Bigg Boss-12 : ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ಮನೆಯಿಂದ ಸ್ಪರ್ಧಿಗಳು ಒಬ್ಬೊಬ್ಬರಾಗಿ ಎಲಿಮಿನೇಟ್ ಆಗುತ್ತಿದ್ದು ಇದೀಗ ಮಿಟ್ ವೀಕ್ ಎಲಿಮಿನೇಷನ್ ಗಳು ಕೂಡ ಆರಂಭವಾಗಿವೆ. ಅಂದಿಗೆ ಈ ವಾರ ಡಬಲ್ ಎಲಿಮಿನೇಷನ್ ಇದ್ದು ಪ್ರಬಲಸ್ಪರ್ಧಿಗಳಾದ ಸೂರಜ್ ಮತ್ತು ಮಾಳು ಅವರು ಮನೆಯಿಂದ ಹೊರ ಬಿದ್ದಿದ್ದಾರೆ.
ಇದೀಗ ಎಲಿಮಿನೇಟ್ ಆಗಿ ಹೊರಬಂದಿರುವ ಸೂರಜ್ ಮತ್ತು ಮಾಳು ಅವರನ್ನು ಕೆಲವು ಚಾನೆಲ್ ಗಳು ಸಂದರ್ಶನ ಮಾಡುತ್ತಿವೆ. ಸಂದರ್ಶನದ ವೇಳೆ ಮಾಳು ಅವರಿಗೆ ಗಿಲ್ಲಿಯವರು ಈ ಭಾರಿ ಬಿಗ್ ಬಾಸ್ ವಿನ್ ಆಗುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಗಿಲ್ಲಿ ಏನಾದರೂ ಬಿಗ್ ಬಾಸ್ ವಿನ್ ಆದ್ರೆ ನಾನು ಅದನ್ನು ಒಪ್ಪುವುದಿಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದಾರೆ.
ಹೌದು, ಮಾಳು ಅವರು ಗಿಲ್ಲಿ ಏನಾದರೂ ಬಿಗ್ ಬಾಸ್ ವಿನ್ನ ಆದರೆ ನಾನು ಒಪ್ಪುವುದಿಲ್ಲ. ಏಕೆಂದರೆ ಅವನಿಗಿಂತ ಹೆಚ್ಚಾಗಿ ನಾನು ಆಟ ಆಡಿಕೊಂಡು ಬಂದಿದ್ದೇನೆ. ನಾನು ಕೇವಲ ಎರಡು ವಾರ ಇರುತ್ತೇನೆ ಎಂದುಕೊಂಡು ಹೋಗಿದ್ದೆ. ಆದರೆ ಜನ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದರು. ಫೈನಲ್ ಲಿಸ್ಟ್ ಆಗುತ್ತೇನೆ ಅಂತ ಬಾರಿ ಆಸೆ ಇತ್ತು, ಆದರೆ ಅದಕ್ಕೂ ಮೊದಲು ನಾನು ಮನೆಯಿಂದ ಹೊರ ಬಂದೆ. ಇಲ್ಲಿಯವರೆಗೂ ಕರೆತಂದ ಜನ ಫೈನಲ್ ತನಕ ಕಳಿಸುವುದಿಲ್ಲ ಎಂದು ನಾನು ಹೇಗೆ ನಂಬಲಿ. ನಾನೇ ವಿನ್ ಆಗ್ತೀನಿ ಎಂಬ ತುಂಬಾ ನಂಬಿಕೆ ಇತ್ತು ಆ ಭರವಸೆ ಇತ್ತು ಎಂದು ಹೇಳಿದ್ದಾರೆ. ಅಲ್ಲದೆ ಒಂದು ವೇಳೆ ಮನೆಯೊಳಗಡೆ ನಾನು ಇದ್ದರೆ ಟಾಪ್ 5 ನಲ್ಲಿ ಮೊದಲ ಸ್ಥಾನ ನಾನೇ ಇರುತ್ತಿದ್ದೆ ಎಂದು ಹೇಳಿದ್ದಾರೆ.
