Home » Mahalakshmi-Ravindar: ರಾತ್ರಿ ನಿದ್ದೆ ಮಾಡಿದ್ರೂ ಅದಕ್ಕಾಗಿ ಎಬ್ಬಿಸ್ತಾನೆ, ಎಷ್ಟು ಬೇಡ ಅಂದ್ರೂ ಸುಮ್ಮನಾಗಲ್ಲ !! ದಢೂತಿ ಗಂಡನ ಹೊಸ ಚಾಳಿ ಹೇಳಿ ಕಣ್ಣೀರಾಕಿದ ಮಹಾಲಕ್ಷ್ಮೀ!!

Mahalakshmi-Ravindar: ರಾತ್ರಿ ನಿದ್ದೆ ಮಾಡಿದ್ರೂ ಅದಕ್ಕಾಗಿ ಎಬ್ಬಿಸ್ತಾನೆ, ಎಷ್ಟು ಬೇಡ ಅಂದ್ರೂ ಸುಮ್ಮನಾಗಲ್ಲ !! ದಢೂತಿ ಗಂಡನ ಹೊಸ ಚಾಳಿ ಹೇಳಿ ಕಣ್ಣೀರಾಕಿದ ಮಹಾಲಕ್ಷ್ಮೀ!!

2 comments
Mahalakshmi-Ravindar

Mahalakshmi-Ravindar: ತಮಿಳು ಕಿರುತೆರೆಯ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರ ಚಂದ್ರಶೇಖರ್ (Ravindar chandrasekaran And Mahalakshmi)ಜೋಡಿ ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಮದುವೆಯ ಬಳಿಕ ಒಂದಲ್ಲ ಒಂದು ವಿಚಾರಕ್ಕೆ ನೆಟ್ಟಿಗರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಕಾಲೆಳೆಯುವ ಮಂದಿಯೇ ಹೆಚ್ಚು. ಇದೆಲ್ಲದರ ನಡುವೆ ರವೀಂದ್ರ ಚಂದ್ರಶೇಖರ್( Ravindar Chandrasekaran) ಜೈಲು ಪಾಲಾಗಿ ಹೊರ ಬಂದಿದ್ದು ನೆನಪಿರಬಹುದು.

ರವೀಂದರ್‌ ಜೈಲಿಂದ ಮರಳಿ ಮನೆಗೆ ಬಂದು ಪತ್ನಿ ಜತೆಗೆ ಜೀವಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯೂಟ್ಯೂಬ್‌ಗಳ ಸಂದರ್ಶನದಲ್ಲಿ ರವೀಂದರ್‌ ಜೈಲಿನಲ್ಲಿ ಸೆರೆಯಾಗಿದ್ದ ಸಂದರ್ಭ ಅನುಭವಿಸಿದ ನರಕ ಯಾತನೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದರು. ಅವರ ದಡೂತಿ ದೇಹದಿಂದಾಗಿ ಜೈಲಿನಲ್ಲಿ ಬಾಥ್‌ರೂಮ್‌ಗೆ ಹೋಗಲು ಆಗದೇ ತುಂಬಾ ಸಮಸ್ಯೆ ಎದುರಿಸಿದರಂತೆ . ದಡೂತಿ ದೇಹದಿಂದ ಅನೇಕ ಸಮಸ್ಯೆಗಳು ಉಂಟಾದ ಹಿನ್ನೆಲೆ ಮಹಾಲಕ್ಷ್ಮೀಯವರು (Mahalakshmi-Ravindar) ಮನೆಗೆ ಬಂದ ಪತಿಗೆ ಕಟ್ಟುನಿಟ್ಟಾದ ಆಹಾರ ಪದ್ಧತಿ ಪಾಲಿಸಲು ಸೂಚಿಸಿದ್ದರಂತೆ. ಆದರೆ, ಈ ನಡುವೆ, ಪತಿಯ ಒಂದು ಅಭ್ಯಾಸ ತಮ್ಮನ್ನು ಧರ್ಮ ಸಂಕಟಕ್ಕೆ ಸಿಲುಕಿಸಿದೆ ಎಂದು ಮಹಾಲಕ್ಷ್ಮೀ ಕಣ್ಣೀರು ಹಾಕಿದ್ದಾರೆ.

