Home » Kirik Keerthi post: ಡಿವೋರ್ಸ್ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಿರಿಕ್ ಕೀರ್ತಿ- ಕೊನೆಗೂ ಆ ನಿರ್ಧಾರ ಮಾಡೇ ಬಿಟ್ರಾ ?!

Kirik Keerthi post: ಡಿವೋರ್ಸ್ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕಿರಿಕ್ ಕೀರ್ತಿ- ಕೊನೆಗೂ ಆ ನಿರ್ಧಾರ ಮಾಡೇ ಬಿಟ್ರಾ ?!

1 comment
Kirik Keerthi new post

Kirik Keerthi Post: ಬಿಗ್ ಬಾಸ್ ಕನ್ನಡ ಖ್ಯಾತಿಯ ಕಿರಿಕ್ ಕೀರ್ತಿ (ಕಿರಿಕ್ ಕೀರ್ತಿ )ತಮ್ಮ ದಾಂಪತ್ಯ ಜೀವನದಲ್ಲಿ ಸಾಕಷ್ಟು ಗೊಂದಲಗಳು, ಗಾಸಿಪ್ ಗಳು ನಡೆದಿವೆ. ಇದೀಗ ಇಂತಹ ಸುದ್ದಿಗೆ ಅಧಿಕೃತವಾಗಿ ಅಂತ್ಯ ಹಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತ ಪೋಸ್ಟ್( Kirik Keerthi new post)ಹಾಕಿದ್ದಾರೆ.

ಈ ಮೊದಲು “ಕಾನೂನಿನ ಪ್ರಕಾರ ಇವತ್ತು ನನ್ನ ಜೊತೆ ಅರ್ಪಿತಾಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೆ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ. ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ” ಎಂದು ಕಿರಿಕ್ ಕೀರ್ತಿ ವಿಚ್ಛೇದನವನ್ನು ಪ್ರಕಟಿಸಿದ್ದರು.

ಇದೀಗ ಇನ್ನೊಂದು ಪೋಸ್ಟ್ ಹಾಕಿದ್ದು, “ಸಾಕಷ್ಟು ದಿನದಿಂದ ಒಡ್ಡಿದ್ದಕ್ಕೆ ಕೊನೆಗೂ ಪರಿಹಾರ ಕೊಡೋಕೆ ಭಗವಂತ ಡಿಸೈಡ್ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

“ಅಬ್ಬಬ್ಬಾ… ಕಳೆದ 4-5 ತಿಂಗಳಿಂದ ಕಳೆದ ಒಂದೊಂದು ದಿನಗಳು ಒಂದೊಂದು ಯುಗ ಅನಿಸಿಬಿಟ್ಟಿತ್ತು. ಅದೇನೋ ಹೇಳ್ತಾರಲ್ಲ, ಶನಿ ಹೆಗಲೇರಿದ್ದಾರೆ ಅಂತ, ಏನಿಲ್ಲ. ಎಲ್ಲದಕ್ಕೂ ಅಡೆತಡೆ… ಎಲ್ಲವೂ ಕೈಗೆಟುಕುವುದರೊಳಗೆ ಕಿಲೋಮೀಟರ್ ದೂರ ಹೋಗೀಬಿಡ್ತಿತ್ತು. ಯಾರು ನನ್ನವರು, ಯಾರು ನನ್ನವರಲ್ಲ ಅಂತ ಅರ್ಥ ಕೊಡೋಕೆ ತುಂಬಾ ಸಮಯ ಹಿಡಿಯಿತು. ಮುಂಚೆ ಭಗವಂತ ಸಿಕ್ಕಾಪಟ್ಟೆ ಕಿತ್ತುಕೊಳ್ತಾನಂತೆ.ಹಾಗೆ ಸಾಕಷ್ಟು ಕಿತ್ತುಕೊಂಡು ಕೊನೆಗೂ ನನಗೆ ಭಗವಂತ ಕೃಪೆ ತೋರೋಕೆ ನಿರ್ಧಾರ ಮಾಡಿದೆ.ಕಣ್ಣೀರು,ಬೇಜಾರು,ನೋವುಗಳಿಗೆ ಪುಲ್ ಸ್ಟಾಪ್ ಇಟ್ಟು ಬದುಕಿಸೋ ನಿರ್ಧಾರ ಮಾಡಿದೆ.ಸಾಕಷ್ಟು ದಿನದಿಂದ ಒದ್ದಾಡಿದ್ದಕ್ಕೆ ಕೊನೆಗೂ ಪರಿಹಾರ ಕೊಡೋಕೆ ಭಗವಂತ ಡಿಸ್ಕೊಂಡು ಎಷ್ಟೋ ಜನರ ಜೊತೆ ಮಾತಾಡಲಿಲ್ಲ. ಮಾಡಿಲ್ಲ.ಸಾಕಪ್ಪಾ ಸಾಕು ಅನಿಸಿಬಿಟ್ಟಿತ್ತು.ಈ ಟೈಮಲ್ಲಿ ನೊಂದುಕೊಂಡವರಿಗೆ ಬೈದುಕೊಂಡವರಿಗೆ ಕ್ಷಮೆ ಕೇಳ್ತೀನಿ..ನನಗೆ ಲೈಫಲ್ಲೂ ನನ್ನ ದಿನಗಳು ಬರ್ತಿದೆ. ವೀಡಿಯೋ ಮಾಡಿ ಅದನ್ನು ನಿಮ್ಮ ಜೊತೆ ಹಂಚಿಕೊಳ್ತೀನಿ. ನಿಟ್ಟುಸಿರು ಬಿಟ್ಟು ಸಂಭ್ರಮಿಸ್ತೀನಿ. ಇದು ಕೇವಲ ಸಮಯದ ವಿಷಯವಾಗಿದೆ. ಈ ಎಲ್ಲಾ ದಿನಗಳಿಗಾಗಿ ನಾನು ಕ್ಷಮಿಸಿ. ಅದೆಷ್ಟೋ ಜೀವಗಳ ಹಾರಿಕೆ, ಆಶೀರ್ವಾದ ಸದ್ಯದಲ್ಲೇ ಫಲಿಸಲಿದೆ. ಹೌದು…ನಾನು ಮರಳಿ ಬರುತ್ತಿದ್ದೇನೆ. ಧನ್ಯವಾದ ನಿಮಗೆಲ್ಲಾ” ಎಂದು ಇನ್ಸ್ಟಾಗ್ರಾಮ್ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಶಾಲೆಯಿಂದ ಹೊರಗುಳಿದ ಮಕ್ಕಳೇ ಎಚ್ಚೆತ್ತುಕೊಳ್ಳಿ- ಶಿಕ್ಷಣ ಇಲಾಖೆಯಿಂದ ಹೊರಬಿತ್ತು ಮಹತ್ವದ ಆದೇಶ !!

You may also like

Leave a Comment