4
Orry: ಧಾರ್ಮಿಕ ಸ್ಥಳದ ಬಳಿಯಿರುವ ಹೋಟೆಲ್‌ವೊಂದರಲ್ಲಿ ಮದ್ಯ ಸೇವಿ ಪಾರ್ಟಿ ಮಾಡಿದ್ದಕ್ಕೆ ಓರ್ಹಾನ್ ಅವತ್ರಮಣಿ (ORRY) ಸೇರಿ ಏಳು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮಾತಾ ವೈಷ್ಣೋದೇವಿ ದೇವಾಲಯದ ಬಳಿಯಿರುವ ಹೋಟೆಲ್‌ನಲ್ಲಿ ಸ್ನೇಹಿತರ ಜೊತೆ ಸೇರಿ ಮದ್ಯ ಸೇವನೆ ಮಾಡಿ ಪಾರ್ಟಿ ಮಾಡಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೇರಿ ಏಳು ಮಂದಿಯ ಮೇಲೆ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಮಾತಾ ವೈಷ್ಣೋದೇವಿ ದೇವಾಲಯದ ಬೇಸ್ ಕ್ಯಾಂಪ್‌ನಲ್ಲಿರುವ ಕತ್ರಾದ ಹೊಟೇಲ್‌ನಲ್ಲಿ ಪಾರ್ಟಿ ಮಾಡುವ ಫೋಟೋ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಪ್ರದೇಶದಲ್ಲಿ ಮದ್ಯ, ಮಾಂಸಾಹಾರ ಸೇವನೆ ನಿಷೇಧ ಮಾಡಲಾಗಿದೆ. ಇದನ್ನು ಓರಿ ಅವರಿಗೆ ಹೇಳಿದರೂ ಕೂಡಾ ಅವರು ಅದನ್ನು ಪಾಲಿಸದೆ ನಿಯಮ ಉಲ್ಲಂಘನೆ ಮಾಡಿದ್ದಾರೆ.
