Home » Deepika Das: ರೀಲ್ಸ್‌ ಮಾಡೋ ಭರದಲ್ಲಿ ಕಾಲು ಜಾರಿ ಬಿದ್ದು, ಮುಖಕ್ಕೆ ಪೆಟ್ಟು ಮಾಡಿಕೊಂಡ ಬಿಗ್‌ಬಾಸ್‌ ಖ್ಯಾತಿಯ ದೀಪಿಕಾ ದಾಸ್‌

Deepika Das: ರೀಲ್ಸ್‌ ಮಾಡೋ ಭರದಲ್ಲಿ ಕಾಲು ಜಾರಿ ಬಿದ್ದು, ಮುಖಕ್ಕೆ ಪೆಟ್ಟು ಮಾಡಿಕೊಂಡ ಬಿಗ್‌ಬಾಸ್‌ ಖ್ಯಾತಿಯ ದೀಪಿಕಾ ದಾಸ್‌

0 comments
Deepika Das

Deepika Das: ನಾಗಿಣಿ, ಬಿಗ್‌ಬಾಸ್‌ ಖ್ಯಾತಿಯ ದೀಪಿಕಾ ದಾಸ್‌ ಅವರು ರೀಲ್ಸ್‌ ಮಾಡಲು ಹೋಗಿ ಕಾಲುಜಾರಿ ಬಿದ್ದು, ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ಇದರ ವೀಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸುಂದರವಾದ ಜಾಗದಲ್ಲಿ, ಫಾಲ್ಸ್‌ನಲ್ಲಿ ನೀರು ಹಿಂದೆ ಝರಿಯಂತೆ ಬೀಳುತ್ತಿರುವುದು ಈ ವೀಡಿಯೋದಲ್ಲಿ ಕಾಣಬಹುದು, ಅದರ ಒಂದು ಕಡೆ ಬಂಡೆ, ಒಂದು ಕಡೆ ನೀರಿದ್ದು, ಸಣ್ಣ ಕಾಲು ದಾರಿಯಲ್ಲಿ ದೀಪಿಕಾ ದಾಸ್‌ ಅವರು ತಮ್ಮ ಕೈಯಲ್ಲಿ ಹೂವನ್ನು ಹಿಡಿದುಕೊಂಡು ನಡೆದುಕೊಂಡು ಬರುತ್ತಿರುವಾಗಲೇ ದೀಪಿಕಾ ಕಾಲು ಸ್ಪಿಪ್‌ ಆಗಿ ಬಿದ್ದಿದ್ದು, ಕೂಡಲೇ ಅವರ ಮುಖ ಪಕ್ಕದಲ್ಲಿದ್ದ ಬಂಡೆಕಲ್ಲಿಗೆ ಹೊಡೆದಿದೆ.

ರೀಲ್ಸ್‌ ಮಾಡಲು ಹೋಗಿ ದೀಪಿಕಾ ಬಿದ್ದಿದ್ದಾರೆ ಎನ್ನುವುದು ಅವರ ಟ್ಯಾಗ್ಸ್‌ನಿಂದ ಗೊತ್ತಾಗಿದೆ. ಮುಖಕ್ಕೆ ಗಾಯವಾಗಿದೆಯೇ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ದೀಪಿಕಾ ದಾಸ್‌ ಹೌದು ಎಂದಿದ್ದಾರೆ. ಮುಖದ ಎಡಭಾಗಕ್ಕೆ ಗಾಯವಾಗಿದ್ದು, ಈಗ ಸುಧಾರಿಸಿಕೊಂಡಿದ್ದೀನಿ ಎಂದು ಬರೆದಿದ್ದಾರೆ.

 

View this post on Instagram

 

A post shared by Deepika Das (@deepika__das)

You may also like

Leave a Comment