Devil: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಲನಚಿತ್ರ ಡೆವಿಲ್ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಚಿತ್ರ ರಿಲೀಸ್ ಆಗಿ ಐದು ದಿನಗಳು ಕಳೆದಿದ್ದು, ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಾಗಿದ್ರೆ ಈ ಐದು ದಿನದಲ್ಲಿ ‘ಡೆವಿಲ್’ ಮಾಡಿದ ಕಲೆಕ್ಷನ್ ಎಷ್ಟು?
ರಾಜ್ಯದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಡೆವಿಲ್ ಬಿಡುಗಡೆಯ ದಿನ 13.8 ಕೋಟಿ ಗಳಿಕೆಯನ್ನು ಮಾಡಿದೆ ಎಂದು ಸ್ವತಃ ಚಿತ್ರ ನಿರ್ಮಾಣ ಸಂಸ್ಥೆ ಘೋಷಿಸಿತ್ತು. ಆದರೆ ನಂತರದ ದಿನಗಳ ಗಳಿಕೆಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಆದರೆ ಸ್ಯಾಕ್‌ನಿಕ್ ಪ್ರಕಾರ ಡೆವಿಲ್ ಮೊದಲ ದಿನ 10 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ಎರಡನೇ ದಿನ 3.4, ಮೂರನೇ ದಿನ 3.8, ನಾಲ್ಕನೇ ದಿನ 4 ಹಾಗೂ ಐದನೇ ದಿನ 1.4 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ಐದು ದಿನಗಳಲ್ಲಿ ಒಟ್ಟು 22 ಕೋಟಿ 60 ಲಕ್ಷ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಸ್ಯಾಕ್‌ನಿಕ್ ಕೇವಲ ನೆಟ್ ಕಲೆಕ್ಷನ್ ಅನ್ನು ಮಾತ್ರ ಪ್ರಕಟಿಸಿದ್ದು, ಗ್ರಾಸ್ ಕಲೆಕ್ಷನ್ ಗಣನೆಗೆ ತೆಗೆದುಕೊಂಡರೆ ಅಂದಾಜು 30 ಕೋಟಿ ತಲುಪುವ ಸಾಧ್ಯತೆಯಿದೆ.
