Home » Darshan- Pavitra Gouda: ದರ್ಶನ್ ಹಾಗೂ ಪವಿತ್ರ ಗೌಡ ಗಂಡ-ಹೆಂಡತಿಯರಾ, ಇಲ್ಲಾ ಪ್ರೇಮಿಗಳಾ? ಚಾರ್ಜ್ ಶೀಟ್ ನಲ್ಲಿ ಬಯಲಾಯ್ತು ಸ್ಪೋಟಕ ಸತ್ಯ!!

Darshan- Pavitra Gouda: ದರ್ಶನ್ ಹಾಗೂ ಪವಿತ್ರ ಗೌಡ ಗಂಡ-ಹೆಂಡತಿಯರಾ, ಇಲ್ಲಾ ಪ್ರೇಮಿಗಳಾ? ಚಾರ್ಜ್ ಶೀಟ್ ನಲ್ಲಿ ಬಯಲಾಯ್ತು ಸ್ಪೋಟಕ ಸತ್ಯ!!

1 comment
Darshan- Pavitra Gouda

Darshan-Pavitra Gouda: ರೇಣುಕಾ ಸ್ವಾಮಿ ಹತ್ಯೆ ಪ್ರಕರಣ(Renukaswamy Murder Case) ಮುಗಿಯದ ಅಧ್ಯಾಯವಾಗಿದೆ. ಬಗೆದಷ್ಟು ಆಳಕ್ಕೆ ಹೋಗುತ್ತಿದ್ದು ಪ್ರತೀ ದಿನವೂ ಒಂದೊಂದು ಸ್ಪೋಟಕ ಸತ್ಯ ಹೊರಬೀಳುತ್ತಿವೆ. ಇದೀಗ ಪೋಲೀಸರೂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಹೀಗಾಗಿ ಇದು ದರ್ಶನ್ ಗೆ ದೊಡ್ಡ ಕುಣುಕಾಗಿ ಪರಿಣಮಿಸುವುದು ಪಕ್ಕಾ ಆಗಿದೆ.

ಇನ್ನು ದರ್ಶನ್ ಹೀಗೆಲ್ಲಾ ಮಾಡಲು ಮಾಯಾಂಗನೆ ಪವಿತ್ರ ಕಾರಣ ಎಂಬುದು ಇಡೀ ನಾಡಿಗೆ ಗೊತ್ತಾಗಿದೆ. ಇವರಿಬ್ಬರ ಸಂಬಂಧ ಏನೆಂದು ಇದುವರೆಗೂ ಯಾರಿಗೂ ಗೊತ್ತಿಲ್ಲ. ಎಲ್ಲಾ ಗೌಪ್ಯವಾಗಿಯೇ ಇದೆ. ಹೀಗಾಗಿ ದರ್ಶನ್ ಹಾಗೂ ಪವಿತ್ರ ಗೌಡ(Darshan-Pavitra gouda) ಗೆಳೆಯರೇ? ಪ್ರೇಮಿಗಳೇ? ಅಥವಾ ಗಂಡಹೆಂಡತಿಯರೇ? ಎಂಬುದು ಯಕ್ಷ ಪ್ರಶ್ನೆ. ಆದರೀಗ ಅಚ್ಚರಿ ಎಂಬಂತೆ ಪೋಲೀಸರು ಕೊಲೆ ಕೇಸ್ ನಲ್ಲಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಇವರಿಬ್ಬರ ಸಂಬಂಧ ಏನೆಂಬುದು ಬಯಲಾಗಿದೆ.

ಹೌದು, ದರ್ಶನ್ ಹಾಗೂ ಪವಿತ್ರ ಸಂಬಂಧದ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ರೇಣುಕಾಸ್ವಾಮಿ ಕೇಸ್ ನ ಎ-1 ಪವಿತ್ರಾ ಗೌಡ, ಎ2 ದರ್ಶನ್ ಸುಮಾರು ವರ್ಷಗಳಿಂದ ಒಡನಾಟ ಹೊಂದಿದ್ದಾರೆ. ಅಲ್ಲದೆ ಇವರು ಕೆಲ ವರ್ಷಗಳಿಂದ ಇಬ್ಬರು ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು ಎಂಬ ವಿಚಾರ ಅದರಲ್ಲಿ ಬಯಲಾಗಿದೆ.

