ಜನಪ್ರಿಯ ಚಲನಚಿತ್ರ ವಿಮರ್ಶಕ LM ಕೌಶಿಕ್ ಅವರು ತಮ್ಮ ಸಣ್ಣ ವಯಸ್ಸಿಗೇ ಇಹಲೋಕ ತ್ಯಜಿಸಿದ್ದಾರೆ. ವರದಿಗಳ ಪ್ರಕಾರ, ನಿನ್ನೆ ಮಧ್ಯಾಹ್ನ ಕೌಶಿಕ್ ನಿದ್ರೆ ಮಾಡುವುದಾಗಿ ಹೇಳಿ ತಮ್ಮ ರೂಮ್‌ಗೆ ಹೋಗಿದ್ದಾರೆ. ಈ ವೇಳೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
“ಖ್ಯಾತ ಚಲನಚಿತ್ರ ವಿಮರ್ಶಕ, ಚಲನಚಿತ್ರ ಟ್ರ್ಯಾಕರ್, ಮತ್ತು ಗಲಟ್ಟಾ ವಿಜೆ @LMKMovieManiac ಇಂದು ಹೃದಯಾಘಾತದಿಂದ ನಿಧನರಾದರು. ಅವರ ನಿಧನವು ತುಂಬಲಾರದ ನಷ್ಟವಾಗಿದೆ. ನಾವು ಇಲ್ಲಿ ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದೇವೆ ಎಂದು ದಕ್ಷಿಣದ ಪ್ರಮುಖ ಖಾಸಗಿ ಮನರಂಜನಾ ಸುದ್ದಿ ಪೋರ್ಟಲ್‌ಗಳಲ್ಲಿ ಒಂದಾದ ಸಂಸ್ಥೆಯು ಮಾಹಿತಿ ನೀಡಿದೆ.
i
This is heart breaking !! Rest in peace @LMKMovieManiac brother. Gone too soon. My deepest condolences to his family and friends.
ಕೌಶಿಕ್ ಅವರ ಅಂತಿಮ ಸಂಸ್ಕಾರ ಇಂದು ಚೆನ್ನೈನಲ್ಲಿ ನಡೆಯಲಿದೆ. ತಮಿಳು ನಟ ಧನುಷ್, ದುಲ್ಕರ್ ಸಲ್ಮಾನ್, ರಾಕುಲ್ ಪ್ರೀತ್ ಮತ್ತು ವೆಂಕಟ್ ಪ್ರಭು ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಕೌಶಿಕ್ ಅವರ ಅಕಾಲಿಕ ಮರಣದ ಬಗ್ಗೆ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.