಧರಿಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.
ಇಬ್ಬರೂ ಅಗ್ರಿಮೆಂಟ್ ಪ್ರಕಾರ ಕೋರ್ಟ್ ಮುಂದೆ ಹೇಳಿಕೆ ನೀಡಿದರೆ ವಿಚ್ಛೇದನ ಮಂಜೂರು ಮಾಡಲಾಗುವ ಸಾಧ್ಯತೆ ಇದೆ. ಪರಸ್ಪರ ಒಪ್ಪಿಕೊಂಡು, 13b of family court act ಅಡಿ ಒಪ್ಪಿಗೆ ನೀಡಿದ್ದು, ಇಬ್ಬರೂ ಪರಸ್ಪರ ಆರೋಪ ಮಾಡದೇ ಒಪ್ಪಿಗೆ ನೀಡಿದ್ದು, ಕೈ ಕೈ ಹಿಡಿದುಕೊಂಡೇ ಕೋರ್ಟ್ ನಿಂದ ನಿರ್ಗಮಿಸಿದ್ದಾರೆ.

Photo Credit: News 18 Kannada
ಕೌಟುಂಬಿಕ ಕೋರ್ಟ್‌ನಲ್ಲಿ ಸಂಧಾನ ಮಾಡುವ ಕೆಲಸ ಮಾಡಲಾಗಿದ್ದು, ಆದರೆ ಇಬ್ಬರೂ ಸಂಧಾನಕ್ಕೆ ಒಪ್ಪಿಲ್ಲ ಎನ್ನಲಾಗಿದೆ.
ಮಿಡಿಯೇಶನ್ ಸುತ್ತು ಮುಗಿಸಿರುವ ದಂಪತಿಗಳು ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ.
