Home » Bigg boss-10: ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಇವರೇನಾ ?!

Bigg boss-10: ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಇವರೇನಾ ?!

1 comment
Bigg boss-10

Bigg boss-10: ಕನ್ನಡಿಗರು ನಿರೀಕ್ಷಿಸಿದ್ದಂತಹ ಬಿಗ್ ಬಾಸ್ ಸೀಸನ್-10 ಶರುವಾಗಿ ಒಂದು ವಾರ ಕಳೆದಿದೆ. ಎಲ್ಲಾ ಸ್ಪರ್ಧಿಗಳು ಮೊದಲ ವಾರ ಉತ್ತಮ ರೀತಿಯಾಗಿ ತಮ್ಮ ಭಾಗವಹಿಸುವಿಕೆಯನ್ನು ತೋರಿದ್ದಾರೆ. ಕೆಲವು ತರಲೆ, ಕೀಟಲೆಗಳೊಂದಿಗೆ ಕೆಲವರು ಕನ್ನಡಿಗರ ಮನ ಗೆದ್ದರೆ, ಇನ್ನು ಕೆಲವರು ಕೆಂಗಣ್ಣಿಗೂ ಗುರಿಯಾದದ್ದುಂಟು. ಏನೇ ಇರಲಿ ಇದೀಗ ವಾರದ ಕತೆ, ಕಿಚ್ಚನ ಜೊತೆ ಚರ್ಚಿಸಲು ಎಲ್ಲಾ ಕಂಟೆಸ್ಟೆಂಟ್ಸ್ ಗಳು ರೆಡಿಯಾಗಿದ್ದಾರೆ. ಜೊತೆಗೆ ಎಲ್ಲರಲ್ಲೂ ಎಲಿಮಿನೇಷನ್ ಭಯ ಕಾಡಲು ಶುರುವಾಗಿದೆ.

ಹೌದು, ಕನ್ನಡದ ಬಿಗ್ಬಾಸ್ ಸೀಸನ್-10 (Bigg boss-10 ) ಶುರುವಾಗಿ ಈಗಾಗಲೇ ಒಂದು ವಾರ ಕಳೆದಿದ್ದು, ಈ ಸೀಸನ್ ನ ಮೊದಲ ‘ವಾದರ ಕತೆ, ಕಿಚ್ಚನ ಜೊತೆ’ ಕೂಡ ಶುರುವಾಗಿದೆ. ಅಂದಹಾಗೆ ಮೊದಲ ದಿನ ಕೆಲವರಿಗೆ ಬುದ್ದಿಯ ಪಾಠ ಕೂಡ ಆಗಿದ್ದು ಕೆಲವರಲ್ಲಿ ನಡುಕ ಶುರುವಾಗಿದೆ. ಇದರ ನಡುವೆ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದು ಯಾರು? ಎಂಬ ಪ್ರಶ್ನೆಯೊಂದು ಇಡೀ ಕನ್ನಡಿಗರನ್ನು ಕಾಡುತ್ತಿದೆ. ಅಲ್ಲದೆ ಸೋಷಿಯಲ್ ಮೀಡಿಯಾಗಳಲ್ಲಿ ಈ ಸಲ ಎಲಿಮಿನೇಷನ್ ಆಗೋದು ಇವರೇನಾ? ಎಂದು ಹೆಸರೊಂದು ಹರಿದಾಡುತ್ತಿದೆ. ಹಾಗಿದ್ರೆ ಯಾರವರು?

ಅಂದಹಾಗೆ ಇದೀಗ ಮೈಸೂರಿನ ಸ್ನೇಕ್ ಶ್ಯಾಮ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಮಾಹಿತಿ ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲೆಡೆ ಹರಿದಾಡುತ್ತಿದೆ. ಈ ಸೀಸನ್ ನ ಮೊದಲ ಎಲಿಮಿನೇಟ್ (Eliminate) ಶ್ಯಾಮ್ ಆಗಿದ್ದಾರೆ ಎನ್ನುವುದು ಸದ್ಯಕ್ಕೆ ಸಿಗುತ್ತಿರುವ ಮಾಹಿತಿ. ಆದರೆ, ಶ್ಯಾಮ್ (Snake Shyam) ಮನೆಯಲ್ಲಿ ಇದ್ದರಾ? ಅಥವಾ ನಿಜವಾಗಿಯೂ ಎಲಿಮೇನೇಟ್ ಆಗುತ್ತಾರಾ? ಇಲ್ಲ ಮನೆಯಲ್ಲೇ ಉಳಿಯುತ್ತಾರಾ ಎಂಬುದು ನಿನ್ನೆ ಸಂಜೆಯೇ ಕಿಚ್ಚನ ಪಂಚಾಯತಿಯಲ್ಲೇ ತೀರ್ಮಾನವಾಗಿದೆ.

Bigg boss-10

ಒಂದು ವಾರದ ಎಲ್ಲಾ ಎಪಿಸೋಡ್ ಗಳನ್ನು ಗಮನಿಸಿದರೆ ಯಾವ ಚಟುವಟಿಕೆಗಳಲ್ಲೂ ಸ್ನೇಕ್ ಶ್ಯಾಮ್ ಅಷ್ಟಾಗಿ ಉತ್ಸಾಹದಿಂದ ಇರಲಿಲ್ಲ. ಜೊತೆಗೆ ವಯಸ್ಸಿನ ಕಾರಣದಿಂದಾಗಿ ಟಾಸ್ಕ್ ಮಾಡುವುದು ಕೂಡ ಅವರಿಗೆ ಕಷ್ಟದ ಕೆಲಸವೇ. ಮನೆಯಲ್ಲೂ ಅವರು ಲವಲವಿಕೆಯಿಂದ ಇರುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಅವರನ್ನು ಮನೆಯಿಂದ ಆಚೆ ಹಾಕಿರಬಹುದಾ? ಎಂದು ಚರ್ಚೆ ಆಗುತ್ತಿದೆ. ಸದ್ಯ ಇಂದು ಸಂಜೆ ಈ ಕುತೂಹಲಕ್ಕೆ ತೆರೆಬೀಳಲಿದೆ.

ಇದನ್ನೂ ಓದಿ: IT Raid : ಅಂಬಿಕಾಪತಿ ಮನೆಯಲ್ಲಿ ಕೋಟಿ ಕೋಟಿ ಕಾಂಚಾಣ ಪತ್ತೆ ಪ್ರಕರಣ: ಆರ್.ಅಶೋಕ್‌ ಅವರು ನೀಡಿದ್ರು ಶಾಕಿಂಗ್‌ ನ್ಯೂಸ್‌!!

You may also like

Leave a Comment