Home » ತನ್ನ ಮಗುವಿಗೆ ತಂದೆಯೇ ವಿಚಿತ್ರ ಹೆಸರನ್ನು ನಾಮಕರಣ ಮಾಡಿದ | ಆ ಹೆಸರು ಕೇಳಿದರೆ ನೀವು ನಗುವುದಂತೂ ಪಕ್ಕಾ!!

ತನ್ನ ಮಗುವಿಗೆ ತಂದೆಯೇ ವಿಚಿತ್ರ ಹೆಸರನ್ನು ನಾಮಕರಣ ಮಾಡಿದ | ಆ ಹೆಸರು ಕೇಳಿದರೆ ನೀವು ನಗುವುದಂತೂ ಪಕ್ಕಾ!!

0 comments

ಇಂದಿನ ಕಾಲವಂತು ನಾನು ಇನ್ನೊಬ್ಬನಿಂದ ವಿಭಿನ್ನವಾಗಿರಬೇಕೆಂದು ಬಯಸುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ವಿಭಿನ್ನವಾದ ಹೆಸರುಗಳನ್ನು ಇಡಲು ಇಚ್ಚಿಸುತ್ತಾರೆ.ಮಗು ಹುಟ್ಟುವ ಮೊದಲೇ ಯಾವ ಹೆಸರು ಇಡಬಹುದೆಂದು ಯೋಚಿಸುತ್ತಾರೆ.ಬೇರೆ ಮಕ್ಕಳಂತೆ ತನ್ನ ಮಗುವಿನ ಹೆಸರು ಇರಬಾರದು ಅಂತಾ ಹೊಸ ಹೆಸರನ್ನು ಹುಡುಕುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗುವಿಗೆ ಇಟ್ಟ ಹೆಸರು ಕೇಳಿದ್ರೆ ಒಮ್ಮೆ ಯೋಚಿಸಬೇಕಾದ ಪರಿಸ್ಥಿತಿ!!

ಹೌದು.ಇಂಡೋನೇಷ್ಯಾದಲ್ಲಿ ತಂದೆಯೊಬ್ಬರು ತಮ್ಮ ಮಗನಿಗೆ abcdef-ghijk-zuzu ಎಂಬ ವಿಶಿಷ್ಟ ಹೆಸರಿಟ್ಟಿದ್ದಾರೆ. ದಕ್ಷಿಣ ಸುಮಾತ್ರಾ ಪ್ರಾಂತ್ಯದ ಮುವಾರಾ ಎನಿನ್‌ನಲ್ಲಿ ಕೊರೋನ ವೈರಸ್ ಲಸಿಕೆ ಪಡೆಯಲು ಹೋದಾಗ ಈ ಹುಡುಗನ ವಿಶಿಷ್ಟ ಹೆಸರು ಬೆಳಕಿಗೆ ಬಂದಿದೆ.

12 ವರ್ಷದ ಹುಡುಗ ತನ್ನ ಪೂರ್ಣ ಹೆಸರನ್ನು abcdef-ghijk-zuzu ಎಂದು ಬರೆದಿದ್ದಾನೆ. ಮೊದಲಿಗೆ ಅಧಿಕಾರಿಗಳು ಇದನ್ನು ತಮಾಷೆ ಎಂದು ಭಾವಿಸಿದ್ದಾರೆ. ಆದರೆ, ಬಾಲಕನ ಜೊತೆಯಿದ್ದ ತಂದೆ ಹೆಸರನ್ನು ಸ್ಪಷ್ಟಪಡಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿದೆ.

ಕ್ರಾಸ್‌ವರ್ಡ್ ಪದಬಂಧಗಳ ಮೇಲಿನ ಪ್ರೀತಿಯಿಂದಾಗಿ ಬಾಲಕನಿಗೆ ಈ ಹೆಸರು ಇಡಲಾಗಿದೆ ಎಂದು ಹೇಳಲಾಗಿದೆ. ಜನ ಮಕ್ಕಳಿಗೆ ವಿಚಿತ್ರವಾದ ಹೆಸರನ್ನು ಇಡುವುದು ಇದೇ ಮೊದಲಲ್ಲ. ಫಿಲಿಪೈನ್ಸ್‌ನಲ್ಲಿ ತಂದೆಯೊಬ್ಬರು ತಮ್ಮ ಮಗುವಿಗೆ Ghlynnyl Hylhyr Yzzyghyl ಎಂದು ಹೆಸರಿಟ್ಟಿದ್ದಾರೆ.ಆದ್ರೆ ಈ ಹೆಸರು ಮಾತ್ರ ಸ್ವಲ್ಪ ವಿಚಿತ್ರವಾಗಿದೆ ಅಲ್ಲವೇ!?

You may also like

Leave a Comment