Chandan Shetty- Niveditha: ಸ್ಯಾಂಡಲ್‌ವುಡ್‌ನ ಲವ್ಲಿ ಹಕ್ಕಿಗಳಾಗಿದ್ದ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ಏಕಾಏಕಿಯಾಗಿ ಡೈವೋರ್ಸ್ ಪಡೆದುಕೊಂಡಿದ್ದಾರೆ. ಜಾಸ್ತಿ ಸುದ್ದಿ ಗದ್ದಲ ಗಲಾಟೆಗಳಿಲ್ಲದೆ ಜೂನ್ 7ರಂದು ಕಾನೂನು ಬದ್ಧವಾಗಿ ಪರಸ್ಪರ ಒಪ್ಪಿಗೆಯ ಮೇರೆಗೆ ಅವರಿಬ್ಬರು ಡೈವೋರ್ಸ್ (Divorce) ಪಡೆದು ಬೇರೆಯಾಗಿದ್ದಾರೆ. ಈ ವಿಚಾರ ಫ್ಯಾನ್ಸ್‌ಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಥಹಾ ಸಂದರ್ಭದಲ್ಲಿ ಡಿವೋರ್ಸ್ ಬಳಿಕ ಚಂದನ್ ಮತ್ತು ನಿವೇದಿತಾ ದಿಢೀರ್ ಗೂಗಲ್‌ನಲ್ಲಿ ಟಾಪ್ ಟ್ರೆಂಡಿಂಗ್‌ನಲ್ಲಿದ್ದಾರೆ.
Rain: ಧಾರವಾಡದಲ್ಲಿ ಮಳೆ ಆರ್ಭಟ, ನಡುರಸ್ತೆಯಲ್ಲೇ ವೃದ್ಧನ ಭಯಂಕರ ತಪಸ್ಸು…!
ಪ್ರೀತಿಸಿದ್ದ ನಂತರ ವಿವಾಹ ಆದ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಜೋಡಿಯದ್ದು. ಈಗ ಯಾವ ವಿಚಾರಕ್ಕೆ ಇವರು ಡಿವೋರ್ಸ್ ಪಡೆದಿದ್ದಾರೆ ಎಂಬುದು ಅನೇಕರಿಗೆ ಚಿಂತೆಯ ಮಾತಾಗಿದೆ. ಸಹಜ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಹೀಗಾಗಿ ಇಂಟರ್‌ನೆಟ್‌ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಟ್ರೆಂಡಿಂಗ್‌ನಲ್ಲಿದ್ದಾರೆ. ಜನ ಅವರಿಬ್ಬರ ಡೈವೋರ್ಸ್ ಗೆ ಕಾರಣಗಳನ್ನು ಇಂಟರ್ನೆಟ್ ನಲ್ಲಿ ಹುಡುಕಾಡುತ್ತಿದೆ.
ಡಿವೋರ್ಸ್ ಘೋಷಣೆಯ ಬಳಿಕ ಗೂಗಲ್‌ನಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡರನ್ನ ಇಂಟರ್‌ನೆಟ್‌ನಲ್ಲಿ ಜನ ಹುಡುಕುತ್ತಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಕನ್ನಡಿಗರು, ಕರ್ನಾಟಕದವರು. ಹೀಗಾಗಿ, ಕರ್ನಾಟಕದಲ್ಲೇ ಇಬ್ಬರೂ ಟಾಪ್ ಟ್ರೆಂಡಿಂಗ್ ಸಬ್ಜೆಕ್ಟ್ಸ್. ಕರ್ನಾಟಕದಲ್ಲಿ ಶೇ.100ರಷ್ಟು ಇಂಟರ್‌ನೆಟ್ ಬಳಸುವ ಮಂದಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಬಗ್ಗೆ ಹುಡುಕಾಡಿದ್ದಾರೆ ಅಂದ್ರೆ ಅಚ್ಚರಿಯಾಗುತ್ತಿದೆ. ಚಂದನ್ ಶೆಟ್ಟಿ – ನಿವೇದಿತಾ ಗೌಡ ಡಿವೋರ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ನಿವೇದಿತಾ ಗೌಡ, ಚಂದನ್ ಶೆಟ್ಟಿ, ಲವ್, ಡಿವೋರ್ಸ್, ಮದುವೆ ಬಗ್ಗೆ ಹೆಚ್ಚು ಸರ್ಚ್ ಆಗಿದೆ. ಈ ಮೂಲಕ ಇಬ್ಬರೂ ಈಗ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ.
ಈ ಜೋಡಿ ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ (Bigg Boss Kannada 5) ಮೊದಲು ಪರಿಚಿತರಾದರು. ಆ ಸೀಸನ್ ನಲ್ಲಿ ಚಂದನ್ ಶೆಟ್ಟಿ ವಿಜೇತರಾಗಿದ್ದರು. ಬಳಿಕ 2019ರಲ್ಲಿ ಮೈಸೂರು ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾಗೆ (Niveditha Gowda) ಚಂದನ್ ಪ್ರಪೋಸ್ ಮಾಡಿದ್ದು, ನಂತ್ರ ಎರಡು ಕುಟುಂಬದ ಒಪ್ಪಿಗೆ ಪಡೆದು 2020ರಲ್ಲಿ ಚಂದನ್ ಮತ್ತು ನಿವೇದಿತಾ ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಪದೇಪದೇ ಕಾಣಿಸಿಕೊಂಡು ಆದರ್ಶ ದಂಪತಿಗಳ ತರಹ ಅನ್ನಿಸಿದ್ದು ಈಗ ಹಳೆಯ ಮಾತು. ಈಗ ಪ್ರೇಮ ಹಳಸಿದೆ, ಡೈವೋರ್ಸ್ ಪೇಪರಿನ ಮೇಲೆ ಇಬ್ಬರ ಹೆಸರು ಸೈನ್ ಇದೆ. ಇಂಟರ್ನೆಟ್ ಮನೆ ಮುರಿದವರ ಬಗ್ಗೆ ತಿಳಿದುಕೊಳ್ಳುವ ಕುತೂಹಲದಿಂದ ಗೂಗಲ್ ನಲ್ಲಿ ಜಾಲಾಡುತ್ತಿದೆ.
ಈ ಬ್ಯಾಂಕುಗಳು ಶೂನ್ಯ-ಡೌನ್ ಪಾವತಿ ಮೇಲೆ ಕಾರ್ ಸಾಲ ನೀಡುತ್ತೆ!ಇಲ್ಲಿದೆ ಮಾಹಿತಿ!
