Home » Darshan: ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಬಂದಾಗೆಲ್ಲಾ ದರ್ಶನ್ ಕೇಳೋದು ಇದೊಂದೆ ಮಾತಂತೆ !! ಪತಿಯ ಮಾತು ಕೇಳಿ ಕಂಗಾಲಾದ ಪತ್ನಿ

Darshan: ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಬಂದಾಗೆಲ್ಲಾ ದರ್ಶನ್ ಕೇಳೋದು ಇದೊಂದೆ ಮಾತಂತೆ !! ಪತಿಯ ಮಾತು ಕೇಳಿ ಕಂಗಾಲಾದ ಪತ್ನಿ

0 comments

Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder Case) ದರ್ಶನ್ ಜೈಲು ಪಾಲಾಗಿ ಸುಮಾರು 3 ತಿಂಗಳು ಕಳೆದಿದೆ. ದರ್ಶನ್ ನನ್ನು ಬಿಡಿಸಲು ಪತ್ನಿ ವಿಜಯಲಕ್ಷ್ಮೀ ಹರಸಾಹಸ ಪಡುತ್ತಿದ್ದಾರೆ. ಆದರೂ ದರ್ಶನ್(Darshan) ಗೆ ಬಿಡುಗಡೆಯ ಭಾಗ್ಯವಂತೂ ಸಧ್ಯಕ್ಕಿಲ್ಲ ಅನಿಸುತ್ತೆ.

ಇನ್ನು ಬೇಲ್ ಚಿಂತೆಯಲ್ಲೇ ರಾತ್ರಿಯೆಲ್ಲಾ ನಿದ್ದೆ ಮಾಡದೆ ದರ್ಶನ್ ಒದ್ದಾಡಿದ್ದಾರೆ ಎನ್ನಲಾಗ್ತಿದೆ. ಅದರಲ್ಲೂ ಸಿಬ್ಬಂದಿ ಬಳಿ ಬೇಲ್ ಅರ್ಜಿ ವಜಾಗೊಂಡ ವಿಚಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬೇಲ್ ರಿಜೆಕ್ಟ್ ಆದ ಸುದ್ದಿ ಕೇಳಿ ಶಾಕ್ ಆದ ದರ್ಶನ್, ಸೆಲ್​ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರಂತೆ. ಇನ್ನು ಪ್ರತಿ ಬಾರಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿದಾಗಲೆಲ್ಲಾ ದರ್ಶನ್ ಅವರು ಪತ್ನಿಯನ್ನು ಒಂದೇ ಒಂದು ಪ್ರಶ್ನೆ ಕೇಳ್ತಾರಂತೆ. ಇದರಿಂದ ಪತ್ನಿಯೇ ಕಂಗಾಲಾಗಿದ್ದಾರಂತೆ.

ಹೌದು, ಪ್ರತಿ ಬಾರಿಯೂ ದರ್ಶನ್, ಪತ್ನಿ ವಿಜಯಲಕ್ಷ್ಮಿ ಬಳಿ ಬೇಲ್ ಯಾವಾಗ ಎನ್ನುವ ಪ್ರಶ್ನೆ ಕೇಳುತ್ತಿದ್ದರಂತೆ. ಪತಿಯನ್ನು ಜೈಲಿನಿಂದ ಹೊರಗೆ ತರಲೇಬೇಕು ಎಂದು ಕಾನೂನು ಹೋರಾಟ ಮಾಡ್ತಿರುವ ವಿಜಯಲಕ್ಷ್ಮಿ, ಪತಿ ದರ್ಶನ್ ಕೇಳೋ ಆ ಪ್ರಶ್ನೆಗೆ ಉತ್ತರ ಕೊಡಲು ಆಗದೆ ಈ ಸಲ ಜೈಲಿಗೆ ಭೇಟಿ ನೀಡಲ್ಲ ಎನ್ನಲಾಗ್ತಿದೆ.

You may also like

Leave a Comment