ರವೀಂದರ್‌ ಸಾಮಾನ್ಯಕ್ಕಿಂತ ಹೆಚ್ಚು ತೂಕ ಹೊಂದಿರುವ ಹಿನ್ನೆಲೆ ತೂಕ ಕಮ್ಮಿ ಮಾಡುವುದು ಸುಲಭದ ಮಾತಲ್ಲ. ದಡೂತಿ ದೇಹದ ತೂಕ ಕಡಿಮೆ ಮಾಡುವುದು ಕಷ್ಟವೇ ಸರಿ!! ತಮ್ಮ ಸೀರಿಯಲ್‌ ಕೆಲಸದ ನಡುವೆ ಕೂಡ ಮಹಾಲಕ್ಷ್ಮೀ ಪತಿಯ ಬಗ್ಗೆ ಹೆಚ್ಚು ಗಮನ ವಹಿಸುತ್ತಿದ್ದಾರಂತೆ. ಆದರೆ, ಪತಿಯ ತೂಕ ಇಳಿಸುವುದರಲ್ಲಿ ತಮ್ಮ ತೂಕವನ್ನೇ ಮಹಾಲಕ್ಷ್ಮೀ ಹೆಚ್ಚಿಸಿಕೊಳ್ಳುತ್ತಿದ್ದಾರಂತೆ.

“ಅವರ ದೇಹ ತೂಕ ಕಡಿಮೆ ಮಾಡಲು, ಎಷ್ಟೇ ಪ್ರಯತ್ನಿಸುತ್ತಿದ್ದರೂ, ರವೀಂದರ್‌ ಅದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾನು ಅವರ ಜತೆಗಿದ್ದಾಗ ನನ್ನ ಡಯಟ್‌ ಕೂಡ ತಪ್ಪುತ್ತಿದೆ. ರಾತ್ರಿ ನಾನು ಮಲಗಿದ್ದರೂ, ನನ್ನನ್ನು ಎಬ್ಬಿಸಿ ತಿನ್ನುವಂತೆ ಒತ್ತಾಯ ಮಾಡುವ ಹಿನ್ನೆಲೆ ಅದೆಷ್ಟೋ ಬಾರಿ ನಾನು ತಿಂದಿದ್ದೂ ಇದೆ. ಅಷ್ಟೇ ಅಲ್ಲದೆ, ತಿನ್ನಲು ಶುರು ಮಾಡಿ ಬಿಟ್ಟರೆ ಹೊಟ್ಟೆ ತುಂಬುವ ಹಾಗೆ ತಿನ್ನುತ್ತಿದ್ದೇನೆ. ಹೀಗಾಗಿ ಸರಿಯಾದ ಕ್ರಮದಲ್ಲಿ ಡಯಟ್‌ ಅನುಸರಿಸಲು ನನ್ನಿಂದ ಕೂಡ ಆಗುತ್ತಿಲ್ಲ. ಹೀಗಾಗಿ, ನನ್ನ ನಿದ್ರೆಗೆಡುವ ಜೊತೆಗೆ ದಿನೇದಿನೆ ನನ್ನ ತೂಕ ಕೂಡ ಹೆಚ್ಚಾಗುತ್ತಿದೆ. ಇದೇ ಕ್ರಮ ಮುಂದುವರಿಯುತ್ತಾ ಹೋದರೆ ಮುಂದೊಂದು ದಿನ ನಾನು ಕೂಡ ಅವರಂತೆ ಆದರೂ ಆಗಬಹುದು” ಎಂದು ಮಹಾಲಕ್ಷ್ಮೀ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡು ಬೇಸರ ವ್ಯಕ್ತ ಪಡಿಸಿದ್ದರು.

ಇದನ್ನೂ ಓದಿ: Belagavi Winter Session: ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್- ಮುಂದಿನ ವರ್ಷದಿಂದಲೇ ಸೈಕಲ್ ವಿತರಣೆ , ಆದರೆ ಸೈಕಲ್ ಸಿಗೋದು ಇನ್ನು ಈ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ!!

You may also like

Leave a Comment