Home » Radhika Pandit: ಟಾಕ್ಸಿಕ್ ಟೀಸರ್‌ನಲ್ಲಿ ಹಸಿ ಬಿಸಿ ದೃಶ್ಯ- ರಾಧಿಕಾ ಪಂಡಿತ್ ಹೇಳಿದ್ದೇನು?

Radhika Pandit: ಟಾಕ್ಸಿಕ್ ಟೀಸರ್‌ನಲ್ಲಿ ಹಸಿ ಬಿಸಿ ದೃಶ್ಯ- ರಾಧಿಕಾ ಪಂಡಿತ್ ಹೇಳಿದ್ದೇನು?

0 comments

 

Radhika Pandit : ಟಾಕ್ಸಿಕ್ ಸಿನಿಮಾದ ಟೀಸರ್ ರಿಲೀಸ್ ಆಗಿ ಇಡೀ ಭಾರತೀಯ ಚಿತ್ರರಂಗವನ್ನೇ ಅಲುಗಾಡಿಸಿ ಬಿಟ್ಟಿದೆ. ಇದೇ ಮೊದಲ ಬಾರಿಗೆ ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ನಟ ಯಶ್‌ ಪಾತ್ರವನ್ನು ಪರಿಚಯಿಸಿರುವ 2.51 ನಿಮಿಷಗಳ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು ದಂಗಾಗಿದ್ದಾರೆ. ವಿಡಿಯೊ ಬಿಡುಗಡೆಯಾಗುತ್ತಿದ್ದಂತೆ ಹಸಿಬಿಸಿ ದೃಶ್ಯವೊಂದು ಕಾಣಿಸಿದೆ. ಈ ಬೆನ್ನಲ್ಲೇ ಯಶ್ ಅವರ ಧರ್ಮಪತ್ನಿ ಹಾಗೂ ನಟಿ ರಾಧಿಕಾ ಪಂಡಿತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.

 

ಅಸಲಿಗೆ ರಾಧಿಕಾ ಪಂಡಿತ್‌ ಅವರು ತಮ್ಮ ಪತಿ ಯಶ್‌ ಅವರ ಟಾಕ್ಸಿಕ್‌ ಸಿನಿಮಾದಲ್ಲಿನ ಈ ಹಸಿಬಿಸಿ ದೃಶ್ಯಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಯಶ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ತಮ್ಮ ಕುಟುಂಬದ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

 

ಆದರೆ ರಾಧಿಕಾ ಪಂಡಿತ್‌ ಅವರ ಹಳೆಯ ವಿಡಿಯೋಗಳು ವೈರಲ್‌ ಆಗಿವೆ. ವಿಶೇಷವಾಗಿ ಯಶ್‌-ರಾಧಿಕಾ ಜೋಡಿ ಒಟ್ಟಿಗೆ ನಟಿಸಿದ್ದ ‘ಮಿಸ್ಟರ್‌ ಅಂಡ್‌ ಮಿಸಸ್‌ ರಾಮಾಚಾರಿ’ ಸಿನಿಮಾದ ಕೆಲವು ದೃಶ್ಯಗಳನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ಆ ಸಿನಿಮಾದಲ್ಲಿ ಯಶ್‌ ಅವರಿಗೆ ರಾಧಿಕಾ ಪಂಡಿತ್‌ ಕೋಪಗೊಂಡು ಬೈಯುವ, ತರಾಟೆಗೆ ತೆಗೆದುಕೊಳ್ಳುವ ದೃಶ್ಯಗಳನ್ನು ಈಗ ‘ಟಾಕ್ಸಿಕ್‌’ ಟೀಸರ್‌ನ ಹಸಿಬಿಸಿ ದೃಶ್ಯಗಳಿಗೆ ಹೋಲಿಸಿ ಕಾಮಿಡಿ ಟ್ರೋಲ್‌ಗಳಾಗಿ ಮಾಡಲಾಗಿದೆ. ttps://x.com/i/status/2009257517528867063

You may also like