Home » Actor Jayam Ravi: 15 ವರ್ಷಗಳ ದಾಂಪತ್ಯ ಕೊನೆಗೊಳಿಸಿದ ಖ್ಯಾತ ನಟ ಜಯಂ ರವಿ

Actor Jayam Ravi: 15 ವರ್ಷಗಳ ದಾಂಪತ್ಯ ಕೊನೆಗೊಳಿಸಿದ ಖ್ಯಾತ ನಟ ಜಯಂ ರವಿ

0 comments

Actor Jayam Ravi: ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಡಿವೋರ್ಸ್‌ ನಂತರ ಇದೀಗ ಸೌತ್‌ ಸಿನಿ ರಂಗದ ಖ್ಯಾತ ನಟ ತಮ್ಮ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆದಿದ್ದಾರೆ. ದಕ್ಷಿಣ ಸಿನಿಮಾ ರಂಗದ ಖ್ಯಾತ ನಟ ಜಯಂ ರವಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದು ಹಾಗೂ ಇದರಲ್ಲಿ ಅವರು ತಾವು ವಿಚ್ಛೇದನ ಪಡೆದಿರುವುದಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ನಟ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸುದೀರ್ಘ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ, ಇದನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ.

ನಟ ಜಯಂ ರವಿ 15 ವರ್ಷಗಳ ನಂತರ ಪತ್ನಿ ಆರತಿಗೆ ವಿಚ್ಛೇದನ ನೀಡಿದ್ದಾರೆ. ತನ್ನ 15 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ ನಟ ಜಯಂ ರವಿ. ಜಯಂ ರವಿ ಎರಡು  ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು ಮತ್ತು ಅವರ ಮಾಜಿ ಪತ್ನಿ ಆರತಿ ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.

ದಂಪತಿಗಳು 2009 ರಲ್ಲಿ ವಿವಾಹವಾಗಿದ್ದು, ಇವರಿಬ್ಬರಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆರತಿ ಖ್ಯಾತ ದೂರದರ್ಶನ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಪುತ್ರಿ.

 

You may also like

Leave a Comment