Home » BBK Season 10: ತನಿಷಾ ಕುಪ್ಪಂಡಗೆ ಹೆಚ್ಚಿತು ಸಮಸ್ಯೆ! ಬಿಗ್‌ಬಾಸ್‌ ಆಡಳಿತ ಮಂಡಳಿಗೆ ಪೊಲೀಸ್‌ ನೋಟಿಸ್‌!!!

BBK Season 10: ತನಿಷಾ ಕುಪ್ಪಂಡಗೆ ಹೆಚ್ಚಿತು ಸಮಸ್ಯೆ! ಬಿಗ್‌ಬಾಸ್‌ ಆಡಳಿತ ಮಂಡಳಿಗೆ ಪೊಲೀಸ್‌ ನೋಟಿಸ್‌!!!

by Mallika
1 comment
Tanisha kuppanda case

Tanisha kuppanda case: ಬೋವಿ ಸಮುದಾಯದ ಬಗ್ಗೆ ಹೇಳಿದ ಅವಹೇಳನಕಾರಿ ಹೇಳಿಕೆ ನೀಡಿದ ಬಿಗ್‌ಬಾಸ್‌ ಸ್ಪರ್ಧಿ ತನಿಷಾ ಕುಪ್ಪಂಡಗೆ (Tanisha kuppanda case) ಸಮಸ್ಯೆ ಎದುರಾಗಿದೆ. ಬಿಗ್‌ಬಾಸ್‌ ಆಡಳಿತ ಮಂಡಳಿಗೆ ಇದೀಗ ಪೊಲೀಸ್‌ ನೋಟಿಸ್‌ ನೀಡಿದ್ದಾರೆ.

ಈ ಪ್ರಕರಣ ಕುರಿತು ವಿಚಾರಣೆ ನಡೆಸಲು ಪೊಲೀಸರು ಬಿಗ್‌ಬಾಸ್‌ ಆಡಳಿತ ಮಂಡಳಿಗೆ ನೋಟಿಸ್‌ ನೀಡಿದ್ದಾರೆ. ಅಸಲಿ ಫೂಟೇಜ್‌ ನೀಡಲು ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಅಸಲಿ ಫೂಟೇಜ್‌ ಪಡೆದು ನಂತರ ಪೊಲೀಸರು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಬೋವಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ತನಿಷಾ ಕುಪ್ಪಂಡ ವಿರುದ್ಧ ಆರೋಪಿಸಿ ಕುಂಬಳಗೋಡು ಠಾಣೆಯಲ್ಲಿ ಎಫ್‌ಐಆರ್‌ನ್ನು ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ಅವರು ದೂರು ನೀಡಿದ್ದಾರೆ. ಪೊಲೀಸರು ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯಿದೆಯಡಿ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ವಡ್ಡ ಎಂಬ ಪದ ಬಳಕೆ ಮಾಡಿರುವ ಕುರಿತು ತನಿಷಾ ಕುಪ್ಪಂಡ ಅವರಿಗೆ ಆರೋಪ ಮಾಡಿದ್ದು, ಇದಕ್ಕೆ ಕ್ಷಮೆಯಾಚಿಸಬೇಕು ಎಂದು ಪದ್ಮಾ ಅವರು ಆಗ್ರಹಿಸಿದ್ದಾರೆ. ಈ ಪದ ಬಳಕೆ ಹಿನ್ನೆಲೆಯ ಬಿಗ್‌ಬಾಸ್‌ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇದನ್ನೂ ಓದಿ: Udupi Family Murder Case: ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಆರೋಪಿ ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರು, ಸ್ಥಳದಲ್ಲಿ ಬಿಗಿಬಂದೋಬಸ್ತು!!!

You may also like

Leave a Comment