Sonu srinivas Gowda: ಇದು ಸೋನಾ ಅಂದರೆ ಚಿನ್ನದ ಕಾಲ. ಸೋನು ಶ್ರೀನಿವಾಸ ಗೌಡಗೆ( Sonu srinivas Gowda) ಇದು ಸ್ವರ್ಣ ಯುಗ. ಆಕೆ ಸಿಕ್ಕಾಪಟ್ಟೆ ಹೆಸರು ಮಾಡುತ್ತಿದ್ದಾಳೆ ಒಳ್ಳೆಯದು ಕೆಟ್ಟದು. ಸೋಶಿಯಲ್ ಮೀಡಿಯಾದಲ್ಲಿ ಈಗ ಆಕೆಯದೇ ಹವಾ. ಟಿಕ್ ಟಾಕ್ ರಿಂಗ್ಸ್ ಮಾಡಿಕೊಂಡಿದ್ದ ಹುಡುಗಿಯ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ಬಂದದ್ದೇ ಬಂದದ್ದು, ಅವತ್ತಿನಿಂದ ಇವತ್ತಿನವರೆಗೆ ಸೋಶಿಯಲ್ ಮೀಡಿಯಾ ಆಕೆಯನ್ನು ಕೈ ಬಿಟ್ಟಿಲ್ಲ. ಅದಕ್ಕೆ ತಕ್ಕಂತೆ ಆಕೆ ಕೂಡ ಆಗಾಗ ಆ ಟೈಪಿನಲ್ಲಿ – ಈ ಟೈಪಿನಲ್ಲಿ ಬಂದು ಬೆಂಕಿ ನಂದದಂತೆ ತುಪ್ಪ ಸುರಿಯುತ್ತಲೇ ಇದ್ದಾಳೆ. ಬೆಂಕಿ ನಂದುವ ಲಕ್ಷಣ ಸದ್ಯಕ್ಕೆ ಕಾಣಿಸುತ್ತಿಲ್ಲ.
ಮೊನ್ನೆ ಆಕೆ ಮಾಡಿ ಹೋಗಿ ಅಲ್ಲಿಂದ ಬ್ಯಾಗಿನಿಂದ ಅದನ್ನು ಮಾರಾಟ ಮಾಡಿದ ಸುದ್ದಿ ಎಲ್ಲರಿಗೂ ಗೊತ್ತು ಹಾಗೆ ಆಕೆ ಬಿಕಿನಿ ಹಾಕಿಕೊಂಡು ಬರೋಬ್ಬರಿ ಎರಡು ಕೋಟಿಗೆ 10 ಹತ್ತಿರ ನ್ಯೂಸ್ ತಂದಿದ್ದಳು. ಒಂದು ಮಿಲಿಯನ್ ನ್ಯೂಸ್ ಗಾಗಿ ( 10 ಲಕ್ಷ) ಎಂದು ಬರೆದು ಆಕೆ ಪೋಸ್ಟ್ ಹಾಕಿದರೆ, ನಮ್ಮ ಸೋಶಿಯಲ್ ಮೀಡಿಯಾ ಎಂಬ ಧಾರಾಳಿಗಳು ಹತ್ತತ್ತಿರ 20 ಮಿಲಿಯನ್ ನ್ಯೂಸ್ ನೀಡಿದ್ದರು. ಅದನ್ನು ಕಂಡದ್ದೇ ತಡ ಸೋನು ಗೌಡ ಕಲರ್ ಕಲರ್ ಬಿಕಿನಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದಳು. ಈಗ ಅದೆಲ್ಲ ಹಳೆಯ ಮಾತಾಯಿತು. ಈ ಸೋನು ಗೌಡ ತನ್ನ ಸ್ನೇಹಿತೆಯ ಜೊತೆ ಮಾಲ್ಡಿವ್ ಗೆ ಟ್ರಿಪ್ ಹೋದದ್ದು ಹನಿಮೂನ್ ಪ್ಯಾಕೇಜ್ ನಲ್ಲಂತೆ. ಹಾಗೆ ಮದುವೆಯಾಗದೆ ಹನಿಮೂನ್ ಪ್ಯಾಕೇಜ್ ನಲ್ಲಿ ಹೊರಟ ಸೋನು ಗೌಡರ ಬದುಕಿನ ಮತ್ತಷ್ಟು ವಿಷಯಗಳು ಈಗ ಒಂದೊಂದಾಗಿ ಹೊರ ಬರುತ್ತಿವೆ. ಏನದು ಗೊತ್ತೇ ?
