Home » Sandalwood : ಒಂದು ವಾರಕ್ಕೆ ‘ಮಾರ್ಕ್’ & ’45’ ಗಳಿಸಿದ್ದೆಷ್ಟು?

Sandalwood : ಒಂದು ವಾರಕ್ಕೆ ‘ಮಾರ್ಕ್’ & ’45’ ಗಳಿಸಿದ್ದೆಷ್ಟು?

0 comments

Sandalwood :  ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ’45’ ಹಾಗೂ ‘ಮಾರ್ಕ್’ ಸಿನಿಮಾ (Mark Movie) ತೆರೆಗೆ (ಡಿಸೆಂಬರ್ 25) ಬಂದವು. ಇದೀಗ ಈ ಚಿತ್ರಗಳು ರಿಲೀಸ್ ಆಗಿ ಒಂದು ವಾರ ಕಳೆದಿದೆ. ಹಾಗಿದ್ದರೆ ಎರಡು ಚಿತ್ರಗಳು ಕೇವಲ ನಾಲ್ಕು ದಿನದಲ್ಲಿ ಎಷ್ಟು ಗಳಿಕೆ ಮಾಡಿದೆ ನೋಡೋಣ ಬನ್ನಿ.

ಮಾರ್ಕ್ ಸಿನಿಮಾ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿದೆ. ವಿಜಯ್ ಕಾರ್ತಿಕೇಯ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ‘ಮಾರ್ಕ್’ ಶೇಡ್​​ನಲ್ಲಿಯೇ ಮೂಡಿ ಬಂದಿದೆ ಎಂಬ ಮಾತಿದೆ. ಈ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ನಾಲ್ಕು ದಿನಕ್ಕೆ ಚಿತ್ರ 35 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ತಂಡ ಮಾಹಿತಿ ನೀಡಿತ್ತು. ಇದಾದ ಬಳಿಕ ಸಿನಿಮಾ ನಿತ್ಯವೂ ಒಂದು ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ. ‘ಮಾರ್ಕ್’ ಸಿನಿಮಾದ ಗಳಿಕೆ 40 ಕೊಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಸಿನಿಮಾ ರಿಲೀಸ್ ಆಗಿ ವಾರ ಕಳೆದ ಹಿನ್ನೆಲೆಯಲ್ಲಿ ಚಿತ್ರತಂಡ ಗಳಿಕೆ ಬಗ್ಗೆ ಅಧಿಕೃತ ಮಾಹಿತಿ ನೀಡುವ ಸಾಧ್ಯತೆ ಇದೆ.

’45’ ಸಿನಿಮಾಗೆ ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ, ಶಿವರಾಜ್​ಕುಮಾರ್, ರಾಜ್ ಬಿ. ಶೆಟ್ಟಿ ನಟಿಸಿದ್ದಾರೆ. sacnilk ಈ ಬಗ್ಗೆ ವರದಿ ಮಾಡಿದೆ. ಈ ವರದಿ ಪ್ರಕಾರ ಸಿನಿಮಾದ ಗ್ರಾಸ್ ಕಲೆಕ್ಷನ್ 15 ಕೋಟಿ ರೂಪಾಯಿ ದಾಟಿದೆ ಎನ್ನಾಗಿದೆ. ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಕ್ಕರೆ ಅಭಿಮಾನಿಗಳಿಗೂ ಸ್ಪಷ್ಟತೆ ಸಿಕ್ಕಂತಾಗುತ್ತದೆ.

You may also like