Home » Prakash Raj: ಮೋದಿ ವಿರುದ್ಧ ಟೀಕೆ ” ನಿಮ್ಮ ಚಕ್ರವರ್ತಿಯು ಬೆತ್ತಲೆಯಾಗಿದ್ದಾನೆ”: ಪ್ರಕಾಶ್ ರಾಜ್!

Prakash Raj: ಮೋದಿ ವಿರುದ್ಧ ಟೀಕೆ ” ನಿಮ್ಮ ಚಕ್ರವರ್ತಿಯು ಬೆತ್ತಲೆಯಾಗಿದ್ದಾನೆ”: ಪ್ರಕಾಶ್ ರಾಜ್!

3 comments
Prakash Raj

Prakash Raj: ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಣೆ ಬೆನ್ನಲ್ಲೇ ಪ್ರಕಾಶ್ ರಾಜ್ ಇಷ್ಟ ಬಂದಂತೆ ನಾಲಿಗೆ ಹರಿಬಿಟ್ಟಿದ್ದಾರೆ. ಹೌದು, ಆಡಳಿತರೂಢ ಬಿಜೆಪಿ ಪಕ್ಷವು ಸರಳ ಬಹುಮತ ಪಡೆಯುವಲ್ಲಿ ಎಡವಿದೆ. ಪರಿಣಾಮ ಬಿಜೆಪಿ ತನ್ನ ಮೈತ್ರಿಕೂಟದ ಇತರೆ ಪಕ್ಷಗಳ ಬೆಂಬಲವನ್ನು ಕೇಳುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.

ಇದನ್ನೂ ಓದಿ: Narendra Modi: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಮೋದಿ !!

7ನೇ ಹಂತದ ಲೋಕಸಭಾ ಚುನಾವಾಣೆಯ ಬಳಿಕ ಪ್ರಕಟಗೊಂಡಿದ್ದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಭಾರೀ ಬಹುಮತದ ಜಯ ಎಂದು ಭವಿಷ್ಯ ನುಡಿಯಲಾಗಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಮತದಾರ ಫಲಿತಾಂಶ ನೀಡಿದ್ದಾನೆ.

https://twitter.com/prakashraaj/status/1797939101020365266

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಬಹುಬಾಷಾ ನಟ ಪ್ರಕಾಶ್‌ ರಾಜ್ (Prakash Raj) ಅವರು, “ಚಕ್ರವರ್ತಿಯು ಬೆತ್ತಲೆಯಾಗಿದ್ದಾನೆ, ಈಗ ಅವನು ಬೇರೊಬ್ಬರ ಸಹಾಯ ಪಡೆದುಕೊಳ್ಳುವಂತಾಗಿದೆ. ಇಂಡಿಯಾ ಮತ್ತು ಜವಾಬ್ದಾರಿಯುತ ನಾಗರಿಕ ಸಮಾಜಕ್ಕೆ ಧನ್ಯವಾದಗಳು. ಅಹಂಕಾರವನ್ನು ಪಂಕ್ಚರ್ ಮಾಡಿ ಅವರ ಸ್ಥಾನವನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ನಾವು ನಮ್ಮ ದೇಶಕ್ಕಾಗಿ ಉತ್ತಮವಾಗಿ ಹೋರಾಡಿದ್ದೇವೆ” ಎಂದು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುತ್ತಾರೆ.

ಇದನ್ನೂ ಓದಿ: Guest Teacher Recruitment: 8954 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ! ವೇತನ ಇನ್ನಿತರ ವಿವರ ಇಂತಿವೆ!

You may also like

Leave a Comment