Home » Bigg Boss Kannada: ಬಿಗ್ ಬಾಸ್ ಸೀಸನ್ 10 ಗೆದ್ದವರಿಗೆ ಟ್ರೋಫಿ ಜೊತೆಗೆ ನೀವು ಊಹಿಸದಷ್ಟು ಬಿಗ್ ಅಮೌಂಟ್ ಆಫರ್!

Bigg Boss Kannada: ಬಿಗ್ ಬಾಸ್ ಸೀಸನ್ 10 ಗೆದ್ದವರಿಗೆ ಟ್ರೋಫಿ ಜೊತೆಗೆ ನೀವು ಊಹಿಸದಷ್ಟು ಬಿಗ್ ಅಮೌಂಟ್ ಆಫರ್!

by ಹೊಸಕನ್ನಡ
1 comment
Bigg Boss Kannada

Bigg Boss kannada: ಭಾರತೀಯ ಕಿರುತೆರೆಯ ಜಗತ್ತಿನಲ್ಲೇ ಬಿಗ್ ಬಾಸ್ ಹವಾ ಜೋರಾಗಿದೆ.‘ಬಿಗ್ ಬಾಸ್’ ಎಲ್ಲಾ ಭಾಷೆಗಳಲ್ಲೂ ಜನಪ್ರಿಯತೆ ಪಡೆದುಕೊಂಡಿರೋ ರಿಯಾಲಿಟಿ ಶೋ. ಮಲಯಾಳಂ, ಹಿಂದಿ, ತೆಲುಗು,ಮರಾಠಿ, ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ಈ ಶೋ ನಡೆಸಲಾಗುತ್ತಿದೆ. ಇದೀಗ ಕನ್ನಡ ಬಿಗ್ ಬಾಸ್ (Bigg Boss kannada) ಹೊಸ ಸೀಸನ್ ಆರಂಭಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಹೌದು, ಕನ್ನಡದಲ್ಲಿ ಅಕ್ಟೋಬರ್ 8 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗುತ್ತಿದೆ.

ಬಿಗ್ ಬಾಸ್ ಪ್ರಸಾರವಾಗುವ ಮುನ್ನ ಅಭಿಮಾನಿ ಬಳಗಕ್ಕೆ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಅಂತೆಯೇ ಸಹಜವಾಗಿ ಈ ಬಾರಿ ಗೆದ್ದವರಿಗೆ ಎಷ್ಟು ಮೊತ್ತದ ಬಹುಮಾನ (Prize) ಸಿಗಲಿದೆ ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

ಪ್ರತಿ ಸಲವೂ ಬಿಗ್ ಬಾಸ್ ಗೆದ್ದವರಿಗೆ ಟ್ರೋಫಿ ಮತ್ತು ಭಾರೀ ಮೊತ್ತದ ಹಣವನ್ನೇ ಬಹುಮಾನವಾಗಿ ನೀಡಲಾಗುತ್ತದೆ. ಜೊತೆಗೆ ಇತರ ಬಹುಮಾನಗಳು ಕೂಡ ಇರಲಿವೆ. ಸದ್ಯ ಈ ಬಾರಿ ಬಿಗ್ ಬಾಸ್ ಗೆದ್ದವರಿಗೆ ಐವತ್ತು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ವಾಹಿನಿಯು ತಿಳಿಸಿದೆ. ಜೊತೆಗೆ ಇತರ ಬಹುಮಾನಗಳು ಕೂಡ ಮುಂದುವರೆಯಲಿವೆ.

ಕಿರುತೆರೆ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಅಕ್ಟೋಬರ್ 8ರಿಂದ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋ ಶುರುವಾಗಲಿದ್ದು, ಯಾರೆಲ್ಲಾ ಬಿಗ್ ಬಾಸ್ ಮನೆಯೊಳಗಡೆ ಹೋಗಲಿದ್ದಾರೆ ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಇದೆ.

ಅಂತೆಯೇ ಬೆಸ್ಟ್ ರೇಟೆಡ್ ಚಲನಚಿತ್ರ – 777 ಚಾರ್ಲಿ. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡ್ತಿರೋ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ವಾಹಿನಿಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಮೂಲಕ ಚಾರ್ಲಿ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಡುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಈ ಗೀಸರ್‌ನಲ್ಲಿ ವಿದ್ಯುತ್‌ ಬಳಸದೆ ಸಿಗುತ್ತೆ ಬಿಸಿ ಬಿಸಿ ನೀರು! ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ! ಚಳಿಗಾಲಕ್ಕೆ ಈ ಗೀಸರ್ ಬೆಸ್ಟ್ ಒಪ್ಶನ್!

You may also like

Leave a Comment