Home » “ಕರಿಯರ್‌ನಲ್ಲಿ ಪ್ರಮೋಷನ್ ಬೇಕಂದ್ರೆ ಅದು ಬ್ರಾಡ್‌ ಆಗಿ ಇರಬೇಕು ಎಂದ ನಾಯಕಿ ನಟಿ ” ಅಬ್ಬಾ….ಹೀಗೂ ಉಂಟಾ ?!

“ಕರಿಯರ್‌ನಲ್ಲಿ ಪ್ರಮೋಷನ್ ಬೇಕಂದ್ರೆ ಅದು ಬ್ರಾಡ್‌ ಆಗಿ ಇರಬೇಕು ಎಂದ ನಾಯಕಿ ನಟಿ ” ಅಬ್ಬಾ….ಹೀಗೂ ಉಂಟಾ ?!

0 comments
Actress Tamannaah

Actress Tamannaah: ಕಾಲಿವುಡ್ ನಟಿ ತಮನ್ನಾ ಭಾಟಿಯಾ ಅವರಿಗೆ 32 ವರ್ಷವಾಗಿದ್ದು ಕನ್ನಡ, ಹಿಂದಿ, ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಸೌತ್‌ ಸುಂದರಿ ತಮನ್ನಾ (actress Tamannaah) ನೋ ಕಿಸ್ಸಿಂಗ್‌ ರೂಲ್ಸ್‌ ಬ್ರೇಕ್‌ ಮಾಡಿ ತೆರೆ ಮೇಲೆ ಸಕತ್ ಬೋಲ್ಡ್‌ ಆಗಿ ನಟಿಸುತ್ತಿದ್ದಾರೆ.

ಅತೀ ಶೀಘ್ರದಲ್ಲಿ ಅಂದರೆ, ಆಗಸ್ಟ್ 10ಕ್ಕೆ ತಮನ್ನಾ ನಟನೆಯ ‘ಜೈಲರ್’ ಸಿನಿಮಾ ರಿಲೀಸ್ ಆಗಲಿದ್ದು, ಮಿಲ್ಕಿ ಬ್ಯೂಟಿ ರಜನಿಕಾಂತ್‌ ಜೊತೆ ಮಿಂಚಿದ್ದಾರೆ. ಈಗಾಗಲೇ ಈ ಸಿನಿಮಾದ ಕಾವಾಲಾ ಸಾಂಗ್‌ ರಿಲೀಸ್‌ ಆಗಿ ಸಾಕಷ್ಟು ಸುದ್ದಿ ಮಾಡುತ್ತಿದೆ. ನೆಲ್ಸನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು ಅಲ್ಲದೇ, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ತಮನ್ನಾ ನಟಿಸಿರುವ ಮತ್ತೊಂದು ಸಿನಿಮಾ ತೆಲುಗಿನ ಭೋಳಾ ಶಂಕರ ಸಿನಿಮಾ. ಈ ಚಿತ್ರದಲ್ಲಿ ಮೆಗಾಸ್ಟಾರ್‌ ಚಿರಂಜೀವಿ ಜೊತೆ ತಮನ್ನಾ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಈ ಎರಡು ಸಿನಿಮಾ ಪ್ರಮೋಷನ್‌ನಲ್ಲಿ ನಟಿ ಸಖತ್‌ ಬ್ಯೂಸಿಯಾಗಿದ್ದಾರೆ.

ಅಲ್ಲದೇ ನಟಿ ತಮನ್ನಾ ಇತ್ತೀಚೆಗೆ ‘ಜೀ ಕರ್ದಾ’ ಹಾಗೂ ‘ಲಸ್ಟ್ ಸ್ಟೋರಿಸ್-2’ ವೆಬ್ ಸೀರಿಸ್‌ನಲ್ಲಿ ಸಖತ್‌ ಬೋಲ್ಡ್‌ ಆಗಿ ನಟಿಸಿದ್ದಾರೆ. “ನಮ್ಮ ಸುತ್ತ ಜನ ಏನೇನೋ ಮಾತಾನಾಡುತ್ತಾರೆ ಅದರಲ್ಲಿ ಯಾವುದು ಸರಿ..? ಯಾವುದು ತಪ್ಪು..? ಎಂದು ಮೊದಲು ನಾವು ತಿಳಿದುಕೊಳ್ಳಬೇಕು ಎಂದಿದ್ದಾರೆ.

ಇನ್ನು ಇತ್ತೀಚೆಗೆ ತೆಲುಗು ಸಂದರ್ಶನದಲ್ಲಿ ಮಾತನಾಡಿದ ತಮನ್ನಾ “ನಾವು ಬದಲಾಗದಿದ್ದರೆ ಎಲ್ಲಿ ಇದ್ದೇವೋ ಅಲ್ಲೆ ಇರಬೇಕಾಗುತ್ತದೆ. ಆ ರೀತಿ ಇರಲು ಯಾರು ಬಯಸುವುದಿಲ್ಲ. ಎಲ್ಲರೂ ತಮ್ಮ ಕರಿಯರ್‌ನಲ್ಲಿ ಬೆಳೆಯಬೇಕು ಎಂದುಕೊಳ್ಳುತ್ತಾರೆ. ಪ್ರತಿ ಕೆಲಸದಲ್ಲಿಯೂ ಪ್ರಮೋಷನ್‌ ಇರುತ್ತೆ ಅದಕ್ಕಾಗಿ ಸ್ವಲ್ಪ ಬ್ರಾಡ್‌ ಆಗಿ ಯೋಚಿಸಬೇಕು, ಹೊಸ ಪ್ರಯತ್ನ ಮಾಡಬೇಕು ಆಗ ಮಾತ್ರ ನಮ್ಮ ಸಿನಿ ಜರ್ನಿ ಸುದೀರ್ಘವಾಗಿರುತ್ತದೆ ಮತ್ತು ಚೆನ್ನಾಗಿ ಇರುತ್ತದೆ ” ಎಂದು ತಮನ್ನಾ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ: ಗಡುವು ಮತ್ತೆಂದೂ ವಿಸ್ತರಣೆ ಇಲ್ಲ, ಅಷ್ಟರೊಳಗೆ ಧಾವಿಸಿ ಬೆಲೆ ವಿಮೆ ಮಾಡಿಸಿಕೊಳ್ಳಿ

You may also like