Rashmika Mandanna Marriage: ರಶ್ಮಿಕ ಮಂದಣ್ಣ ಮತ್ತು ವಿಜಯ ದೇವರುಕೊಂಡ ರಿಲೇಶನ್ ಶಿಪ್ ಬಗ್ಗೆ ಹಲವಾರು ಮಾತು ಕಥೆಗಳು ಹರಿದಾಡುತ್ತಲೇ ಇದೆ. ಮೈಡೀವ್ಸ್ ಗೆ ಹೋಗಿದ್ದಾಗಿ ಕೂಡ ವಿಷಯ ಫುಲ್ ವೈರಲ್ ಆಗಿತ್ತು. ಫುಲ್ ವೈರಲ್ ಸ್ಟಾರ್ ಆಗಿರುವ ಜೋಡಿ ಇದೀಗ ಮಿಂಗಲ್ ಆಗಲು ಹೊರಟಿದ್ದಾರೆ. ಹೌದು, ಇಲ್ಲಿದೆ ನೋಡಿ ಬಿಗ್ ಅಪ್ಡೇಟ್.
ಸದ್ಯದಲ್ಲೇ ವಿಜಯ್ ರಶ್ಮಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಜಯ್ ಮತ್ತು ರಶ್ಮಿಕಾ ನಡುವೆ ಏನೋ ನಡೆಯುತ್ತಿದೆ ಎಂದು ಗೊತ್ತಾಗಿದೆ.
ಗೀತ ಗೋವಿಂದಂ ಸಿನಿಮಾದಿಂದ ಇವರಿಬ್ಬರು ಒಳ್ಳೆಯ ಸ್ನೇಹಿತರಾದರು. ಈ ಸಿನಿಮಾ ಹಿಟ್ ಆದ ನಂತರ ಈ ಕಾಂಬಿನೇಷನ್ ನಲ್ಲಿ ಡಿಯರ್ ಕಾಮ್ರೇಡ್ ಬಂದಿತ್ತು. ಈ ಸಿನಿಮಾ ಅಷ್ಟಾಗಿ ಪ್ರಭಾವ ಬೀರಲಿಲ್ಲ. ಆದರೂ ಇವರಿಬ್ಬರ ನಡುವಿನ ಬಾಂಧವ್ಯ ಕಡಿಮೆಯಾಗಲಿಲ್ಲ. ಪ್ರತಿ ಹಬ್ಬಕ್ಕೂ ವಿಜಯ್ ಮನೆಗೆ ರಶ್ಮಿಕಾ ಬರುತ್ತಾರೆ ಎಂಬುದು ಸಾಮಾಜಿಕ ಜಾಲತಾಣದ ಮಾತು.
ಇತ್ತೀಚೆಗಷ್ಟೇ ಈ ಜೋಡಿ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಅದರ ಭಾಗವಾಗಿಯೇ ಎಜಂತಾ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬುದು ಲೇಟೆಸ್ಟ್ ಟಾಕ್. ಇದಕ್ಕೆ ಎರಡೂ ಕುಟುಂಬದವರು ಓಕೆ ಹೇಳಿದ್ದಾರೆಯಂತೆ. ಈ ಕಾರ್ಯಕ್ರಮವು ಫೆಬ್ರವರಿ ಎರಡನೇ ವಾರದಲ್ಲಿ ನಡೆಯಲಿದೆ. ವ್ಯಾಲೆಂಟೈನ್ಸ್ ಡೇ ಸಂದರ್ಭ ಎಂಗೇಜ್ ಆಗಲಿದ್ದಾರಂತೆ ಈ ಜೋಡಿ.
ಯಾವುದಕ್ಕೂ ಕಾದು ನೋಡಬೇಕು ಕೊನೆಯ ತನಕ. ಇಲ್ವಾ ಎಂದು ಫ್ಯಾನ್ಸ್ ಅಂತು ಕಾಯ್ತಾ ಇದ್ದಾರೆ.
