Home » Devil: ಮೊದಲ ದಿನ ‘ಡೆವಿಲ್’ ಕಲೆಕ್ಷನ್ ಎಷ್ಟು?

Devil: ಮೊದಲ ದಿನ ‘ಡೆವಿಲ್’ ಕಲೆಕ್ಷನ್ ಎಷ್ಟು?

0 comments

Devil: ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ನಿನ್ನೆ ದಿನ ಅವರ ಚೊಚ್ಚಲ ಚಲನಚಿತ್ರ ಡೆವಿಲ್ ಭರ್ಜರಿಯಾಗಿ ತೆರೆ ಕಂಡಿದೆ. ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈ ನಡುವೆಯೇ ಮೊದಲ ದಿನವೇ ಡೆವಿಲ್ ಚಿತ್ರವು ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿದೆ.

ಹೌದು, ಡೆವಿಲ್ ಸಿನಿಮಾ ಮೊದಲ ದಿನ (ಡಿಸೆಂಬರ್ 11) ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ‘ಡೆವಿಲ್’ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ. ಇದು ಕರ್ನಾಟಕದ ಕಲೆಕ್ಷನ್ ಮಾತ್ರ. ವಿದೇಶದ ಗಳಿಕೆಯೂ ಸೇರಿದರೆ ಮತ್ತಷ್ಟು ಹೆಚ್ಚಲಿದೆ. ಸಿನಿಮಾ ಗಳಿಕೆ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಕನ್ನಡದ ಸಿನಿಮಾ ಒಂದು ಮೊದಲು ದಿನ 10 ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂದರೆ ಅದು ಸಣ್ಣ ವಿಷಯ ಏನು ಅಲ್ಲ. ಇಷ್ಟು ದೊಡ್ಡ ಕಲೆಕ್ಷನ್ ಆಗಲು ಚಿತ್ರದ ಟಿಕೆಟ್ ಬೆಲೆ ಕೂಡ ಕಾರಣ. ಪಿವಿಆರ್, ಐನಾಕ್ಸ್​​ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ದರ ಕನಿಷ್ಠ 500 ರೂಪಾಯಿ ಇಂದ ಆರಂಭ ಆಗಿತ್ತು. ಏಕಪರದೆಯಲ್ಲಿ 400 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಇದರಿಂದ ಹೆಚ್ಚಿನ ಕಲೆಕ್ಷನ್ ಆಗಿದೆ.

You may also like