Chikkamagaluru : ಕನ್ನಡದ ರಿಯಾಲಿಟಿ ಶೋ ಗಿಚ್ಚಿ ಗಿಲಿ ಗಿಲಿʼ (Gichchi Gili Gili Winner) ವಿನ್ನರ್ ಆದ ಚಂದ್ರಪ್ರಭಾ (Chandraprabha) ಅವರು ಹಿಟ್ & ರನ್ ಕೇಸ್ ವಿಚಾರವಾಗಿ ಭಾರೀ ಸುದ್ದಿಯಾಗುತ್ತಿದ್ದಾರೆ.
ಚಿಕ್ಕಮಗಳೂರು( Chikkamagaluru) ನಗರದಲ್ಲಿ ಹಿಟ್ ಅಂಡ್ ರನ್ ಆಕ್ಸಿಡೆಂಟ್ ಮಾಡಲಾಗಿದ್ದು, ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಬೈಕಿಗೆ ಗುದ್ದಿ ಕಾರು ಎಸ್ಕೇಪ್ ಆಗಿರುವ ಹಿಟ್ ಅಂಡ್ ರನ್ ಮಾಡಿ ಪರಾರಿ ಆಗಿದ್ದು, ಗಿಚ್ಚಿ ಗಿಲಿ-ಗಿಲಿ ಕಾಮಿಡಿ ಶೋ ನಟ ಚಂದ್ರ ಪ್ರಭಗೆ ಸೇರಿದ ಕಾರು ಎಂದು ಗುರುತಿಸಲಾಗಿದೆ.
ಮಜಾ ಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಸೀಸನ್ 1 ಮತ್ತು ಸೀಸನ್ 2 ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿ ಸೀಸನ್ 2 ವಿನ್ನರ್ ಟ್ರೋಫಿ ಪಡೆದಿರುವ ಚಂದ್ರಪ್ರಭ ಅವರು ಚಿಕ್ಕಮಗಳೂರು ಬಸ್ ನಿಲ್ದಾಣದ ಬಳಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭ ಬೈಕ್ ಸವಾರನಿಗೆ ಗುದ್ದಿದ್ದಾರೆ ಎನ್ನಲಾಗಿದೆ. ಈ ರೀತಿ ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಮಾನವೀಯತೆಗೂ ಕೂಡ ಕಾರು ನಿಲ್ಲಿಸದೇ ನಟ ಪರಾರಿ ಆಗಿದ್ದು, ಪೊಲೀಸ್ ಠಾಣೆಯಲ್ಲಿ (Police Station)ದೂರು ದಾಖಲಾಗಿದೆ.
ಬೈಕ್‌ನಲ್ಲಿದ್ದ ಯುವಕ ಮಾಲ್ತೇಶ್‌ಗೆ ಗುದ್ದಿ ನಟ ಎಸ್ಕೇಪ್ ಆಗಿದ್ದು, KA 51 MD 9552 ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಕಾರು ಇದಾಗಿದ್ದು, ಅಪಘಾತ ಮಾಡಿದ ಬಳಿಕ ಮಾನವೀಯತೆಗೂ ಕಾರು ನಿಲ್ಲಿಸದೆ ನಟ ಪರಾರಿ ಆಗಿದ್ದು, ಇನ್ನು ಅಪಘಾತ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರು ಮಾಲ್ತೇಶ್ ಎನ್ನುವವರ ಬೈಕ್‌ಗೆ ಗುದ್ದಿದ್ದು, ಕಾರು ಗುದ್ದಿರುವ ರಬಸಕ್ಕೆ ಮಾಲತೇಶ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಗಾಯಾಳು ಮಾಲತೇಶ್ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ನಿವಾಸಿಯಾಗಿದ್ದು, ಈತ ನಗರದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವ ಸಂದರ್ಭ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಗಾಯಾಳು ಮಾಲ್ತೇಶ್ ಹಾಸನಕ್ಕೆ ರವಾನೆ ಮಾಡಲಾಗಿದ್ದು, ಸಂಬಂಧಿಕರು ಚಿಕ್ಕಮಗಳೂರು ನಗರದ ಟ್ರಾಫಿಕ್ ಠಾಣೆಗೆ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಹಾಸ್ಯನಟ ಚಂದ್ರಪ್ರಭರವರನ್ನು ಪೊಲೀಸರು ಠಾಣೆಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತ ನಡೆದಿದ್ದರೂ ಕೂಡ ಪರಾರಿಯಾದ ನಟನ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Finger Watch: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಬೆರಳುಗಳಿಗೆ ತೊಡುವ ಗಡಿಯಾರ ! ಏನಿದರ ವಿಶೇಷತೆ.. ಇದು ಸಿಗೋದಾದ್ರೂ ಎಲ್ಲಿ?
