ನೀವು ಮೊಬೈಲ್ ಕೊಂಡು ಕೊಳ್ಳುವ ಯೋಜನೆ ಹಾಕಿದ್ದರೆ ಈ ಭರ್ಜರಿ ಆಫರ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ವೆಬ್ ಸೈಟ್ ಫ್ಲಿಪ್‌ಕಾರ್ಟ್ (Flipkart) ನಲ್ಲಿ ಭರ್ಜರಿ ಆಫರ್ ಜೊತೆಗೆ ಕೈಗೆ ಎಟಕುವ ದರದಲ್ಲಿ ಮೊಬೈಲ್ ನಿಮ್ಮದಾಗಿಸಿ ಕೊಳ್ಳಬಹುದು.
ನೀವು iPhone 14 ಅನ್ನು ಖರೀದಿಸಲು ಬಯಸಿದರೆ, ಫ್ಲಿಪ್‌ಕಾರ್ಟ್‌ನ ಈ ಒಪ್ಪಂದವು ನಿಮಗೆ ಪ್ರಯೋಜನಕಾರಿಯಾಗಲಿದೆ. ಫ್ಲಿಪ್‌ಕಾರ್ಟ್ ನಿಮಗಾಗಿ ಬಂಪರ್ ಕೊಡುಗೆ ನೀಡುತ್ತಿದ್ದು, ಇದರಲ್ಲಿ ನೀವು ಭಾರಿ ರಿಯಾಯಿತಿಗಳ ಲಾಭವನ್ನು ಪಡೆಯಬಹುದಾಗಿದೆ. ಇದುವರೆಗೆ ಬಜೆಟ್ ಸಿದ್ಧಪಡಿಸದೇ ಇರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ನೀವು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಐಫೋನ್ 14 ಮಾದರಿಯನ್ನು ಖರೀದಿಸಬಹುದಾಗಿದೆ.
ನೀವೂ ಕೂಡ ರಿಯಾಯಿತಿ ದರದಲ್ಲಿ ಐಫೋನ್ 14 ಖರೀದಿ ಮಾಡುವ ಪ್ಲಾನ್ ಹಾಕಿದ್ದರೆ, ಈ ಕೊಡುಗೆಯನ್ನು ಖಂಡಿತ ಮಿಸ್ ಮಾಡಿಕ್ಕೊಳ್ಳ ಬೇಡಿ. ಪ್ರಸ್ತುತ ಫ್ಲಿಪ್‌ಕಾರ್ಟ್ ಐಫೋನ್ 14 ಖರೀದಿಯ ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿ ನೀಡುತ್ತಿದ್ದು, ಇದರ ಅಡಿಯಲ್ಲಿ ಐಫೋನ್ 14 ಅನ್ನು 23,000 ರೂ.ಗಳ ಭರ್ಜರಿ ರಿಯಾಯಿತಿಯೊಂದಿಗೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಐಫೋನ್ 14 ನ ನೈಜ ಬೆಲೆ 79,900 ರೂ. ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಈ ಐಫೋನ್‌ನಲ್ಲಿ 5,910 ರೂಪಾಯಿಗಳ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಫೋನ್ ಅನ್ನು 73,990ರೂ.ಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಆದರೆ ನೀವು ಖರೀದಿಯಲ್ಲಿ ಲಭ್ಯವಿರುವ ಬ್ಯಾಂಕ್ ಕೊಡುಗೆಯ ಜೊತೆಗೆ ವಿನಿಮಯ ಕೊಡುಗೆಗಳ ಆಫರ್ ನಲ್ಲಿ ನಿಮ್ಮದಾಗಿಸಿಕೊಂಡರೆ, ಅತಿ ಕಡಿಮೆ ಬೆಲೆಗೆ ಕೈ ಗೆ ಎಟಕುವ ದರದಲ್ಲಿ ಮೊಬೈಲ್ ಅನ್ನು ಪಡೆಯಬಹುದು.
ಐಫೋನ್ 14 ಖರೀದಿಯಲ್ಲಿ ಭರ್ಜರಿ ವಿನಿಮಯ ಕೊಡುಗೆ ದೊರೆಯಲಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಖರೀದಿಯಲ್ಲಿ 23,000 ರೂ.ಗಳ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದ್ದು, ಇದೆಲ್ಲದರ ಜೊತೆಗೆ ನೀವು ಮತ್ತೆ ಕೂಡ ದುಬಾರಿ ಆಯ್ತು ಎನಿಸಿದರೆ ಮತ್ತೊಂದು ಆಫರ್ ಕೂಡ ನಿಮಗಾಗಿ ಕಾದಿವೆ.
ಏನಪ್ಪಾ!!! ಅಂತೀರಾ?? ಮತ್ತೆ ಕೂಡ ಡಿಸ್ಕೌಂಟ್ ಅನ್ನು ಪಡೆಯಲು ನೀವು ಇಚ್ಛಿಸಿದರೆ, ಐಫೋನ್ ಖರೀದಿ ಸಮಯದಲ್ಲಿ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ನೀವು ಎಕ್ಸ್ಚೇಂಜ್ ಮಾಡಿಕೊಳ್ಳಬಹುದು. ಆದರೆ, ಮಾಡೆಲ್ ಇತ್ತೀಚಿನದ್ದಾಗಿದ್ದು, ಸ್ಮಾರ್ಟ್‌ಫೋನ್ ಉತ್ತಮ ಗುಣಮಟ್ಟದಲ್ಲಿದ್ದರೆ ಮಾತ್ರ ಈ ರಿಯಾಯಿತಿ ನಿಮಗೆ ಲಭ್ಯವಾಗಲಿದೆ ಎಂಬುದನ್ನು ಗಮನಿಸಬೇಕು.
ಇದರೊಂದಿಗೆ ನೀವು 79,900 ರೂ.ಗಳ ಐಫೋನ್ 14 ಅನ್ನು 50,990ರೂ.ಗಳಿಗೆ ನಿಮ್ಮದಾಗಿಸಿಕೊಳ್ಳಲು ಸುವರ್ಣ ಅವಕಾಶ ಕಲ್ಪಿಸಲಾಗಿದೆ. ಐಫೋನ್ 14 ಅನ್ನು ಖರೀದಿಸಲು ನೀವು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಬಳಸಿದ್ದಲ್ಲಿ ನಿಮಗೆ 4,000 ರೂಪಾಯಿಗಳ ತ್ವರಿತ ರಿಯಾಯಿತಿ ಲಭ್ಯವಾಗಲಿದ್ದು ಇದರ ಜೊತೆಗೆ ನೀವು ಎಕ್ಸ್ಚೇಂಜ್ ಆಫರ್ ಪ್ರಯೋಜನವನ್ನು ಪಡೆಯುವ ಮೂಲಕ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ನಿಮ್ಮ ನೆಚ್ಚಿನ ಐಫೋನ್ ಖರೀದಿ ಮಾಡಬಹುದು. ಮತ್ತೇಕೆ ತಡ!!! ಇಷ್ಟು ಆಫರ್ ಜೊತೆಗೆ ಕೈಗೆ ಎಟಕುವ ದರದಲ್ಲಿ ಅತ್ಯುತ್ತಮ ಸ್ಮಾರ್ಟ್ ಫೋನ್ ದೊರೆಯುವಾಗ ಮಿಸ್ ಮಾಡದೇ ಈ ಆಫರ್ ನಿಮ್ಮದಾಗಿಸಿಕೊಳ್ಳಿ.
