Home » Tamil Movie: ತಮಿಳು ನಟ ವಿಜಯ್ ಸೇತುಪತಿ ಸೋತ ದಿನಗಳಲ್ಲಿ ಮನಸು ಟಚ್ ಮಾಡಿದ ಸಿನಿಮಾ ಯಾವುದು ಗೊತ್ತಾ?

Tamil Movie: ತಮಿಳು ನಟ ವಿಜಯ್ ಸೇತುಪತಿ ಸೋತ ದಿನಗಳಲ್ಲಿ ಮನಸು ಟಚ್ ಮಾಡಿದ ಸಿನಿಮಾ ಯಾವುದು ಗೊತ್ತಾ?

2 comments
Tamil Movie

Tamil Movie: ತಮಿಳು ನಟ ವಿಜಯ್ ಸೇತುಪತಿ ಅಭಿನಯದ 50ನೇ ಚಿತ್ರ ‘ಮಹಾರಾಜ’ ಸಿನಿಮಾ (Tamil Movie) ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಬಾಚಿಕೊಂಡು ಇದೀಗ ಓಟಿಟಿಯಲ್ಲೂ ವೀಕ್ಷಕರನ್ನು ಸೆಳೆಯುತ್ತಿದೆ. ‘ಮಹಾರಾಜ’ ಚಿತ್ರದಲ್ಲಿ ವಿಜಯ್ ನಟನೆಗೆ  ಸಿನಿಪ್ರಿಯರು ಅಮೋಘ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೌದು, ಸ್ಟಾರ್ ನಟರ ಪೈಕಿ  ಭಾರತೀಯ ಚಿತ್ರರಂಗದಲ್ಲಿ ತನ್ನದೇ ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿರುವ ವಿಜಯ್ ಸೇತುಪತಿಗೆ ದೊಡ್ಡ ಅಭಿಮಾನ ಬಳಗವಿದೆ. ಯಾವುದೇ ಪಾತ್ರವಿರಲಿ, ಅದು ಅವರ ಅದ್ಭುತ ನಟನೆಯಿಂದಲೇ ಸಿನಿಮಾ ಜೀವ ಪಡೆಯುತ್ತೆ.

ಇನ್ನು ನಟನಾಗಿ ಎಂಟ್ರಿ ಕೊಡುವ ಮುನ್ನ ಕಿರುಚಿತ್ರಗಳನ್ನು ಮಾಡಿಕೊಂಡು ಅಭಿನಯ ವೃತ್ತಿ ಆರಂಭಿಸಿದ ವಿಜಯ್ ಸೇತುಪತಿ, ಒಂದಷ್ಟು ವರ್ಷಗಳ ಕಾಲ ಭಾರೀ ಕಷ್ಟದ ದಿನಗಳನ್ನು ಎದುರಿಸಿದರು. ಈ ಸಮಯದಲ್ಲಿ ಅವರು ಒಂದೇ ಒಂದು ಸಿನಿಮಾವನ್ನು ಮಾತ್ರ ಪದೇ ಪದೇ ನೋಡುತ್ತಿದ್ದರಂತೆ. ಈ ಕುರಿತು ಸ್ವತಃ ವಿಜಯ್ ಅವರೇ ಹೇಳಿಕೊಂಡಿದ್ದಾರೆ.

ಹೌದು, ಅದು ತ್ರಿವಿಕ್ರಮ್ ಶ್ರೀನಿವಾಸ್‌ ನಿರ್ದೇಶನದ ಹಾಗೂ ನಟಿ ತ್ರಿಶಾ ಕೃಷ್ಣನ್ ನಟನೆಯ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಅಥಡು ಚಿತ್ರ. ಈ ಚಿತ್ರ ಸೇತುಪತಿ ಅವರ ನೆಚ್ಚಿನ ಸಿನಿಮಾವಾಗಿತ್ತು. ಇದನ್ನು ಪದೇ ಪದೇ ನೋಡಲು ಒಂದು ಬಲವಾದ ಕಾರಣವೂ ಇತ್ತಂತೆ.

ಅಥಡು ಚಿತ್ರದಲ್ಲಿ ಮಹೇಶ್ ಬಾಬು ಅವರ ಎಂಟ್ರಿಯಿಂದ ಕಡೆಯ ದೃಶ್ಯದವರೆಗೆ ಒಂದು ವಿಶೇಷ ಜಲಕ್ ಇದೆ.. ಚಿತ್ರದಲ್ಲಿ ಅದ್ಭುತ ಭಾವನೆಗಳನ್ನು ತ್ರಿವಿಕ್ರಮ್ ತಮ್ಮ ನಿರ್ದೇಶನದಲ್ಲಿ ತೋರಿಸಿದ್ದಾರೆ. ಇನ್ನು ಮಹೇಶ್ ಮತ್ತು ತ್ರಿಷಾ ನಡುವಿನ ಪ್ರೀತಿ ಮನಸ್ಸನ್ನು ಟಚ್ ಮಾಡುತ್ತೆ. ಆದ್ದರಿಂದ ನನ್ನ ಕಷ್ಟದ ದಿನಗಳಲ್ಲಿ ಅತೀ ಹೆಚ್ಚು ನೋಡಿದ ಸಿನಿಮಾ ಇದೇ ಆಗಿದೆ ಎಂದು ವಿಜಯ್ ಸೇತುಪತಿ ತಿಳಿಸಿದ್ದಾರೆ.

You may also like

Leave a Comment