ಪ್ರಕರಣದ ಹಿನ್ನೆಲೆ:
ರೇಣುಕಾಸ್ವಾಮಿ ಕಳೆದ 5 ತಿಂಗಳಿಂದ ಪವಿತ್ರಾಗೆ (Pavithra Gowda) ಮೆಸೇಜ್ ಮಾಡುತ್ತಿದ್ದನಂತೆ. ಫೆಬ್ರವರಿಯಿಂದ ಸುಮಾರು 200ಕ್ಕೂ ಹೆಚ್ಚು ಮೆಸೇಜ್ ಬಂದಿದ್ದು, ಎಲ್ಲ ಮೆಸೇಜ್‍ಗಳು ಕೂಡ ಅಶ್ಲೀಲ ಮೆಸೇಜ್‍ಗಳಾಗಿತ್ತು ಎಂದು ತಿಳಿದು ಬಂದಿದೆ. ಆದರೆ ರೇಣುಕಾಸ್ವಾಮಿ (Renukaswamy) ಅಷ್ಟು ಮೆಸೇಜ್ ಮಾಡಿದ್ದರೂ ಪವಿತ್ರಾ ಗೌಡ ಮಾತ್ರ ರಿಪ್ಲೈ ಮಾಡಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ರೇಣುಕಾಸ್ವಾಮಿ ಮೆಸೇಜ್ ಜೊತೆ ಅಶ್ಲೀಲ ಫೋಟೋ ಕೂಡ ಸೆಂಡ್ ಮಾಡಿದ್ದಾನೆ.

ದರ್ಶನ್ ಗೆ ಗೊತ್ತಾಗಿದ್ದು ಹೇಗೆ?
ರೇಣುಕಾ ಸ್ವಾಮಿ ಅಶ್ಲೀಲ ಮೆಸೇಜ್ ಮಾಡುವುದನ್ನು ಪವಿತ್ರ ಗೌಡ , ತನ್ನ ಆತ್ಮೀಯನಾದ ಪವನ್ ಬಳಿ ಹೇಳಿದ್ದಾಳೆ. ಕೊನೆಗೆ ಮೊಬೈಲ್ ಪಡೆದ ಪವನ್, ಪವಿತ್ರಾ ಗೌಡ ರೀತಿ ಚಾಟ್ ಮಾಡಿದ್ದ. ರಿಪ್ಲೈ ಬಂದ ಖುಷಿಗೆ ರೇಣುಕಾಸ್ವಾಮಿ ಕೂಡ ಚಾಟ್ ಮಾಡ್ತಿದ್ದ. ಹೀಗೆ ಮಾತಾಡ್ತಾ ಮಾತಾಡ್ತಾ ರೇಣುಕಾಸ್ವಾಮಿಗೆ ಪವನ್ ಪೋಟೋ ಕಳುಹಿಸುವಂತೆ ಹೇಳಿದ್ದಾನೆ. ಅಂತೆಯೇ ರೇಣುಕಾಸ್ವಾಮಿ ತನ್ನ ಫೋಟೋವನ್ನು ಕಳುಹಿಸಿದ್ದಾನೆ. ಫೋಟೋ ಸಿಕ್ಕ ಮೇಲೆ ಆಟ ಶುರುವಾಗಿ, ದರ್ಶನ್ ಗೂ ಗೊತ್ತಾಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿ ತನಿಖೆ ಕೊನೆಯ ಹಂತ ತಲುಪಿದ್ದು, ಪೊಲೀಸರು ಕೋರ್ಟ್ಗೆ ಚಾರ್ಜ್ ಶೀಟ್ ಕೂಡ ಸಲ್ಲಿಕೆ ಮಾಡಿದ್ದಾರೆ. 3,991 ಪುಟಗಳಲ್ಲಿ ರೇಣುಕಾಸ್ವಾಮಿ ಕೊಲೆ ಭೀಕರತೆ ಬಯಲಾಗಿದೆ ಎನ್ನಲಾಗ್ತಿದೆ.

You may also like

Leave a Comment