ಈ ಸೋನು ಗೌಡ ಸಿಗರೇಟ್ ಸೇದುತ್ತಾಳೆ !
ಹೌದು, ಹನಿಮೂನ್ ಪ್ಯಾಕೇಜ್ ನಲ್ಲಿ ಹೋಗುವಾಗ ಎರಡು ಲಕ್ಷ ಖರ್ಚು ಆಯಿತು ಅಲ್ಲಿ ನಮಗೆ ಒಂದು ಜ್ಯೂಸು ಕೂಡ ಕೊಡುವುದಿಲ್ಲ. ಕಾಫಿ ಬೇಕು ಅಂದ್ರೆ ಹಾಲಿನ ಪುಡಿ ತಂದು ಇಡ್ತಾರೆ. ಮತ್ತೆ ಸಿಗರೇಟ್ ಪ್ಯಾಕ್ ಬೆಲೆ 20 ಡಾಲರ್ ಬಿತ್ತು ಎಂದು ತನ್ನ ನೋವನ್ನು ಸೋನು ತೋಡಿ ಕೊಂಡಿದ್ದಾಳೆ. ಆ ಮೂಲಕ ಆಕೆ ಸಿಗರೇಟು ಹೊಡೆಯುವ ವಿಷಯ ಕರ್ನಾಟಕದ ಹುಡುಗರಿಗೆ ಗೊತ್ತಾಗಿದೆ. ‘ಯಲಾ ಇವ್ಲಾ’ ಎಂದು ಆಶ್ಚರ್ಯ ಪಟ್ಟು ಹುಡುಗರು ಅರ್ಧ ಸೇದಿದ ತುಂಡು ಬೀಡಿ ಬಿಸಾಕಿ ರಾಯಲ್ ಸೋನುವಿಗಾಗಿ ಮರುಗಿದ್ದಾರೆ. ‘ನೀವು ಭಾರತದಿಂದಲೇ ಸಿಗರೇಟ್ ಯಾಕೆ ಒಯ್ದಿಲ್ಲ ?’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಫ್ಲೈಟ್ ನಲ್ಲಿ ಪ್ರಯಾಣ ಮಾಡುವಾಗ ಯಾರಾದ್ರೂ ಲೈಟರ್ ಮತ್ತು ಸಿಗರೇಟು ಇಟ್ಕೊಂಡು ಬರ್ತಾರ ? ಎಂದು ಸೋನು ಖಾಸಗಿ ಟಿವಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಲ್ಡಿವ್ಸ್ ನಲ್ಲಿ ಲೈವ್ ಆಗಿ ಮಾತಾಡಿದ್ದಾಳೆ. ‘ಎಲ್ಲೆಲ್ಲೋ ಕದ್ದು ತುರುಕಿ ಇಟ್ಟುಕೊಂಡು ಹೋದರೆ ಸಿಕ್ಕಿ ಬೀಳೋದು ಗ್ಯಾರಂಟಿ’ ಎಂಬುದನ್ನು ಸೂಚ್ಯವಾಗಿ ಮುಖ ಭಾವದಲ್ಲಿ ವ್ಯಕ್ತಪಡಿಸಿದ್ದಾಳೆ ಸೋನು ಗೌಡ.
ಇದನ್ನೂ ಓದಿ: IAS ರೋಹಿಣಿ ಸಿಂಧೂರಿಗೆ ಎದುರಾಯ್ತು ಮತ್ತೊಮ್ಮೆ ಸಂಕಷ್ಟ- ಬಟಾ ಬಯಲಾಯ್ತು ಮತ್ತೊಂದು ಸತ್ಯ!!
