Home » Devil: ಬರೀ 7 ಗಂಟೆಗಳಲ್ಲಿ ‘ಡೆವಿಲ್’ ಟ್ರೇಲರ್ ಪಡೆದ ವೀಕ್ಷಣೆ ಎಷ್ಟು? ಕೇಳಿದ್ರೆ ಶಾಕ್ ಆಗ್ತೀರಾ

Devil: ಬರೀ 7 ಗಂಟೆಗಳಲ್ಲಿ ‘ಡೆವಿಲ್’ ಟ್ರೇಲರ್ ಪಡೆದ ವೀಕ್ಷಣೆ ಎಷ್ಟು? ಕೇಳಿದ್ರೆ ಶಾಕ್ ಆಗ್ತೀರಾ

0 comments

Devil: ನಟ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಇದೇ ಡಿಸೆಂಬರ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 10.05ಕ್ಕೆ ಡೆವಿಲ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಬರೀ 7:00ಗಳಲ್ಲಿ ಪಡೆದ ವೀಕ್ಷಣೆ ಎಷ್ಟೆಂದು ತಿಳಿದರೆ ನೀವೇ ಶಾಕ್ ಆಗುತ್ತೀರಿ.

ಹೌದು, ಸರೆಗಮ ಯೂಟ್ಯೂಬ್ ಚಾನೆಲ್‌ನಲ್ಲಿ ಡೆವಿಲ್ ಟ್ರೇಲರ್‌ ಬಿಡುಗಡೆಯಾಗಿದೆ. ಟ್ರೇಲರ್ ರಿಲೀಸ್ ಆದ 7 ಗಂಟೆಯಲ್ಲಿ ದಿ ಡೆವಿಲ್ 31 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರ ನೋಡಲು ಕಾತರರಾಗಿದ್ದಾರೆ. ಇದೀಗ ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಫ್ಯಾನ್ಸ್‌ ಗೆ ಕಿಕ್ಕೇರಿಸಿದೆ.

ಇನ್ನೂ ದರ್ಶನ್‌ ಮಾಸ್‌ ಲುಕ್‌ನಲ್ಲಿ ಮಿಂಚಿದ್ದಾರೆ. “ಲುಕ್‌ ನಲ್ಲಿ ಅವನು ಹೀರೋ, ಕಿಕ್‌ನಲ್ಲಿದ್ದರೆ ಫುಲ್‌ ಆನ್‌ ಟೆರರ್‌..”, “ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ…” ಎಂಬಂತಹ ಖಡಕ್‌ ಡೈಲಾಗ್‌ ಗಳು ಗಮನ ಸೆಳೆದಿದೆ. ಬಿಗ್‌ಬಾಸ್‌ನಲ್ಲಿ ಮಿಂಚುತ್ತಿರುವ ಗಿಲ್ಲಿ ನಟ, ಮಾಜಿ ಸ್ಪರ್ಧಿ ವಿನಯ್‌ ಗೌಡ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಅಚ್ಯುತ್‌ ಕುಮಾರ್‌ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ನಟ ದರ್ಶನ್‌ ಉಪಸ್ಥಿತಿ ಇಲ್ಲದೆ ನಡೆದ ‘ದಿ ಡೆವಿಲ್’ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಪ್ರಕಾಶ್‌ ವೀರ್‌, ‘ಸಿನಿಮಾ ಕುರಿತ ಪ್ರತಿಯೊಂದು ಅಪ್‌ಡೇಟ್‌ಗಳನ್ನೂ ದರ್ಶನ್‌ ಅವರಿಗೆ ನೀಡಲಾಗುತ್ತಿದೆ. ಅವರು ಬರುತ್ತಾರೆ ಎಂಬ ಆಸೆಯಲ್ಲಿ ನಾನು ಇಷ್ಟು ದಿನ ಕಾದೆ. ಅವರಿದ್ದಿದ್ದರೆ ಆನೆಬಲವಿತ್ತು. ಅವರು ಅಕ್ಟೋಬರ್‌ನಲ್ಲಿಯೇ ಸಿನಿಮಾ ರಿಲೀಸ್‌ ಮಾಡಲು ತಿಳಿಸಿದ್ದರು. ಆದರೆ ಚಿತ್ರ ಸಿದ್ಧವಿಲ್ಲದ ಕಾರಣ ಈಗ ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ.

You may also like