Home » Rakesh Poojary: ಹಾಸ್ಯ ಕಲಾವಿದ ರಾಕೇಶ್‌ ಪೂಜಾರಿ ಇನ್ನು ನೆನಪು ಮಾತ್ರ; ನೆರವೇರಿದ ಅಂತ್ಯಕ್ರಿಯೆ

Rakesh Poojary: ಹಾಸ್ಯ ಕಲಾವಿದ ರಾಕೇಶ್‌ ಪೂಜಾರಿ ಇನ್ನು ನೆನಪು ಮಾತ್ರ; ನೆರವೇರಿದ ಅಂತ್ಯಕ್ರಿಯೆ

0 comments

Rakesh Poojary: ಕಾಮಿಡಿ ಕಿಲಾಡಿಗಳು ಸೀಸನ್‌ 3 ರ ವಿನ್ನರ್‌ ಆಗಿದ್ದ ರಾಕೇಶ್‌ ಪೂಜಾರಿ ಅವರು ಇಂದು ನಿಧನ ಹೊಂದಿದ್ದು, ಇನ್ನು ಅವರು ನೆನಪು ಮಾತ್ರ. ತನ್ನ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದಿದ್ದ 33 ರ ಹರೆಯದ ನಟ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದು, ನಿಜಕ್ಕೂ ದುರಂತ.

ತನ್ನ ಮನೆಯ ಆಧಾರ ಸ್ತಂಭವಾಗಿದ್ದ,  ರಾಕೇಶ್‌ಪೂಜಾರಿ ವಿಧಿಯ ಆಟಕ್ಕೆ ಸಿಲುಕಿ ತಮ್ಮ ಉಸಿರನ್ನು ನಿಲ್ಲಿಸಿದ್ದಾರೆ. ಇಂದು ಉಡುಪಿಯ ಕಾರ್ಕಳದ ಬಳಿಯ ನಿಟ್ಟೆ ಗ್ರಾಮದಲ್ಲಿ ರಾಕೇಶ್‌ ಪೂಜಾರಿ ಎನ್ನುವ ಅದ್ಭುತ ಪ್ರತಿಭೆಯ ಅಂತ್ಯಕ್ರಿಯೆ ನಡೆಯಿತು. ಸಾವಿರಾರು ಜನರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿದ್ದು, ಕುಟುಂಬದವರ ಆಕ್ರಂದನ ಈ ಸಮಯದಲ್ಲಿ ಮುಗಿಲು ಮುಟ್ಟಿತ್ತು.

ಕಾಮಿಡಿ ಕಿಲಾಡಿಗಳು ಶೋನ ಸ್ನೇಹಿತರು, ಗ್ರಾಮಸ್ಥರು, ಆಂಕರ್‌ ಅನುಶ್ರೀ, ನಟಿ ರಕ್ಷಿತಾ ಪ್ರೇಮ್‌, ಹಾಸ್ಯ ನಟ ಸೂರಜ್‌, ಶಿವರಾಜ್‌ ಕೆ.ಆರ್.ಪೇಟೆ, ನಯನಾ, ಹಿತೇಶ್‌, ಮಾಸ್ಟರ್‌ ಮಂಜುನಾಥ್‌, ಧನರಾಜ್‌ ಅಚಾರ್‌, ತುಕಾಲಿ ಸಂತೋಷ್‌, ಐಶ್ವರ್ಯ, ಜಗ್ಗಪ್ಪ, ಸುಶ್ಮಿತಾ, ಹೀಗೆ ಹಲವು ಮಂದಿ ಕಲಾವಿದರು ನಟ ರಾಕೇಶ್‌ ಪೂಜಾರಿಯ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿ, ಕಣ್ಣೀರು ಹಾಕಿದ್ದಾರೆ.

 

 

You may also like