Bigg Boss Kannada 10: ಈ ಬಾರಿಯ ಹ್ಯಾಪಿ ಬಿಗ್‌ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಕುರಿತು ಕನ್ನಡಿಗರು ಬಹಳ ಕುತೂಹಲ ಹೊಂದಿದ್ದಾರೆ. ದೊಡ್ಮನೆಗೆ(Bigg Boss Kannada 10) ಪ್ರವೇಶ ಮಾಡಿದಾಗಿಂದ ಡ್ರೋನ್ ಪ್ರತಾಪ್ ಯಾರೊಂದಿಗೂ ಅಷ್ಟಾಗಿ ಬೆರೆಯುತ್ತಿಲ್ಲ. ತುಕಾಲಿ ಸಂತು ಅವರು ಡ್ರೋನ್ ಪ್ರತಾಪ್ ಗೆ ಮೋಟಿವೇಷನಲ್ ಸ್ಪೀಚ್ ಕೊಡ್ತಾ ಇದ್ದರೂ ಕೂಡಾ ಅದರ ಪ್ರಭಾವ ಪ್ರತಾಪ್ ಅವರ ಮೇಲೆ ಪ್ರಭಾವ ಬಿದ್ದಾಗೆ ಕಾಣಿಸುತ್ತಿಲ್ಲ.
ಈ ಕಾರಣದಿಂದ ಇತರ ಸ್ಪರ್ಧಿಗಳಿಗೆ ಡ್ರೋನ್ ಪ್ರತಾಪ್ ಬಗ್ಗೆ ಬ್ಯಾಡ್ ಇಂಪ್ರೆಶನ್ ಮೂಡಿದೆ. ಎಲ್ಲರಿಗೂ ಗೊತ್ತಿರುವ ಹಾಗೆ ಶಾಸಕ ಪ್ರದೀಪ್ ಈಶ್ವರ್ ಅವರು ಅತಿಥಿಯಾಗಿ ಬಿಗ್‌ಬಾಸ್ ಮನೆಯಲ್ಲಿ ಭಾಗವಹಿಸಿದ್ದರು. ಅವರು ಎಲ್ಲಾ ಸ್ಪರ್ಧಿಗಳಿಗೆ ಒಂದು ಟಾಸ್ಕ್ ನೀಡಿದ್ದರು. ಅದರಲ್ಲಿ ಪ್ರತಿಯೊಬ್ಬ ಸ್ಪರ್ಧಿ ತಮಗೆ ಅನಿಸಿದ ಗುಡ್ ಇಂಪ್ರೆಶನ್, ಬ್ಯಾಡ್ ಇಂಪ್ರೆಸನ್ ಮೂಡಿಸಿರುವ ಓರ್ವ ಸ್ಪರ್ದಿಗೆ ಕಾರಣ ಸಹಿತ ತಿಳಿಸಬೇಕಿತ್ತು. ಇದರಲ್ಲಿ ಎಲ್ಲರ ದೃಷ್ಟಿ ನೆಟ್ಟಿದ್ದು ʼಡ್ರೋನ್ ಪ್ರತಾಪ್ʼ ನ ಕಡೆಗೆ.
ತಿರುಗಿ ಬಿದ್ದ ಡ್ರೋನ್ ಪ್ರತಾಪ;
ನೀವೆಲ್ಲ ಏನು ಹೇಳಿದ್ದೀರಾ… ಎಲ್ಲಾ ಅರ್ಥ ಆಯ್ತು. ಮುಂದಿನ ದಿನಗಳಲ್ಲಿ ಇದನ್ನೆಲ್ಲಾ ಸರಿ ಮಾಡೋಣ. ಎಲ್ಲದಕ್ಕೂ ಟೈಮ್ ಬೇಕು. ಮೊದಲು ಡ್ರೋನ್ ಎಲ್ಲಿ ಅಂತ ಕೇಳಿದ್ರು. ಈಗ ಡ್ರೋನ್ ಇದೆ, ಪರ್ಮಿಷನ್ ಎಲ್ಲಿ ಅಂತ ಕೇಳಿದ್ರು, ಪರ್ಮಿಷನ್ ಬಂದ ಮೇಲೆ ಇನ್ನೊಂದೆಲ್ಲ ಅಂತ ಕೇಳ್ತಾರೆ. ನನ್ನ ಮೇಲೆ ಆರೋಪ ಇರೋದೇ ಡ್ರೋನ್ ಮಾಡಿದ್ದೀರಾ? ಬಿಟ್ಟಿದ್ದೀರಾ ಅಂತ ಎಂಬ ಮಾತನ್ನು ಹೇಳಿದ್ದಾರೆ.
ನನ್ನನ್ನು ಚಾಲೆಂಜ್ ಮಾಡುವುದೇ ಹಾಗಿದ್ದರೆ ಲೀಗಲ್ ಆಗಿ ಮಾಡಿ, ಈ ರೀತಿಯ ಅಟ್ಯಾಕ್ ಸಮಾಜದಲ್ಲಿ ಸಾಕಷ್ಟು ಜನರಿಗೆ ಆಗುತ್ತದೆ. ರಕ್ಷಕ್ ಅವರನ್ನೂ ಕೂಡಾ ಟ್ರೋಲ್ ಮಾಡಲಾಗಿದೆ. ನಿಮ್ಮಲ್ಲಿ ಧೈರ್ಯವಿದ್ದರೆ ದೊಡ್ಡದೊಡ್ಡವರನ್ನು ಚಾಲೆಂಜ್ ಮಾಡಿ, ಅದಕ್ಕೆ ಗಟ್ಸ್ ಇಲ್ವಾ? ನಿಮಗೆ ತಾಕತ್ತಿದ್ದರೆ ನನ್ನ ಮೇಲೆ ಕೇಸ್ ಫೈಲ್ ಮಾಡಿ. ನಾನು ಯಾರನ್ನೂ ನಂಬಿ ಅಂತ ಹೇಳ್ತಿಲ್ಲ, ಆದರೆ ಸ್ವಲ್ಪ ಟೈಮ್ ಕೊಡಿ ಅಂತ ಕೇಳ್ತಿದ್ದೀನಿ. ಭಾರತವನ್ನು ಡ್ರೋನ್ ಹಬ್ ಮಾಡೋ ಆಸೆ ನನ್ನದು. ಅದು ಬಿಟ್ಟರೆ ಬೇರೆ ಏನೂ ಇಲ್ಲ ನನ್ನಲ್ಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: BBK Season 10: ಶಾಸಕ ಪ್ರದೀಪ್ ಈಶ್ವರ್ ಬಿಗ್‌ಬಾಸ್ ಮನೆಯಿಂದ ಒಂದೇ ದಿನಕ್ಕೆ ʼಔಟ್ʼ!!!
