Hariprriya -Vasishta Simha : ಇತ್ತೀಚೆಗೆ ಮೈಸೂರಿನಲ್ಲಿ ವಿವಾಹ(Marriage) ನೆರವೇರಿಸಿಕೊಂಡಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ (Hariprriya -Vasishta Simha )ಜೋಡಿ ಇದೀಗ ಗುಡ್‌ನ್ಯೂಸ್ ನೀಡಿದೆ. ಆ ವಿಚಾರವೇನು ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಸಂಪೂರ್ಣವಾಗಿ ಹೇಳಿಕೊಂಡಿಲ್ಲ. ಬದಲಿಗೆ ನೀವೇ ಊಹಿಸಿ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ ಹರಿಪ್ರಿಯಾ. ಹಾಗಾದರೆ, ಆ ಗುಡ್ ನ್ಯೂಸ್ ಏನಿರಬಹುದು? ಇನ್ನೇನಿದೆ: ಮದುವೆಯ ನಂತರ ಆಗೋದೆಲ್ಲ ಆಗಿ ಆಕೆ ಗರ್ಭಿಣಿ(Pregnant), ಇನ್ನೇನು ಮಗು ಬರಲಿದೆ ಎನ್ನುತ್ತಿದೆ ಆಕೆಯ ಅಭಿಮಾನಿ ಬಳಗ.
ಜನವರಿಯಲ್ಲಿ ಮದುವೆಯಾಗಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಎಲ್ಲೆಂದರಲ್ಲಿ ಒಟ್ಟಿಗೆ ಸುತ್ತಾಡುತ್ತ ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆಯೇ ನಟಿ ಹರಿಪ್ರಿಯಾ ಗುಡ್‌ನ್ಯೂಸ್‌ವೊಂದನ್ನು ಹೇಳಿಕೊಳ್ಳುವ ಕಾತರದಲ್ಲಿದ್ದು, ಆ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಅವರು ಸ್ವಾಗತಿಸಲಿರುವ ಮಗುವಾ ಅಥವಾ ಬೇರೇನೋ ಗುಡ್ ನ್ಯೂಸ್ ನಾ ? ಇನ್ನೂ ಸ್ಪಷ್ಟವಿಲ್ಲ.
ನನಗೆ ಗೊತ್ತು ನೀವೆಷ್ಟು ಕುತೂಹಲಿಗಳಾಗಿದ್ದೀರಿ ಎಂದು? ನಾನು ಘೋಷಿಸುವ ಮೊದಲು, ಆ ಗುಡ್ ನ್ಯೂಸ್ ಏನಿರಬಹುದೆಂದು ನೀವೇ ಊಹಿಸಿ ಎಂದಿದ್ದಾರೆ ಹರಿಪ್ರಿಯಾ. ಹಾಗಂದು ಹುಳ ಬಿಟ್ಟ ಆಕೆ ಗಂಡನ ಜತೆ ವಿಸ್ತರಿತ ಹನಿಮೂನ್ ಸವಿಯುತ್ತಿದ್ದಾಳೆ.
ಹರಿಪ್ರಿಯಾ ಅವರ ಪೋಸ್ಟ್ ನೋಡಿದ್ದೇ ತಡ ಅವರ ಅಭಿಮಾನಿಗಳು ಬಗೆಬಗೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ, ಇನ್ನೇನು ಶೀಘ್ರದಲ್ಲಿ ಅವರೇ ಘೋಷಣೆ ಮಾಡಲಿದ್ದಾರೆ ಎನ್ನುವುದು ಒಂದು ಊಹೆ.
ಇದನ್ನೂ ಓದಿ : ಮರಾಠಿ ಹುಡುಗಿಯಾಗಿ ಚೆಲ್ಲಿ ಹೋದ ರಶ್ಮಿಕಾ ಮಂದಣ್ಣಳ ಅಗಾಧ ಸೌಂದರ್ಯ !
