Home » Hamsa : ಬಿಗ್ ಬಾಸ್ ಖ್ಯಾತಿಯ ಹಂಸ ವಿರುದ್ಧ ದೂರು ದಾಖಲು – ‘ಪುಟ್ಟಕ್ಕನ ಮಕ್ಕಳು’ ತಂಡಕ್ಕೆ ವಂಚಿಸಿದ ನಟಿ

Hamsa : ಬಿಗ್ ಬಾಸ್ ಖ್ಯಾತಿಯ ಹಂಸ ವಿರುದ್ಧ ದೂರು ದಾಖಲು – ‘ಪುಟ್ಟಕ್ಕನ ಮಕ್ಕಳು’ ತಂಡಕ್ಕೆ ವಂಚಿಸಿದ ನಟಿ

0 comments

Hamsa: ಕನ್ನಡ ಬಿಗ್ ಬಾಸ್ ಸೀಸನ್ 11ರ ಖ್ಯಾತ ಸ್ಪರ್ಧಿ ಹಾಗೂ ಲಾಯರ್ ಜಗದೀಶ್ ಅವರ ಕ್ರಶ್ ಎಂದೇ ಪ್ರಖ್ಯಾತಿ ಹೊಂದಿದ್ದ ಹಂಸ(Hamsa) ವಿರುದ್ಧ ಇದೀಗ ಕೇಸ್ ದಾಖಲಾಗಿದೆ.

ಹೌದು, ಪುಟ್ಟಕ್ಕನ ಮಕ್ಕಳು ಧಾರವಾಹಿ ತಂಡದವರು ಹಂಸ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರಾಜಿ ಪಾತ್ರದಲ್ಲಿ ನಟಿಸುತ್ತಿದ್ದ ಹಂಸ ನಮಗೆ ಹೇಳದೆ ಬಿಗ್‌ ಬಾಸ್‌ಗೆ ಹೋಗಿದ್ದಾರೆ. ಅವರು ನಮಗೆ ಹೇಳಲೇ ಇಲ್ಲ. ಅವರ ವಿರುದ್ಧ ಪ್ರೊಡ್ಯೂಸರ್‌ ಅಸೋಸಿಯೇಶನ್‌ಗೆ, ಕನ್ನಡ ಟೆಲಿವಿಷನ್‌ ಅಸೋಸಿಯೇಶನ್‌ಗೆ ದೂರು ಕೊಟ್ಟಿದ್ದೇವೆ ಎಂದು ನಿರ್ದೇಶಕ ಆರೂರು ಜಗದೀಶ್‌(Aruru Jagadish) ತಿಳಿಸಿದ್ದಾರೆ.

ಯೂಟ್ಯೂಬ್ ಚಾನೆಲ್ ಗೆ ಸಂದರ್ಶನ ನೀಡಿದ ಜಗದೀಶ್ ಅವರು ‘ನನಗೆ ಹಂಸ ಅವರಿಂದ ಫೋನ್‌ ಬಂದಿತ್ತು. ನಾನು ನಲವತ್ತು ದಿನ ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ಹೋಗುತ್ತಿದ್ದೇನೆ ಅಂದರು. ಆಗ ನಮಗೆ ಪೋಷಕ ನಟ- ನಟಿಯರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಶೂಟಿಂಗ್‌ ಮಾಡುತ್ತಾರಾ..? ಅದು ನಲವತೈದು ದಿನ ಅಂತಾ ಅನಿಸಿತು. ಆದರೂ ಸರಿ ಮೇಡಂ ಹೋಗಿ ಬನ್ನಿ ನಾನು ತಂಡಕ್ಕೆ ಹೇಳಿದ್ದೆ. ಆಮೇಲೆ ನೋಡಿದರೆ ಬಿಗ್‌ ಬಾಸ್‌ ಪ್ರೋಮೋದಲ್ಲಿ ಇವರು ಇದ್ದಾರೆ. ನನಗೆ ಏನಿದು ಅನಿಸಿಬಿಡ್ತು’ ಎಂದು ಹೇಳಿದ್ದಾರೆ.

ಅಲ್ಲದೆ ಸಾಮಾನ್ಯವಾಗಿ ಸಿನಿಮಾಗೆ ಹೋದರೆ ಸಂಜೆ ವೇಳೆ ಶೂಟಿಂಗ್‌ಗೆ ಕರಿಬಹುದು. ವಿದೇಶಕ್ಕೆ ಹೋದರೂ ಸಹ ಮಧ್ಯ ಬರಬಹುದು. ಅಲ್ಲಿ ಎರಡು ದಿನ ಶೂಟಿಂಗ್‌ ಮಾಡಬಹುದು. ಊಮಾಶ್ರೀ ಅವರನ್ನು ನೋಡಿ, ಸಿನಿಮಾ ಮಾಡುತ್ತಿದ್ದರೂ, ರಾಜಕೀಯದಲ್ಲಿ ಇದ್ದರೂ, ನಮ್ಮ ಧಾರಾವಾಹಿ ಮಾಡಿಕೊಡುತ್ತಿದ್ದಾರೆ. ಅದು ಕಲಾವಿದರಿಗೆ ಇರುವ ನೈತಿಕತೆ. ಬಿಗ್‌ ಬಾಸ್‌ಗೆ ಹೋಗುತ್ತಿದ್ದೇನೆ ಅಂತಾ ಹಂಸ ಹೇಳಲೇ ಇಲ್ಲ. ಅದಾದಮೇಲೆ ನಾವು ಅವರ ವಿರುದ್ಧ ಪ್ರೊಡ್ಯೂಸರ್‌ ಅಸೋಸಿಯೇಶನ್‌ಗೆ, ಕನ್ನಡ ಟೆಲಿವಿಷನ್‌ ಅಸೋಸಿಯೇಶನ್‌ಗೆ ದೂರು ಕೊಟ್ಟಿದ್ದೇವೆ. ಆದರೆ ಅವರು ಏನು ನಿರ್ಧಾರ ತೆಗೆದುಕೊಂಡರು ಗೊತ್ತಾಗಲಿಲ್ಲ. ಆದರೆ ಕಲಾವಿದರಿಗೆ ನೈತಿಕತೆ ಬೇಕು’ ಇಂದು ಜಗದೀಶ್ ಅವರು ಹೇಳಿದ್ದಾರೆ.

You may also like

Leave a Comment