Home » Actor Darshan: ಪರಪ್ಪನ ಅಗ್ರಹಾರದಲ್ಲಿ ಜೈಲು ಅಧಿಕಾರಿಗಳು ತಲೆನೋವಾಗಿ ಪರಿಣಮಿಸಿದ ದರ್ಶನ್‌

Actor Darshan: ಪರಪ್ಪನ ಅಗ್ರಹಾರದಲ್ಲಿ ಜೈಲು ಅಧಿಕಾರಿಗಳು ತಲೆನೋವಾಗಿ ಪರಿಣಮಿಸಿದ ದರ್ಶನ್‌

0 comments
Actor Darshan

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಹಕ್ಕಿ ಆಗಿರುವ ನಟ ದರ್ಶನ್‌ ಅವರು ಪರಪ್ಪನ ಅಗ್ರಹಾರ ಸೇರಿದ್ದಾರೆ. ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್‌ ಅವರು ಜೈಲಾಧಿಕಾರಿಗಳಿಗೆ ಇದೀಗ ತಲೆ ನೋವಾಗಿ ಪರಿಣಮಿಸಿದ್ದಾರೆ ಎನ್ನಲಾಗಿದೆ. ಹಾಗಾದರೆ ಅಂತಹ ಕೆಲಸ ಏನು ಮಾಡಿದ್ದಾರೆ ದರ್ಶನ್?‌ ಬನ್ನಿ ತಿಳಿಯೋಣ.

ನಿನ್ನೆ (ಶುಕ್ರವಾರ) ಜೈಲಿನ ನಿಯಮದ ಪ್ರಕಾರ, ಮೆನುವಿನ ಪ್ರಕಾರ ರಾತ್ರಿ ನಟ ದರ್ಶನ್‌ ಅವರು ಚಿಕನ್‌ ಸಾಂಬಾರ್‌, ಮುದ್ದೆ, ಅನ್ನ ತಿಂದು, ತಡರಾತ್ರಿಯಾದರೂ ನಿದ್ದೆ ಮಾಡದೆ ಎದ್ದು ಕೂತಿದ್ದು, ನಂತರ ಲೇಟಾಗಿ ನಿದ್ದೆ ಮಾಡಿದ್ದಾರೆ. ಅನಂತರ ಬೆಳಗ್ಗೆ ಆರು ಗಂಟೆಗೆ ಎದ್ದು ಬಿಸಿ ನೀರು ಕುಡಿದ ಆರೋಪಿ ದರ್ಶನ್‌ ಅವರು ಕೊಠಡಿಯಲ್ಲೇ ವಾಕಿಂಗ್‌ ಮಾಡಿದ್ದಾರೆ.
ಆದರೆ ಇತ್ತ ದರ್ಶನ್‌ ನನ್ನು ನೋಡಲು ಜೈಲುವಾಸಿಗಳು ಹರಸಾಹಸ ಪಡುತ್ತಿದ್ದಾರಂತೆ. ತಮಗೆ ಅನಾರೋಗ್ಯವಿದೆ ಎಂಬ ನೆಪ ಹೇಳಿ ಜೈಲು ಆಸ್ಪತ್ರೆ ಎಂದು ಸುಳಿದಾಡುತ್ತಿದ್ದಾರೆಂದು ವರದಿಯಾಗಿದೆ. ಇದು ಈಗ ಜೈಲು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ ಎನ್ನಲಾಗಿದೆ.

Arecanut: PMFBY ಅಡಿಕೆಗೆ ಬೆಳೆ ವಿಮೆ; ಹಣಪಾವತಿಗೆ ಇಂದೇ ಕೊನೆ ದಿನ

ನಟ ದರ್ಶನ್‌ ಬಂಧಿಯಾಗಿರುವ ಸ್ಪೆಷಲ್‌ ಬ್ಯಾರಕ್‌, ಜೈಲು ಆಸ್ಪತ್ರೆಯ ಪಕ್ಕದಲ್ಲೇ ಇರುವುದರಿಂದ ನಟ ದರ್ಶನ್‌ ನೋಡಲು ಜೈಲುವಾಸಿಗಳು ಹೊಟ್ಟೆ ನೋವು, ಗ್ಯಾಸ್ಟ್ರಿಕ್‌, ತಲೆನೋವು ಹೀಗೆ ನಾನಾ ಆರೋಗ್ಯದ ನೆಪ ಹೇಳಿ ಆಸ್ಪತ್ರೆಗೆ ಬರುತ್ತಿದ್ದಾರಂತೆ.

ಜೈಲಿನ ವೈದ್ಯರು ಪರಿಶೀಲನೆ ಸಂದರ್ಣದಲ್ಲಿ ಬರೋ ರೋಗಿಗಳೆಲ್ಲ ನಮಗೆ ಇಂಜೆಕ್ಷನ್‌ ಬೇಡ, ಮಾತ್ರೆ ಕೊಡಿ ಮಾತ್ರೆ ಕೊಡಿ ಎನ್ನುತ್ತಿದ್ದಾರಂತೆ. ಇದು ಜೈಲಿನ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ ಎನ್ನಲಾಗುತ್ತಿದೆ.

ಇತ್ತ ದರ್ಶನ್‌ ಅವರನ್ನು ನೋಡಲು ಜೋಗಿ ಪ್ರೇಮ್‌, ತರುಣ್‌ ಸುಧೀರ್‌ ಹಾಗೂ ಕೆಲ ನಿರ್ಮಾಪಕರು ತೆರಳಿದ್ದರು. ಆದರೆ ದರ್ಶನ್‌ ಅವರು ತಮ್ಮ ಪತ್ನಿ ಹಾಗೂ ಪುತ್ರನ ಹೊರತುಪಡಿಸಿ ಇನ್ನುಳಿದವರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

Kodi Shri: ಕೇಂದ್ರ ರಾಜಕಾರಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿ ಶ್ರೀ – ಏನಾಗುತ್ತಾ ಮೋದಿ ಸರ್ಕಾರ?!

You may also like

Leave a Comment