Home » Chikkaballapura: ಟಮೋಟೋ ಹೊಲದ ಮೇಲೆ ಜನರ ಕಣ್ಣು – ದೃಷ್ಟಿಯಾಗಬಾರದೆಂದು ಸನ್ನಿಲಿಯೋನ್, ರಚಿತರಾಮ್ ಬ್ಯಾನರ್ ಹಾಕಿದ ರೈತ !!

Chikkaballapura: ಟಮೋಟೋ ಹೊಲದ ಮೇಲೆ ಜನರ ಕಣ್ಣು – ದೃಷ್ಟಿಯಾಗಬಾರದೆಂದು ಸನ್ನಿಲಿಯೋನ್, ರಚಿತರಾಮ್ ಬ್ಯಾನರ್ ಹಾಕಿದ ರೈತ !!

0 comments
Chikkaballapura

Chikkaballapura: ಬೆಳೆಗಳಿಂದ ತುಂಬಿ ತುಳಕುವ ತೋಟ, ಹೊಲ ಗದ್ದೆಗಳಿಗೆ ಜನರ ದೃಷ್ಟಿ ತಾಗಬಾರದು ಅಥವಾ ಕಾಡು ಪ್ರಾಣಿ, ಪಕ್ಷಿಗಳ ಉಪಟಳ ಇರಬಾರದು ಎಂದು ರೈತರು ದೃಷ್ಟಿ ಗೊಂಬೆ ಹಾಕಿದರೆ ಇಲ್ಲೊಬ್ಬ ರೈತ ನಟಿಯರಾದ ಸನ್ನಿಲಿಯೋನ್(Sunny leon) ಮತ್ತು ರಚಿತರಾಮ್(Rachitaram) ಅವರ ಬ್ಯಾನರ್ ಹಾಕಿ ಸಾಕಷ್ಟು ಸುದ್ದಿಯಾಗಿದ್ದಾನೆ.

ಹೌದು, ನಟಿಯರಾಗಿ ಕೋಟ್ಯಾಂತರ ಅಭಿಮಾನಿಗಳಿಗೆ ನೆಚ್ಚಿನ ಹೀರೋಯಿನ್ ಆಗಿರುವ ಸನ್ನಿಲಿಯೋನ್ ಹಾಗೂ ರಚಿತರಾಮ್ ಇಲ್ಲೊಬ್ಬ ರೈತನಿಗೆ ದೃಷ್ಟಿಗೊಂಬೆಯಾಗಿದ್ದಾರೆ. ತಾನು ಬೆಳೆದ ಟಮೋಟೋಗೆ ಯಾರ ಕಣ್ಣು ಬೀಳಬಾರದೆಂದು ಈ ಆಸಾಮಿ ಹೀರೋಯಿನ್ ಗಳ ಫೋಟೋವನ್ನೇ ಹೊಲಗಳಲ್ಲಿ ಹಾಕಿಸಿದ್ದಾನೆ. ಸದ್ಯ ಈ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.

ಅಂದಹಾಗೆ ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಯುವ ರೈತ ದೀಪಕ್(Deepak) ಅವರು ತಾವು 5 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಇನ್ನೇನು ಕಾಯಿ ಬಿಡುವ ಸಮಯವಿದೆ. ಹೀಗಾಗಿ ಟೊಮೆಟೊ ಬೆಳೆ ಮೇಲೆ ಯಾರ ಕೆಟ್ಟ ಕಣ್ಣು ಬೀಳದಿರಲಿ, ಒಳ್ಳೆಯ ಫಸಲು ಬಂದು ಒಳ್ಳೆ ಲಾಭ ಸಿಗಲಿ ಅನ್ನೋ ಕಾರಣಕ್ಕೆ ದೃಷ್ಟಿ ಬೊಂಬೆ ಬದಲು ನಟಿಯರ ಭಾವಚಿತ್ರದ ಬ್ಯಾನರ್‌ ಅಳವಡಿಸಿದ್ದಾರೆ ಎಂದು ತಿಳಿದುಬಂದಿದೆ.

D.K: ಯುವಕ ನಾಪತ್ತೆ ; ಹೊಳೆಗೆ ಬಿದ್ದಿರುವ ಶಂಕೆ

You may also like

Leave a Comment